AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant: ಫಿಟ್ನೆಸ್ ಬಗ್ಗೆ ಟ್ರೋಲ್ ಮಾಡುವವರೇ ಇದನ್ನ ನೋಡಿ: ಪಲ್ಟಿ ಹೊಡೆದು ಶತಕ ಆಚರಿಸಿದ ರಿಷಭ್ ಪಂತ್

LSG vs RCB IPL 2025: ಐಪಿಎಲ್ 2025 ರಲ್ಲಿ ರಿಷಭ್ ಪಂತ್ ತಮ್ಮ ಕೊನೆಯ ಪಂದ್ಯದಲ್ಲಿ ಚೊಚ್ಚಲ ಅದ್ಭುತ ಶತಕ ಗಳಿಸಿದರು. ಆರಂಭಿಕ ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದ ನಂತರ, ಪಂತ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 54 ಎಸೆತಗಳಲ್ಲಿ ಶತಕ ಗಳಿಸಿದರು. ಶತಕ ಸಿಡಿಸಿದ ನಂತರ ರಿಷಭ್ ಪಂತ್ ಅವರ ಸೆಲೆಬ್ರೇಷನ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Rishabh Pant: ಫಿಟ್ನೆಸ್ ಬಗ್ಗೆ ಟ್ರೋಲ್ ಮಾಡುವವರೇ ಇದನ್ನ ನೋಡಿ: ಪಲ್ಟಿ ಹೊಡೆದು ಶತಕ ಆಚರಿಸಿದ ರಿಷಭ್ ಪಂತ್
Rishabh Pant Century Celebration
Vinay Bhat
|

Updated on: May 27, 2025 | 10:14 PM

Share

ಬೆಂಗಳೂರು (ಮೇ. 27): ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ರಿಷಭ್ ಪಂತ್ (Rishabh Pant) ಶತಕ ಬಾರಿಸಿದ್ದಾರೆ. ಈ ಋತುವಿನ ಮೊದಲ 13 ಪಂದ್ಯಗಳಲ್ಲಿ ಕೇವಲ 151 ರನ್ ಗಳಿಸಿದ್ದ ರಿಷಭ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂತ್ 54 ಎಸೆತಗಳಲ್ಲಿ ಶತಕ ಪೂರೈಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ನಂತರ, ಪಂತ್ ಲೀಲಾಜಾಲವಾಗಿ ಬ್ಯಾಟ್ ಬೀಸಿ, ಆರ್​ಸಿಬಿ ಬೌಲರ್​ಗಳ ಬೆಂಡೆತ್ತಿದರು. 2016 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ನಂತರ ಲೀಗ್‌ನಲ್ಲಿ ಪಂತ್ ಗಳಿಸಿದ ಎರಡನೇ ಶತಕ ಇದಾಗಿದೆ.

ಶತಕ ಬಾರಿಸಿದ ನಂತರ ಟ್ರೋಲಿಗರಿಗೆ ಉತ್ತರ ಕೊಟ್ಟ ಪಂತ್

ಭುವನೇಶ್ವರ್ ಕುಮಾರ್ ಎಸೆದ 18ನೇ ಓವರ್‌ನಲ್ಲಿ ಬೌಂಡರಿ ಬಾರಿಸುವ ಮೂಲಕ ರಿಷಭ್ ಪಂತ್ ಶತಕ ಪೂರೈಸಿದರು. ಶತಕ ಗಳಿಸಿದ ನಂತರ ಅವರು ತಮ್ಮ ಬ್ಯಾಟ್ ಅನ್ನು ಪಕ್ಕಕ್ಕೆ ಇಟ್ಟು, ತನ್ನ ಕೈಗವಸುಗಳು ಮತ್ತು ಹೆಲ್ಮೆಟ್ ಅನ್ನು ಸಹ ತೆಗೆದರು. ಇದಾದ ನಂತರ ಅವರು ಸೋಮರ್‌ಸಾಲ್ಟ್ ಅನ್ನು ಅನ್ವಯಿಸಿದರು. ಪಂತ್ ಅವರು ಫಿಟ್ನೆಸ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟ್ರೋಲ್ ಆಗಿದ್ದಾರೆ. ಆದರೆ ಈ ಶತಕ ಗಳಿಸಿದ ನಂತರ, ಅವರು ಪಲ್ಟಿ ಹೊಡೆಯುವ ಮೂಲಕ ತಮ್ಮ ಫಿಟ್ನೆಸ್‌ಗೆ ಪುರಾವೆ ನೀಡಿದರು. ಇದರ ವಿಡಿಯೋ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ರಿಷಬ್ ಪಂತ್ ಫಾರ್ಮ್​ಗೆ ಮರಳಲು ನೆರವಾದ ಆರ್​ಸಿಬಿ ಬೌಲರ್ಸ್​
Image
ತಂಡದಲ್ಲಿದ್ದರೂ ಹೇಜಲ್‌ವುಡ್ ಕಣಕ್ಕಿಳಿಯದಿರಲು ಕಾರಣವೇನು?
Image
ಮುಂಬೈ ತಂಡದಿಂದ ಹೊರಬಿದ್ದ ಮೂವರು ವಿದೇಶಿ ಆಟಗಾರರು
Image
ಲಕ್ನೋ ವಿರುದ್ಧ ಗೆದ್ದ ಆರ್​ಸಿಬಿ

ಅಜೇಯ 118 ರನ್ ಗಳಿಸಿದ ರಿಷಭ್ ಪಂತ್

ಕೊನೆಯವರೆಗೂ ಯಾವುದೇ ಆರ್‌ಸಿಬಿ ಬೌಲರ್ ರಿಷಭ್ ಪಂತ್ ಅವರನ್ನು ಔಟ್ ಮಾಡಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್‌ನಿಂದ ಅಜೇಯ 118 ರನ್‌ಗಳ ಇನ್ನಿಂಗ್ಸ್ ಬಂದಿತು. ಭಾರತೀಯ ಟೆಸ್ಟ್ ತಂಡದ ಹೊಸ ಉಪನಾಯಕ ಪಂತ್ 61 ಎಸೆತಗಳ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. ಈ ಬಾರಿಯ ಐಪಿಎಲ್ 2025 ರಿಷಭ್ ಪಂತ್‌ಗೆ ಸಾಕಷ್ಟು ನಿರಾಶಾದಾಯಕವಾಗಿತ್ತು. ಈ ಋತುವಿನ ಮೊದಲ 13 ಪಂದ್ಯಗಳಲ್ಲಿ ಅವರು ಗಳಿಸಿದ್ದು ಕೇವಲ 151 ರನ್‌ಗಳು. ಆದರೆ ಈಗ ಅವರು ಶತಕದೊಂದಿಗೆ ಋತುವನ್ನು ಕೊನೆಗೊಳಿಸಿದ್ದಾರೆ. ಈ ಪಂದ್ಯದಲ್ಲಿ ಲಕ್ನೋ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿತು. ಮಿಚೆಲ್ ಮಾರ್ಶ್ 67 ರನ್​ಗಳ ಕೊಡುಗೆ ನೀಡಿದರು.

IPL 2025: ಇಡೀ ಸೀಸನ್ ಸುಮ್ಮನಿದ್ದು ಆರ್​ಸಿಬಿ ವಿರುದ್ಧ ಅಬ್ಬರದ ಶತಕ ಸಿಡಿಸಿದ ರಿಷಬ್ ಪಂತ್

ಟೀಮ್ ಇಂಡಿಯಾಗೆ ಸಿಹಿ ಸುದ್ದಿ

ರಿಷಭ್ ಪಂತ್ ಬ್ಯಾಟ್ ನಿಂದ ಬಂದಿರುವ ಈ ರನ್ ಗಳು ಟೀಮ್ ಇಂಡಿಯಾಗೆ ಒಳ್ಳೆಯ ಸುದ್ದಿ. ಭಾರತ ತಂಡ ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಎರಡೂ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿಯ ನಂತರ ಅವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂತ್ ಅವರು ಫಾರ್ಮ್‌ಗೆ ಬಂದಿರುವುದು ಭಾರತಕ್ಕೆ ಒಳ್ಳೆಯ ಸುದ್ದಿ ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ