IPL 2025: ಎದುರಾಳಿಗಳ ಬಲಾಬಲ ತಿಳಿಯಲು ಯುವರಾಜ್ ಹಿಂದೆ ಬಿದ್ದ ಗುಜರಾತ್
Yuvraj Singh Joins Gujarat Titans: ಗುಜರಾತ್ ಟೈಟನ್ಸ್ ತಂಡವು ಐಪಿಎಲ್ ಪ್ಲೇಆಫ್ ಸುತ್ತು ಆರಂಭಕ್ಕೂ ಮುನ್ನ ಅನುಭವಿ ಆಟಗಾರ ಯುವರಾಜ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ತಮ್ಮ ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಸೋತ ಗುಜರಾತ್, ಯುವರಾಜ್ ಅವರ ಅನುಭವ ಮತ್ತು ವಿವಿಧ ತಂಡಗಳ ಬಗ್ಗೆ ಇರುವ ಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಈ ಸೇರ್ಪಡೆಯು ಪ್ಲೇಆಫ್‌ನಲ್ಲಿ ಅವರ ಸಾಧ್ಯತೆಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಐಪಿಎಲ್ 2025 (IPL 2025) ರ ಪ್ಲೇಆಫ್ ಸುತ್ತು ಆರಂಭಕ್ಕೂ ಮೊದಲು ಗುಜರಾತ್ ಟೈಟನ್ಸ್ (Gujarat Titans) ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ರನ್ನು (Yuvraj Singh) ತನ್ನ ತಂಡಕ್ಕೆ ಸೇರಿಸಿಕೊಂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಐಪಿಎಲ್‌ನಲ್ಲಿ ಹಲವು ತಂಡಗಳಿಗೆ ಆಡಿರುವ ಯುವರಾಜ್ ಸಿಂಗ್ ಇದೀಗ ಗುಜರಾತ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಯುವರಾಜ್ ಸಿಂಗ್ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಈ ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ತಿಳಿದಿವೆ. ಹೀಗಾಗಿ ಗುಜರಾತ್ ಪ್ಲೇಆಫ್ ಪಂದ್ಯಗಳಲ್ಲಿ ಯುವರಾಜ್ ಅವರ ಅನುಭವವನ್ನು ಬಳಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿಯೇ ತಂಡದ ಕೋಚ್ ಆಶಿಶ್ ನೆಹ್ರಾ ಯುವರಾಜ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಶುಭಮನ್ ಗಿಲ್ ಜೊತೆ ಯುವರಾಜ್ ಸಿಂಗ್ ಕಾಣಿಸಿಕೊಂಡಿರುವುದು ಈ ಸುದ್ದಿಗೆ ಪುಷ್ಠಿ ನೀಡಿದೆ.
ಯುವಿಗೆ ಯಾವ ಪಾತ್ರ ಸಿಗಲಿದೆ?
ಟಿ20ಕ್ರಿಕೆಟ್ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ್ದ ಯುವರಾಜ್ ಸಿಂಗ್, ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದಾರೆ. ಈ ಸೀಸನ್‌ನಲ್ಲಿ ಮೂರೂ ತಂಡಗಳು ಪ್ಲೇಆಫ್‌ಗೆ ತಲುಪಿವೆ. ಇಂತಹ ಪರಿಸ್ಥಿತಿಯಲ್ಲಿ, ಗುಜರಾತ್ ಟೈಟನ್ಸ್ ತಂಡವು ಯುವರಾಜ್ ಸಿಂಗ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡು ಈ ಮೂರು ತಂಡಗಳ ಶಕ್ತಿ ಮತ್ತು ದೌರ್ಬಲ್ಯಗಳನ್ನು ತಿಳಿದುಕೊಳ್ಳಲು ಯೋಜನೆ ರೂಪಿಸಿದೆ. ಗುಜರಾತ್ ಟೈಟನ್ಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಯುವರಾಜ್ ಸಿಂಗ್ ಮತ್ತು ಶುಭ್ಮನ್ ಗಿಲ್ ಅವರ ಫೋಟೋವನ್ನು ಪೋಸ್ಟ್ ಮಾಡಿದೆ. ಪ್ಲೇಆಫ್‌ಗೂ ಮುನ್ನ, ಗುಜರಾತ್ ಟೈಟನ್ಸ್ ಲೀಗ್ ಪಂದ್ಯಗಳಲ್ಲಿ ಸತತ ಎರಡು ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು. ಇದಾದ ನಂತರ, ತಂಡದ ಕೋಚ್ ಆಶಿಶ್ ನೆಹ್ರಾ, ಯುವರಾಜ್ ಸಿಂಗ್ರನ್ನು ತಂಡಕ್ಕೆ ಕರೆತಂದಿದ್ದಾರೆ ಎನ್ನಲಾಗುತ್ತಿದೆ.
Ki haal chaal, #TitansFAM? 😍 pic.twitter.com/yhnPEZTdJr
— Gujarat Titans (@gujarat_titans) May 26, 2025
ಕಳೆದ ಎರಡು ಪಂದ್ಯಗಳಲ್ಲಿ ಜಿಟಿಗೆ ಸೋಲು
ಗುಜರಾತ್ ಟೈಟನ್ಸ್ ತಂಡವು, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲನ್ನು ಅನುಭವಿಸಿತು. ಲಕ್ನೋ ಸೂಪರ್ ಜೈಂಟ್ಸ್ ತಂಡವು ಜಿಟಿ ತಂಡವನ್ನು 33 ರನ್‌ಗಳಿಂದ ಸೋಲಿಸಿದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಗುಜರಾತ್ ತಂಡವನ್ನು 83 ರನ್‌ಗಳಿಂದ ಸೋಲಿಸಿತು. ಈ ಎರಡು ಸೋಲುಗಳ ನಂತರ, ತಂಡದ ಆಡಳಿತ ಮಂಡಳಿಗೆ ತಲೆನೋವು ಶುರುವಾಗಿದೆ. ಹೀಗಾಗಿ ಪ್ಲೇಆಫ್‌ಗೂ ಮುನ್ನ ತಂಡದ ಎಲ್ಲಾ ದೌರ್ಬಲ್ಯಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿರುವ ಮ್ಯಾನೇಜ್ಮೆಂಟ್ ಇದನ್ನು ಗಮನದಲ್ಲಿಟ್ಟುಕೊಂಡು ಯುವರಾಜ್ ಸಿಂಗ್ಗೆ ಆಹ್ವಾನ ನೀಡಿದೆ.
IPL 2025: 83 ರನ್‌ಗಳಿಂದ ಸೋತ ಗುಜರಾತ್; ಆರ್ಸಿಬಿಗಿದೆ ಅಗ್ರಸ್ಥಾನಕ್ಕೇರುವ ಅವಕಾಶ..!
ಆದರೆ, ಪ್ಲೇಆಫ್‌ನಲ್ಲಿ ಗುಜರಾತ್ ಯಾವ ತಂಡವನ್ನು ಎದುರಿಸಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೇ 27, ಮಂಗಳವಾರ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಕೊನೆಯ ಲೀಗ್ ಪಂದ್ಯದ ನಂತರವಷ್ಟೇ, ಗುಜರಾತ್ ಟೈಟನ್ಸ್ ಟಾಪ್ -2 ರಲ್ಲಿ ಉಳಿಯುತ್ತದೆಯೇ ಅಥವಾ ಒಂದು ಸ್ಥಾನ ಕೆಳಗೆ ಜಾರಿದೆಯೇ ಎಂಬುದು ತಿಳಿಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Tue, 27 May 25
