AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಕ್ಸ್​ಗಳ ಸುರಿಮಳೆ… ಐಪಿಎಲ್​ನಲ್ಲಿ ಹೀನಾಯ ದಾಖಲೆ ಬರೆದ ರಶೀದ್ ಖಾನ್

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 18ನೇ ಆವೃತ್ತಿಯಲ್ಲಿ ರಶೀದ್ ಖಾನ್ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಈ ಕಳಪೆ ಪ್ರದರ್ಶನದೊಂದಿಗೆ ಹೀನಾಯ ದಾಖಲೆಯನ್ನು ಸಹ ಬರೆದಿದ್ದಾರೆ. ಅದು ಕೂಡ ಆರ್​ಸಿಬಿ ತಂಡದ ಮಾಜಿ ವೇಗಿ ಮೊಹಮ್ಮದ್ ಸಿರಾಜ್ ಹೆಸರಿನಲ್ಲಿದ್ದ ಹೀನಾಯ ದಾಖಲೆಯೊಂದನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಝಾಹಿರ್ ಯೂಸುಫ್
|

Updated on: Jun 01, 2025 | 10:32 AM

Share
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಶೀದ್ ಖಾನ್ (Rashid Khan) ಅತ್ಯಂತ ಕಳಪೆ ದಾಖಲೆ ಬರೆದಿದ್ದಾರೆ. ಅದು ಕೂಡ ಸಿಕ್ಸರ್ ಚಚ್ಚಿಸಿಕೊಳ್ಳುವ ಮೂಲಕ. ಅಂದರೆ ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್​ನಲ್ಲಿ ಅತ್ಯಧಿಕ ಸಿಕ್ಸರ್ ಹೊಡೆಸಿಕೊಂಡ ಬೌಲರ್ ಎಂಬ ಹೀನಾಯ ದಾಖಲೆಯೊಂದು ರಶೀದ್ ಖಾನ್ ಪಾಲಾಗಿದೆ.

1 / 5
ಐಪಿಎಲ್​ 2025ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ಓವರ್​ಗಳನ್ನು ಎಸೆದಿದ್ದ ರಶೀದ್ ಖಾನ್ ಒಟ್ಟು 31 ರನ್ ಬಿಟ್ಟುಕೊಟ್ಟಿದ್ದರು. ಈ 31 ರನ್​ಗಳಲ್ಲಿ 2 ಸಿಕ್ಸ್​ಗಳು ಒಳಗೊಂಡಿದ್ದವು. ಇದರೊಂದಿಗೆ ಐಪಿಎಲ್​ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಅನಗತ್ಯ ದಾಖಲೆಯು ರಶೀದ್ ಖಾನ್ ಪಾಲಾಯಿತು.

2 / 5
ಇದಕ್ಕೂ ಮುನ್ನ ಇಂತಹದೊಂದು ಕಳಪೆ ದಾಖಲೆ ಮೊಹಮ್ಮದ್ ಸಿರಾಜ್ ಹೆಸರಿನಲ್ಲಿತ್ತು. 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ಸಿರಾಜ್ ಒಟ್ಟು 22 ಸಿಕ್ಸ್​ಗಳನ್ನು ಹೊಡೆಸಿಕೊಂಡಿದ್ದರು. ಈ ಮೂಲಕ ಒಂದೇ ಸೀಸನ್​ನಲ್ಲಿ ಅತ್ಯಧಿಕ ಸಿಕ್ ಚಚ್ಚಿಸಿಕೊಂಡ ಬೌಲರ್ ಎನಿಸಿಕೊಂಡಿದ್ದರು.

3 / 5
ಇದೀಗ ಈ ದಾಖಲೆ ರಶೀದ್ ಖಾನ್ ಪಾಲಾಗಿದೆ. ಈ ಬಾರಿಯ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿದ ರಶೀದ್ ಖಾನ್ 15 ಪಂದ್ಯಗಳಿಂದ ಒಟ್ಟು 33 ಸಿಕ್ಸರ್​ಗಳನ್ನು ಹೊಡೆಸಿಕೊಂಡಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದ ಸೀಸನ್​ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಿಟ್ಟುಕೊಟ್ಟ ಬೌಲರ್ ಎಂಬ ಹೀನಾಯ ದಾಖಲೆಗೆ ಕೊರೊಳೊಡ್ಡಿದ್ದಾರೆ.

4 / 5
ಇನ್ನು ಈ ಬಾರಿಯ ಐಪಿಎಲ್​ನಲ್ಲಿ ರಶೀದ್ ಖಾನ್ ಅವರ ಪ್ರದರ್ಶನ ಕೂಡ ಅಷ್ಟಕಷ್ಟೇ. 15 ಇನಿಂಗ್ಸ್​ಗಳಲ್ಲಿ ಒಟ್ಟು 330 ಎಸೆತಗಳನ್ನು ಎಸೆದಿದ್ದ ರಶೀದ್ 514 ರನ್​ಗಳನ್ನು ನೀಡಿದ್ದಾರೆ. ಈ ವೇಳೆ ಪಡೆದಿರುವುದು ಕೇವಲ 9 ವಿಕೆಟ್​ಗಳು ಮಾತ್ರ. ಅಂದರೆ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಶೀದ್ ಖಾನ್ 10 ಕ್ಕಿಂತ ಕಡಿಮೆ ವಿಕೆಟ್ ಪಡೆದಿದ್ದಾರೆ. ಅದು ಕೂಡ ಪ್ರತಿ ಓವರ್​ಗೆ 9.34 ರನ್ ನೀಡುವ ಮೂಲಕ ಎಂಬುದೇ ಅಚ್ಚರಿ.

5 / 5
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?

ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ