AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಹಾರ್ದಿಕ್- ಗಿಲ್ ನಡುವೆ ಮುನಿಸು? ವದಂತಿ ಹಬ್ಬುತ್ತಲೇ ಮೌನ ಮುರಿದ ಶುಭ್​ಮನ್

Shubman Gill Denies Fallout with Hardik Pandya: ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ನಡುವೆ ಕೈಕುಲುಕದಿರುವುದರಿಂದ ಜಗಳದ ವದಂತಿ ಹಬ್ಬಿತ್ತು. ಆದರೆ, ಗಿಲ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾರ್ದಿಕ್ ಜೊತೆಗಿನ ಫೋಟೋ ಹಂಚಿಕೊಂಡು ಈ ವದಂತಿಗೆ ತೆರೆ ಎಳೆದಿದ್ದಾರೆ. ಇಬ್ಬರ ನಡುವೆ ಯಾವುದೇ ಮುನಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

IPL 2025: ಹಾರ್ದಿಕ್- ಗಿಲ್ ನಡುವೆ ಮುನಿಸು? ವದಂತಿ ಹಬ್ಬುತ್ತಲೇ ಮೌನ ಮುರಿದ ಶುಭ್​ಮನ್
Hardik, Gill
ಪೃಥ್ವಿಶಂಕರ
|

Updated on:May 31, 2025 | 8:54 PM

Share

ಐಪಿಎಲ್​ನಲ್ಲಿ (IPL) ಪಂದ್ಯ ನಡೆಯುವ ವೇಳೆ ಟೀಂ ಇಂಡಿಯಾ ಆಟಗಾರರೇ ಪರಸ್ಪರ ಜಗಳ ಮಾಡಿಕೊಂಡಿರುವ ಘಟನೆಗಳನ್ನು ನಾವು ಸಾಕಷ್ಟು ಭಾರಿ ನೋಡಿದ್ದೇವೆ. ಈ ಬಾರಿಯ ಐಪಿಎಲ್​ನಲ್ಲೂ ಇದೇ ರೀತಿಯ ಸಾಕಷ್ಟು ಘಟನೆಗಳು ನಡೆದಿದ್ದವು. ಇದೀಗ ಆ ರೀತಿಯ ಘಟನೆ ನಿನ್ನೆಯ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ (GT vs MI) ನಡುವಿನ ಪಂದ್ಯದಲ್ಲಿ ನಡೆದಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಆ ಸುದ್ದಿಯ ಪ್ರಕಾರ ಗುಜರಾತ್ ಟೈಟನ್ಸ್ ನಾಯಕ ಶುಭ್​ಮನ್ ಗಿಲ್ (Shubman Gill) ಮತ್ತು ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ನಡುವಿನ ಸ್ನೇಹದಲ್ಲಿ ಬಿರುಕು ಉಂಟಾಗಿದೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕೆಲವು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೀಗ ಹಬ್ಬಿರುವ ವದಂತಿಯ ಬಗ್ಗೆ ಸ್ವತಃ ಶುಭ್​ಮನ್ ಗಿಲ್ ಅವರೇ ಮೌನ ಮುರಿದಿದ್ದಾರೆ.

ಗಿಲ್ ಮತ್ತು ಹಾರ್ದಿಕ್ ನಡುವೆ ಮುನಿಸು?

ವಾಸ್ತವವಾಗಿ, ಶುಕ್ರವಾರ, ಮೇ 30 ರಂದು, ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಿತು. ಪಂದ್ಯ ಪ್ರಾರಂಭವಾಗುವ ಮೊದಲು ಟಾಸ್ ನಡೆದಾಗ, ಶುಭ್​ಮನ್ ಗಿಲ್ ನಾಣ್ಯವನ್ನು ಚಿಮ್ಮಿಸಿದರು ಮತ್ತು ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದರು. ಟಾಸ್ ನಡೆದಾಗಲೆಲ್ಲಾ ಇಬ್ಬರೂ ನಾಯಕರು ಕೈಕುಲುಕಿ ನಂತರ ತಮ್ಮ ನಿರ್ಧಾರಗಳನ್ನು ಪ್ರಕಟಿಸುವುದು ಸಾಮಾನ್ಯವಾಗಿ ಸಂಭವಿಸುತ್ತದೆ. ಆದರೆ ಇಲ್ಲಿ, ಟಾಸ್ ಸೋತ ನಂತರ, ಗಿಲ್ ಮತ್ತು ಹಾರ್ದಿಕ್ ಕೈಕುಲುಕದೆ ಹೊರಟುಹೋದರು. ಇದು ಕ್ಯಾಮರಾದಲ್ಲಿ ರೆಕಾರ್ಡ್​ ಕೂಡ ಆಗಿತ್ತು. ಇದರ ವಿಡಿಯೋ ‘ಎಕ್ಸ್’ ನಿಂದ ಇನ್‌ಸ್ಟಾಗ್ರಾಮ್‌ವರೆಗೆ ಎಲ್ಲಾ ಕಡೆ ವೈರಲ್ ಆಗಿತ್ತು. ಈ ವಿಡಿಯೋವನ್ನು ನೋಡಿದವರು ಇಬ್ಬರ ನಡುವೆ ಬಿರುಕು ಮೂಡಿದೆ ಎಂದು ಹೇಳಲಾರಂಭಿಸಿದರು.

ವದಂತಿಗಳಿಗೆ ತೆರೆ ಎಳೆದ ಗಿಲ್

ಸಾಮಾನ್ಯವಾಗಿ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಪ್ರತಿಕ್ರಿಯಿಸುವುದರಿಂದ ದೂರವಿರುತ್ತಾರೆ. ಆದರೆ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಸಾಕಷ್ಟು ವೇಗ ಪಡೆದುಕೊಂಡಿರುವುದನ್ನು ಗಮನಿಸಿದ ಶುಭ್​ಮನ್ ಗಿಲ್, ಪಂದ್ಯಾವಳಿಯಿಂದ ತಂಡ ಹೊರನಡೆದ ನೋವಿನ ನಡುವೆಯೂ ತಮ್ಮ ಸೋಶೀಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಂಚಕೊಳ್ಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಗಿಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾರ್ದಿಕ್ ಜೊತೆಗಿನ ಎರಡು ಫೋಟೋಗಳನ್ನು ಪೋಸ್ಟ್ ಮಾಡಿ, “ಜಸ್ಟ್ ಲವ್, ಬೇರೇನೂ ಇಲ್ಲ (ಇಂಟರ್‌ನೆಟ್‌ನಲ್ಲಿ ನೋಡುವ ಎಲ್ಲವನ್ನೂ ನಂಬಬೇಡಿ)” ಎಂದು ಬರೆದಿದ್ದಾರೆ. ಅಲ್ಲದೆ ಗಿಲ್, ಹಾರ್ದಿಕ್ ಪಾಂಡ್ಯ ಅವರನ್ನು ಸಹ ಟ್ಯಾಗ್ ಮಾಡಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯಕ್ಕೆ ಕೂಡ ಗಿಲ್ ಪೋಸ್ಟ್​ಗೆ ಪ್ರತಿಕ್ರಿಯಿಸಿದ್ದಾರೆ.

ಗಿಲ್-ಹಾರ್ದಿಕ್ ಸ್ನೇಹ

ಹಾರ್ದಿಕ್ ಮತ್ತು ಗಿಲ್ ಟೀಂ ಇಂಡಿಯಾದಲ್ಲಿ ಒಟ್ಟಿಗೆ ಆಡುವುದಲ್ಲದೆ, ಮೈದಾನದ ಹೊರಗೆಯೂ ಉತ್ತಮ ಸ್ನೇಹಿತರಾಗಿದ್ದಾರೆ. ಇಷ್ಟೇ ಅಲ್ಲ, ಕಳೆದ ಸೀಸನ್‌ನಲ್ಲಿ ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ಮರಳುವ ಮೊದಲು, ಅವರು ಗುಜರಾತ್ ಟೈಟನ್ಸ್‌ ತಂಡದ ನಾಯಕರಾಗಿದ್ದರು. ಅಲ್ಲಿ ಅವರ ನಾಯಕತ್ವದಲ್ಲಿ, ಶುಭ್​ಮನ್ ಗಿಲ್ ಈ ಹೊಸ ತಂಡದ ಮೊದಲ ಎರಡು ಸೀಸನ್‌ನಲ್ಲಿ ಪ್ರಮುಖ ಭಾಗವಾಗಿದ್ದರು. ಹಾರ್ದಿಕ್ ನಾಯಕತ್ವದಲ್ಲಿ ಗಿಲ್ ಎರಡೂ ಸೀಸನ್​ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಅಲ್ಲದೆ ಒಮ್ಮೆ ಪ್ರಶಸ್ತಿ ಗೆದ್ದಿದ್ದಲ್ಲದೆ, ತಂಡವನ್ನು ಎರಡನೇ ಬಾರಿಗೆ ಫೈನಲ್‌ಗೆ ಕೊಂಡೊಯ್ದರು. ಹಾರ್ದಿಕ್ ಮುಂಬೈಗೆ ಹೋದ ನಂತರ, ಗಿಲ್ ಅವರನ್ನು ಗುಜರಾತ್ ತಂಡದ ನಾಯಕರನ್ನಾಗಿ ಮಾಡಲಾಗಿದೆ.

IPL 2025: ಮುಂಬೈ-ಪಂಜಾಬ್ ನಡುವಿನ ಕ್ವಾಲಿಫೈಯರ್-2 ರದ್ದಾದರೆ ಯಾವ ತಂಡ ಫೈನಲ್‌ಗೇರುತ್ತದೆ?

ಇಷ್ಟೇ ಅಲ್ಲದೆ ಟಾಸ್ ಬಳಿಕ ಇಬ್ಬರು ಶೇಕ್ ಹ್ಯಾಂಡ್ ಮಾಡದಿರಬಹುದು. ಆದರೆ ಗಿಲ್ ಮಾತು ಮುಗಿಸಿದ ಬಳಿಕ ಇವರಿಬ್ಬರು ಪರಸ್ಪರ ಕೈಕುಲಿಕೆ ಅಲ್ಲಿಂದ ತೆರಳಿದರು. ಅದರ ವಿಡಿಯೋ ಕೂಡ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಲ್ಲದೆ ಇಬ್ಬರು ಟಾಸ್​ಗು ಮುನ್ನ ಹಾಗೂ ಟಾಸ್ ನಂತರದ ಫೋಟೋ ಶೂಟ್​ನಲ್ಲೂ ಆತ್ಮೀಯವಾಗಿಯೇ ಪಾಲ್ಗೊಂಡಿದ್ದರು. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದು ಕೇವಲ ವದಂತಿ ಎಂತಲೇ ಹೇಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Sat, 31 May 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ