AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಮುಂಬೈ-ಪಂಜಾಬ್ ನಡುವಿನ ಕ್ವಾಲಿಫೈಯರ್-2 ರದ್ದಾದರೆ ಯಾವ ತಂಡ ಫೈನಲ್‌ಗೇರುತ್ತದೆ?

IPL 2025 Qualifier 2: ಐಪಿಎಲ್ 2025ರ ಕ್ವಾಲಿಫೈಯರ್ 2 ಪಂದ್ಯ ಮಳೆಯಿಂದ ರದ್ದಾದರೆ ಫೈನಲ್‌ಗೆ ಯಾವ ತಂಡ ಅರ್ಹ ಎಂಬುದು ಈ ಲೇಖನದಲ್ಲಿ ವಿವರಿಸಲಾಗಿದೆ. ಲೀಗ್ ಹಂತದಲ್ಲಿ ಉತ್ತಮ ಶ್ರೇಯಾಂಕ ಹೊಂದಿದ್ದ ತಂಡ ಫೈನಲ್‌ಗೆ ಅರ್ಹತೆ ಪಡೆಯುತ್ತದೆ. ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ 19 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಮಳೆಯಿಂದ ಪಂದ್ಯ ರದ್ದಾದರೆ ಆ ತಂಡ ಫೈನಲ್‌ಗೆ ಅರ್ಹತೆ ಪಡೆಯುತ್ತದೆ.

IPL 2025: ಮುಂಬೈ-ಪಂಜಾಬ್ ನಡುವಿನ ಕ್ವಾಲಿಫೈಯರ್-2 ರದ್ದಾದರೆ ಯಾವ ತಂಡ ಫೈನಲ್‌ಗೇರುತ್ತದೆ?
Mi Vs Pbks
ಪೃಥ್ವಿಶಂಕರ
|

Updated on:May 31, 2025 | 8:24 PM

Share

ಐಪಿಎಲ್ 2025 (IPL 2025) ರ ಪ್ಲೇಆಫ್ ಹಂತ ಮುಗಿಯುತ್ತಾ ಬಂದಿದ್ದು, ಇದೀಗ ಎಲ್ಲರ ಕಣ್ಣುಗಳು ಜೂನ್ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ -2 ಪಂದ್ಯದ ಮೇಲೆ ಇವೆ. ಈ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈಗಾಗಲೇ ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವ ಮೂಲಕ ಆರ್​ಸಿಬಿ ಫೈನಲ್‌ ತಲುಪಿದೆ. ಇದೀಗ ಕ್ವಾಲಿಫೈಯರ್ 2 ರಲ್ಲಿ ಗೆಲ್ಲುವ ತಂಡವು ಆರ್​ಸಿಬಿ ವಿರುದ್ಧ ಸೆಣಲಿದೆ. ಆದರೆ ಕ್ವಾಲಿಫೈಯರ್-2 ಪಂದ್ಯ ಮಳೆಯಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ರದ್ದಾದರೆ, ಫೈನಲ್‌ನಲ್ಲಿ ಯಾವ ತಂಡ ಆಡುತ್ತದೆ? ಎಂಬುದರ ಮೇಲೆ ಎಲ್ಲರ ಗಮನವಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

ಪಂದ್ಯ ರದ್ದಾದರೆ ಯಾರಿಗೆ ಫೈನಲ್‌ ಟಿಕೆಟ್?

ಐಪಿಎಲ್ 2025 ರ ಪ್ಲೇಆಫ್ ಸ್ವರೂಪದ ಪ್ರಕಾರ, ಲೀಗ್ ಹಂತದ ಕೊನೆಯಲ್ಲಿ ಅಗ್ರ ನಾಲ್ಕು ತಂಡಗಳು ಪ್ಲೇಆಫ್ ತಲುಪುತ್ತವೆ. ಕ್ವಾಲಿಫೈಯರ್-1 ರಲ್ಲಿ ಅಗ್ರ ಎರಡು ತಂಡಗಳು (ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ) ಮುಖಾಮುಖಿಯಾಗುತ್ತವೆ, ವಿಜೇತ ತಂಡವು ನೇರವಾಗಿ ಫೈನಲ್‌ಗೆ ಹೋಗುತ್ತದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳು (ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್) ಎಲಿಮಿನೇಟರ್‌ನಲ್ಲಿ ಆಡುತ್ತವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಕ್ವಾಲಿಫೈಯರ್ 2 ರಲ್ಲಿ ಕ್ವಾಲಿಫೈಯರ್ 1 ರ ಸೋತ ತಂಡದ ವಿರುದ್ಧ ಆಡುತ್ತದೆ. ಕ್ವಾಲಿಫೈಯರ್-2 ರ ಗೆದ್ದ ತಂಡವು ಫೈನಲ್‌ನಲ್ಲಿ ಕ್ವಾಲಿಫೈಯರ್-1 ರ ವಿಜೇತರಾದ ತಂಡವನ್ನು ಎದುರಿಸಲಿದೆ. ಈ ಸೀಸನ್‌ನಲ್ಲಿ ಪಂಜಾಬ್ ಕಿಂಗ್ಸ್ ಲೀಗ್ ಹಂತದಲ್ಲಿ 19 ಅಂಕಗಳೊಂದಿಗೆ ಮೊದಲ ಸ್ಥಾನ ಗಳಿಸಿದರೆ, ಆರ್‌ಸಿಬಿ 19 ಅಂಕಗಳೊಂದಿಗೆ ಎರಡನೇ ಸ್ಥಾನ ಗಳಿಸಿತು. ಅದೇ ಸಮಯದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಎಲಿಮಿನೇಟರ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸುವ ಮೂಲಕ ಕ್ವಾಲಿಫೈಯರ್ -2 ಗೆ ಪ್ರವೇಶ ಪಡೆದಿದೆ.

ಐಪಿಎಲ್ ನಿಯಮಗಳ ಪ್ರಕಾರ, ಕ್ವಾಲಿಫೈಯರ್ -2 ಪಂದ್ಯವು ಮಳೆ ಅಥವಾ ಇನ್ನಾವುದೇ ಕಾರಣದಿಂದಾಗಿ ರದ್ದಾದರೆ, ಲೀಗ್ ಹಂತದಲ್ಲಿ ಉತ್ತಮ ಶ್ರೇಯಾಂಕ ಹೊಂದಿರುವ ತಂಡವು ಫೈನಲ್‌ಗೆ ಸ್ಥಾನ ಪಡೆಯುತ್ತದೆ. ಆ ಪ್ರಕಾರ ಲೀಗ್ ಹಂತದಲ್ಲಿ 19 ಅಂಕ ಮತ್ತು ಉತ್ತಮ ನೆಟ್​ ರನ್ ರೇಟ್​ನೊಂದಿಗೆ (+0.376) ಮೊದಲ ಸ್ಥಾನ ಪಡೆದಿದ್ದ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಇದರರ್ಥ ಪಂಜಾಬ್ ಕಿಂಗ್ಸ್ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ ಆಡಲಿದೆ.

IPL 2025: ಗುಜರಾತ್ ಟೈಟನ್ಸ್ ಸೋಲುತ್ತಿದ್ದಂತೆ ಕಣ್ಣೀರಿಟ್ಟ ಆಶಿಶ್ ನೆಹ್ರಾ ಮಗ

ಕನಿಷ್ಠ 5 ಓವರ್​ಗಳ ಪಂದ್ಯ

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿರುವ ಈ ಪಂದ್ಯ ಬಹಳ ಮಹತ್ವದ್ದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯದ ಫಲಿತಾಂಶವನ್ನು ಯಾವುದೇ ಬೆಲೆ ತೆತ್ತಾದರೂ ನಿರ್ಧರಿಸಲು ಪ್ರಯತ್ನಿಸಲಾಗುವುದು, ಆದಾಗ್ಯೂ, ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು, ಕನಿಷ್ಠ ಎರಡೂ ತಂಡಗಳು ತಲಾ 5 ಓವರ್‌ಗಳನ್ನು ಆಡುವುದು ಅವಶ್ಯಕವಾಗಿರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Sat, 31 May 25

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್