AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat Titans

Gujarat Titans

Gujarat Titans

 

 

 

Gujarat Titans News, GT Team, Gujarat Titans Matches, Gujarat Titans Schedule, Gujarat Titans Photos, Gujarat Titans Videos, Gujarat Titans Web Stories, GT Matches, Gujarat Titans Team News, Gujarat Titans Cricket News

ಸಂಭ್ರಮಾಚರಣೆ ಭರದಲ್ಲಿ RCB ಫ್ಯಾನ್ಸ್ ಹುಚ್ಚಾಟ, ಲಾರಿ ಏರಿ ಮೈಮೇಲೆ ಪಟಾಕಿ ಹಾಕೊಂಡು ಮೊಂಡಾಟ: ಲಾಠಿ ಚಾರ್ಜ್

ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಆರ್‌ಸಿಬಿ ಸತತ 2ನೇ ಬಾರಿ ಐಪಿಎಲ್ ಮುಡಿಗೇರಿಸಿಕೊಂಡ ಖುಷಿಯಲ್ಲಿ ಬೆಂಗಳೂರು, ಮಂಡ್ಯ, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಲವೆಡೆ ಅಭಿಮಾನಿಗಳ ಹುಚ್ಚಾಟ ಮಿತಿಮೀರಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಅಭಿಮಾನಿಗಳು ನಡುರಸ್ತೆಯಲ್ಲಿ ಲಾರಿ ಏರಿ, ಪಟಾಕಿ ಎಸೆದು ಹುಚ್ಚಾಟ ಮೆರೆದ ಘಟನೆ ಮಂಡ್ಯ, ಬಳ್ಳಾರಿಯಲ್ಲಿ ನಡೆದಿದೆ.

IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್​ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ

RCB Wins IPL 2026: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ ಆರ್​ಸಿಬಿ 2026ರ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ. ಕಳೆದ ಆವೃತ್ತಿಯಲ್ಲಿ ಟ್ರೋಫಿ ಬರ ನೀಗಿಸಿದ್ದ ಆರ್​ಸಿಬಿ, ಈ ಬಾರಿ ಗುಜರಾತ್ ತಂಡವನ್ನು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮಣಿಸಿ ಸತತ ಎರಡನೇ ಬಾರಿ ಕಪ್ ಗೆದ್ದು ಅಭಿಮಾನಿಗಳಿಗೆ ಡಬಲ್ ಸಂಭ್ರಮ ತಂದಿದೆ. 17 ವರ್ಷಗಳ ಕಾಯುವಿಕೆ ನಂತರ, ಈಗ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡು ಇತಿಹಾಸ ನಿರ್ಮಿಸಿದೆ.

RCB vs GT Final: ಫೈನಲ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್; ಸಿಎಸ್​​ಕೆ ದಾಖಲೆ ಮುರಿದ ಆರ್​ಸಿಬಿ

RCB's Record-Breaking Start in 2026 IPL Final: 2026 ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ನೀಡಿದ 156 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ, ವಿರಾಟ್ ಕೊಹ್ಲಿ ಮತ್ತು ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಆರಂಭದಿಂದ ಐತಿಹಾಸಿಕ ದಾಖಲೆ ಬರೆಯಿತು. ಕೇವಲ 3.3 ಓವರ್‌ಗಳಲ್ಲಿ 50 ರನ್ ಪೂರೈಸುವ ಮೂಲಕ ಐಪಿಎಲ್ ಫೈನಲ್ ಇತಿಹಾಸದಲ್ಲಿ ಅತಿ ವೇಗದ 50 ರನ್ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕೊಹ್ಲಿ-ಅಯ್ಯರ್ 27 ಎಸೆತಗಳಲ್ಲಿ 62 ರನ್ ಜೊತೆಯಾಟ ನೀಡಿದರು.

RCB vs GT Final: ಕೃನಾಲ್ ಪಾಂಡ್ಯ ಬೌಲಿಂಗ್​ಗೆ ಕ್ರಿಕೆಟ್ ದೇವರೂ ಫಿದಾ..! ಏನಂದ್ರು ನೋಡಿ

Krunal Pandya's Brilliance: ಅಹಮದಾಬಾದ್‌ನಲ್ಲಿ ನಡೆದ ಐಪಿಎಲ್ 2026 ಫೈನಲ್‌ನಲ್ಲಿ ಆರ್‌ಸಿಬಿ ಬೌಲರ್‌ಗಳು ಗುಜರಾತ್ ಟೈಟಾನ್ಸ್ ತಂಡವನ್ನು 156 ರನ್‌ಗಳಿಗೆ ಕಟ್ಟಿಹಾಕಿದರು. ಕೃನಾಲ್ ಪಾಂಡ್ಯ ತಮ್ಮ ಜಾಣ್ಮೆಯ ಸ್ಪಿನ್ ಮೂಲಕ ಜೋಸ್ ಬಟ್ಲರ್ ಅವರನ್ನು ಸ್ಟಂಪ್ ಮಾಡಿದರು. ಈ ಅದ್ಭುತ ಬೌಲಿಂಗ್‌ಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಬೌಲಿಂಗ್ ಪ್ರದರ್ಶನ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.

RCB vs GT Final: ಪವರ್​ ಪ್ಲೇನಲ್ಲೇ ಗುಜರಾತ್ ಬ್ಯಾಟಿಂಗ್‌ ಬೆನ್ನೆಲುಬು ಮುರಿದ ಆರ್​ಸಿಬಿ

RCB vs GT Final: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್​ಸಿಬಿ vs ಗುಜರಾತ್ ನಡುವಿನ ಫೈನಲ್ ಪಂದ್ಯದಲ್ಲಿ, ಟಾಸ್ ಗೆದ್ದ RCB ಮೊದಲು ಬೌಲಿಂಗ್ ಆಯ್ದುಕೊಂಡಿತು. ಗುಜರಾತ್ ಟೈಟಾನ್ಸ್ ಪವರ್‌ಪ್ಲೇನಲ್ಲೇ ತನ್ನ ಪ್ರಮುಖ ಬ್ಯಾಟ್ಸ್‌ಮನ್‌ಗಳಾದ ಶುಭ್ಮನ್ ಗಿಲ್ ಮತ್ತು ಸಾಯಿ ಸುದರ್ಶನ್ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೇವಲ 26 ರನ್‌ಗಳಿಗೆ 2 ವಿಕೆಟ್‌ಗಳು ಪತನಗೊಂಡ ಕಾರಣ, ಗುಜರಾತ್ ಪವರ್‌ಪ್ಲೇ ಅಂತ್ಯಕ್ಕೆ 45 ರನ್ ಗಳಿಸಿ, ಸಂಕಷ್ಟದಲ್ಲಿದೆ.

IPL 2026 Final: ಟಾಸ್ ಗೆದ್ದ ಆರ್​ಸಿಬಿ, ಫೈನಲ್ ಪಂದ್ಯ ಆಡದ ಸಾಲ್ಟ್; ಗುಜರಾತ್ ತಂಡದಲ್ಲೂ ಬದಲಾವಣೆ

RCB vs GT IPL Final 2026: ಅಹಮದಾಬಾದ್‌ನಲ್ಲಿ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಐಪಿಎಲ್ ಫೈನಲ್ ನಡೆಯುತ್ತಿದೆ. ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಲು ಬೆಂಗಳೂರು ಸಿದ್ಧವಾಗಿದೆ. ಟಾಸ್ ಗೆದ್ದ ಆರ್​ಸಿಬಿ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಫಿಲ್ ಸಾಲ್ಟ್ ಇಲ್ಲದೆ ಆರ್​ಸಿಬಿ ಕಣಕ್ಕಿಳಿದಿದ್ದು, ಗುಜರಾತ್ ತಂಡದಲ್ಲಿ ಸಾಯಿ ಕಿಶೋರ್ ಬದಲಿಗೆ ಅರ್ಷದ್ ಖಾನ್ ಸೇರಿಕೊಂಡಿದ್ದಾರೆ.

IPL 2026: ಐಪಿಎಲ್ 2026 ರ ಸಮಾರೋಪ ಸಮಾರಂಭಕ್ಕೆ ಬಿಸಿಸಿಐ ಭರ್ಜರಿ ತಯಾರಿ

IPL 2026 Closing Ceremony: ಮೇ 31, 2026 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ 19ನೇ ಐಪಿಎಲ್ ಫೈನಲ್ ನಡೆಯಲಿದೆ. ಈ ಮಹತ್ವದ ಪಂದ್ಯದ ನಂತರ ಭವ್ಯ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದ್ದು, ಕೈಲಾಶ್ ಖೇರ್, ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಸೇರಿದಂತೆ ಅನೇಕ ತಾರೆಯರು ಭಾಗವಹಿಸುವ ನಿರೀಕ್ಷೆಯಿದೆ. ಲೇಸರ್, ಸಂಗೀತ ಮತ್ತು ಸಿಡಿಮದ್ದು ಪ್ರದರ್ಶನಗಳು ಕ್ರೀಡಾಭಿಮಾನಿಗಳಿಗೆ ರೋಮಾಂಚನಕಾರಿ ಅನುಭವ ನೀಡಲಿವೆ.

IPL 2026 Final: ಮೋದಿ ಮೈದಾನದಲ್ಲಿ ಕೊಹ್ಲಿ- ಗಿಲ್ ದಾಖಲೆ ಹೇಗಿದೆ?

IPL 2026 Final RCB vs Gujarat: ಐಪಿಎಲ್ 2026 ಫೈನಲ್ ಇಂದು ಅಹಮದಾಬಾದ್‌ನಲ್ಲಿ ಆರ್‌ಸಿಬಿ ಮತ್ತು ಗುಜರಾತ್ ನಡುವೆ ನಡೆಯಲಿದೆ. ಎರಡೂ ತಂಡಗಳು ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶ ಹೊಂದಿವೆ. ವಿರಾಟ್ ಕೊಹ್ಲಿ ಮತ್ತು ಶುಭ್‌ಮನ್ ಗಿಲ್ ಪ್ರದರ್ಶನ ನಿರ್ಣಾಯಕವಾಗಿದ್ದು, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅವರ ಹಿಂದಿನ ದಾಖಲೆಗಳು ಕುತೂಹಲ ಮೂಡಿಸಿವೆ. ಯಾರು ಚಾಂಪಿಯನ್ ಆಗಲಿದ್ದಾರೆ ಕಾದುನೋಡೋಣ.

ಫೈನಲ್ ಪಂದ್ಯಕ್ಕೂ ಮುನ್ನ ಸಂಕಷ್ಟಕ್ಕೆ ಸಿಲುಕಿದ ಗುಜರಾತ್ ಟೈಟಾನ್ಸ್​!

IPL 2026 Final, Royal Challengers Bengaluru vs Gujarat Titans: ಇಂಡಿಯನ್ ಪ್ರೀಮಿಯರ್ ಲೀಗ್​ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಶುಭ್​ಮನ್ ಗಿಲ್​ ಪಡೆ ಸಂಕಷ್ಟಕ್ಕೆ ಸಿಲುಕಿದೆ.

IPL 2026 Final: ಫೈನಲ್ ಪಂದ್ಯ ರದ್ದಾದರೆ ಯಾರಿಗೆ ಸಿಗಲಿದೆ ಟ್ರೋಫಿ?

IPL 2026 Final: ಐಪಿಎಲ್ 2026 ಫೈನಲ್‌ನಲ್ಲಿ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಸೆಣಸಲಿವೆ. ಮಳೆಯಿಂದ ಪಂದ್ಯ ರದ್ದಾದರೆ ಯಾರಿಗೆ ಚಾಂಪಿಯನ್ ಪಟ್ಟ ಎಂಬ ಪ್ರಶ್ನೆ ಮೂಡಿದೆ. ಫೈನಲ್‌ಗೆ ಮೇ 31 ರಂದು ನಿಗದಿಯಾಗಿದ್ದು, ಜೂನ್ 1 ಮೀಸಲು ದಿನವಾಗಿ ನಿಗದಿಪಡಿಸಲಾಗಿದೆ. ಅಂದು ಸಹ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ, ಲೀಗ್ ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಈ ನಿಯಮದಂತೆ ಆರ್​ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಲಿದೆ.

IPL 2026 Final: ಅಹಮದಾಬಾದ್‌ ಪಿಚ್ ಯಾರಿಗೆ ಸಹಕಾರಿ? ಫೈನಲ್ ದಿನದಂದು ಹವಾಮಾನ ಹೇಗಿರಲಿದೆ?

RCB vs GT IPL 2026 Final: ಐಪಿಎಲ್ 2026 ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ. ಎರಡೂ ತಂಡಗಳು ತಮ್ಮ ಎರಡನೇ ಪ್ರಶಸ್ತಿಗಾಗಿ ಹೋರಾಡಲಿವೆ. ಬ್ಯಾಟಿಂಗ್ ಸ್ನೇಹಿ ಪಿಚ್ ಮತ್ತು ಉತ್ತಮ ಹವಾಮಾನವು ಹೆಚ್ಚಿನ ಸ್ಕೋರಿಂಗ್ ಪಂದ್ಯಕ್ಕೆ ವೇದಿಕೆ ಕಲ್ಪಿಸಿದೆ. ಇಬ್ಬನಿಯ ಕಾರಣದಿಂದ ಚೇಸಿಂಗ್ ತಂಡಕ್ಕೆ ಅನುಕೂಲವಾಗಬಹುದು.

IPL 2026 Final: ಆರ್​ಸಿಬಿ- ಗುಜರಾತ್ ನಡುವೆ ಫೈನಲ್ ಫೈಟ್; ಮುಖಾಮುಖಿ ದಾಖಲೆ ಹೇಗಿದೆ?

RCB vs GT Head-to-Head: 2026ರ ಐಪಿಎಲ್ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ರಶಸ್ತಿಗಾಗಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೆಣಸಲಿವೆ. ಉಭಯ ತಂಡಗಳು ಅಮೋಘ ಪ್ರದರ್ಶನ ನೀಡಿ ಫೈನಲ್ ತಲುಪಿವೆ. ಈ ಹೈವೋಲ್ಟೇಜ್ ಕದನದಲ್ಲಿ ಗೆಲ್ಲಲು ಎರಡೂ ತಂಡಗಳು ಸಜ್ಜಾಗಿವೆ. ಹಿಂದಿನ ಮುಖಾಮುಖಿ ಹಾಗೂ ಅಹಮದಾಬಾದ್ ದಾಖಲೆಗಳನ್ನು ಅವಲೋಕಿಸಿ, ಯಾವ ತಂಡ ಟ್ರೋಫಿ ಗೆಲ್ಲಲಿದೆ ಎಂಬುದು ಕುತೂಹಲ ಮೂಡಿಸಿದೆ.