IPL 2025: ಗುಜರಾತ್ ಟೈಟನ್ಸ್ ಸೋಲುತ್ತಿದ್ದಂತೆ ಕಣ್ಣೀರಿಟ್ಟ ಆಶಿಶ್ ನೆಹ್ರಾ ಮಗ
Gujarat Titans Eliminated: ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 20 ರನ್‌ಗಳ ಅಂತರದಿಂದ ಗುಜರಾತ್ ಟೈಟನ್ಸ್ ವಿರುದ್ಧ ಜಯಗಳಿಸಿತು. ಮುಂಬೈ ನೀಡಿದ 229 ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾದ ಗುಜರಾತ್ ತನ್ನ ಪ್ರಯಾಣ ಮುಗಿಸಿತು. ಆಶಿಶ್ ನೆಹ್ರಾ ಅವರ ಮಗ ಕಣ್ಣೀರಿಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತ್‌ನ ಸೋಲು ಅಭಿಮಾನಿಗಳಿಗೆ ಆಘಾತವನ್ನುಂಟುಮಾಡಿದೆ.

ಐಪಿಎಲ್ 2025 (IPL 2025) ರ ಮೇ 30 ರಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ (GT vs MI) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಮುಂಬೈ 20 ರನ್‌ಗಳಿಂದ ಗೆದ್ದು ಕ್ವಾಲಿಫೈಯರ್ 2 ಕ್ಕೆ ಅರ್ಹತೆ ಪಡೆದರೆ, ಇತ್ತ ಗುಜರಾತ್ ಎಲಿಮಿನೇಟರ್ನಲ್ಲೇ ತನ್ನ ಪ್ರಯಾಣ ಮುಗಿಸಿತು. ಮುಂಬೈ ನೀಡಿದ 229 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಪರ ತಂಡದ ಬ್ಯಾಟ್ಸ್‌ಮನ್‌ಗಳು ಅದ್ಭುತ ಪ್ರದರ್ಶನ ನೀಡಿದ್ದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಗೆಲುವಿಗಾಗಿ ಕೊನೆಯವರೆಗೂ ಹೋರಾಟ ನೀಡಿದ ಗುಜರಾತ್ ಗೆಲುವಿನಂಚಿನಲ್ಲಿ ಎಡವಿತು. ಹೀಗಾಗಿ ತಂಡದ ಸೋಲು ಅದರ ಅಭಿಮಾನಿಗಳಿಗೆ ಆಘಾತ ನೀಡಿತು. ಗುಜರಾತ್ ಸೋಲಿನ ಬಳಿಕ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ (Ashish Nehra) ಅವರ ಮಗ ಕಣ್ಣೀರಿಡುತ್ತಿರುವ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಣ್ಣೀರಿಟ್ಟ ಆಶಿಶ್ ನೆಹ್ರಾ ಮಗ
ಐಪಿಎಲ್ 2025 ರಲ್ಲಿ ಗುಜರಾತ್ ಈ ಬಾರಿ ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಹೊಂದಿತ್ತು. ಅದರಂತೆ ಲೀಗ್ ಹಂತದಲ್ಲಿ ತಂಡದ ಪ್ರದರ್ಶನ ಅಮೋಘವಾಗಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋತ ಗುಜರಾತ್‌ನ ಕನಸನ್ನು ಛಿದ್ರವಾಯಿತು. ಕೊನೆಯ ಓವರ್ ವರೆಗೆ ನಡೆದ ಈ ಪಂದ್ಯದಲ್ಲಿ ಗುಜರಾತ್ ಸೋಲನ್ನು ಎದುರಿಸಬೇಕಾಯಿತು. ಸೋಲಿನ ನಂತರ, ಆಶಿಶ್ ನೆಹ್ರಾ ಅವರ ಮಗ ಗ್ಯಾಲರಿಯಲ್ಲಿ ಕೂತು ಅಳುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ.
That feeling of victory. Simply perfect. 😍💙#MumbaiIndians #PlayLikeMumbai #TATAIPL #GTvMIpic.twitter.com/ihAKFGaTxK
— Mumbai Indians (@mipaltan) May 30, 2025
ತನ್ನ ತಂದೆಯ ಕನಸು ಭಗ್ನವಾಗಿದನ್ನು ಸಹಿಸಲಾರದೆ ನೆಹ್ರಾ ಅವರ ಮಗ ಸ್ಟ್ಯಾಂಡ್‌ನಲ್ಲಿ ಕುಳಿತು ಅಳುತ್ತಿದ್ದರೆ, ಇತ್ತ ನೆಹ್ರಾ ಅವರ ಹಿರಿಯ ಮಗ, ತನ್ನ ತಮ್ಮನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದನು. ಗುಜರಾತ್ ತಂಡ ತನ್ನ ಮೊದಲ ಆವೃತ್ತಿಯಲ್ಲೇ ಅಂದರೆ ಐಪಿಎಲ್ 2022 ರಲ್ಲಿ ಚಾಂಪಿಯನ್ ಪಟ್ಟಕ್ಕೇರಿತ್ತು. ಆ ವೇಳೆ ತಂಡದ ನಾಯಕತ್ವ ಹಾರ್ದಿಕ್ ಪಾಂಡ್ಯ ಅವರ ಕೈಯಲ್ಲಿತ್ತು. ಆದರೆ ಐಪಿಎಲ್ 2024 ರಿಂದ ಮುಂಬೈ ತಂಡದ ನಾಯಕತ್ವಹಿಸಿಕೊಂಡಿರುವ ಹಾರ್ದಿಕ್, ಐಪಿಎಲ್ 2025 ಎಲಿಮಿನೇಟರ್ ಪಂದ್ಯದಲ್ಲಿ ತನ್ನ ಹಳೆಯ ತಂಡವನ್ನು ಸೋಲಿಸಿದರು.
IPL 2025: 81 ರನ್ ಬಾರಿಸಿ ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ
ಪಂದ್ಯ ಹೀಗಿತ್ತು
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳ ಸೋಲಿನ ನಂತರ 228 ರನ್ ಗಳಿಸಿತು. ಆರಂಭಿಕ ಆಟಗಾರ ರೋಹಿತ್ ಶರ್ಮಾ 50 ಎಸೆತಗಳಲ್ಲಿ 81 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಜಾನಿ ಬೈರ್‌ಸ್ಟೋವ್ 22 ಎಸೆತಗಳಲ್ಲಿ 47 ರನ್ ಗಳಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಗುಜರಾತ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಸಾಯಿ ಸುದರ್ಶನ್ 49 ಎಸೆತಗಳಲ್ಲಿ 80 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:52 pm, Sat, 31 May 25
