AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karun Nair: ಟೀಕಿಸುವವರಿಗೆ ದ್ವಿಶತಕದ ಉತ್ತರ ನೀಡಿದ ಕನ್ನಡಿಗ ಕರುಣ್ ನಾಯರ್

Karun Nair's Double Century: ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ ಅದ್ಭುತ ದ್ವಿಶತಕ (204 ರನ್) ಸಿಡಿಸಿದ್ದಾರೆ. ಮೊದಲ ದಿನ ಅಜೇಯ ಶತಕ ಬಾರಿಸಿದ ಕರುಣ್, ಎರಡನೇ ದಿನ ತಮ್ಮ ಇನ್ನಿಂಗ್ಸ್ ಮುಂದುವರೆಸಿ ದ್ವಿಶತಕ ಪೂರ್ಣಗೊಳಿಸಿದರು. ಇದು ಅವರ ಪ್ರಥಮ ದರ್ಜೆ ವೃತ್ತಿಜೀವನದ ನಾಲ್ಕನೇ ದ್ವಿಶತಕವಾಗಿದೆ.

Karun Nair: ಟೀಕಿಸುವವರಿಗೆ ದ್ವಿಶತಕದ ಉತ್ತರ ನೀಡಿದ ಕನ್ನಡಿಗ ಕರುಣ್ ನಾಯರ್
Karun Nair
ಪೃಥ್ವಿಶಂಕರ
|

Updated on:May 31, 2025 | 5:53 PM

Share

ಕನ್ನಡಿಗ ಕರುಣ್ ನಾಯರ್ (Karun Nair) ಸುಮಾರು 8 ವರ್ಷಗಳ ನಂತರ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ಆದರೆ ತಂಡದೊಂದಿಗೆ ಕಣಕ್ಕಿಳಿಯುವ ಮೊದಲು ಭಾರತ ಎ ತಂಡದ ಪರ ಇಂಗ್ಲೆಂಡ್‌ ಲಯನ್ಸ್ (India A vs England Lions) ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯವನ್ನಾಡುತ್ತಿರುವ ಕರುಣ್, ಮೊದಲ ಪಂದ್ಯದಲ್ಲೇ ದ್ವಿಶತಕದ ಇನ್ನಿಂಗ್ಸ್ ಆಡಿದ್ದಾರೆ. ಈ ಪಂದ್ಯದ ಮೊದಲ ದಿನದಾಟದಂದು ಅಜೇಯ ಶತಕ ಸಿಡಿಸಿದ್ದ ಕರುಣ್, ಎರಡನೇ ದಿನವೂ ತನ್ನ ಆಟವನ್ನು ಮುಂದುವರೆಸಿ ತಮ್ಮ ದ್ವಿಶತಕ ಪೂರೈಸಿದರು. ಕರುಣ್ ಹೊರತುಪಡಿಸಿ, ಧ್ರುವ್ ಜುರೆಲ್ (Dhruv Jurel) ಕೂಡ ಅದ್ಭುತ ಇನ್ನಿಂಗ್ಸ್ ಆಡಿದರಾದರೂ ಕೇವಲ 6 ರನ್‌ಗಳಿಂದ ಶತಕವನ್ನು ತಪ್ಪಿಸಿಕೊಂಡರು.

ಮೊದಲ ದಿನವೇ ಶತಕ

ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಮೊದಲ ಅನಧಿಕೃತ ಟೆಸ್ಟ್ ಪಂದ್ಯವು ಮೇ 30 ಶುಕ್ರವಾರದಿಂದ ಕ್ಯಾಂಟರ್ಬರಿಯಲ್ಲಿ ಪ್ರಾರಂಭವಾಯಿತು. ಮೊದಲ ದಿನವೇ ಬ್ಯಾಟಿಂಗ್‌ ಆರಂಭಿಸದ ಭಾರತ ಎ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾದ ಅಭಿಮನ್ಯು ಈಶ್ವರನ್ ಮತ್ತು ಯಶಸ್ವಿ ಜೈಸ್ವಾಲ್ ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಆರಂಭಿಕ ಎರಡು ವಿಕೆಟ್‌ಗಳು ಪತನಗೊಂಡ ನಂತರ, ಮೂರನೇ ಕ್ರಮಾಂಕದಲ್ಲಿ ಬಂದ ಕರುಣ್ ನಾಯರ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಸರ್ಫರಾಜ್ ಜೊತೆಗೆ ಶತಕದ ಜೊತೆಯಾಟ ಕಟ್ಟಿದ ಕರುಣ್, ವೈಯಕ್ತಿಕವಾಗಿಯೂ ಮೊದಲ ದಿನವೇ ಸ್ಮರಣೀಯ ಶತಕ ಬಾರಿಸಿದರು.

ಎರಡನೇ ದಿನ ದ್ವಿಶತಕ ಪೂರ್ಣ

ಮೊದಲ ದಿನ 186 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕರುಣ್ ನಾಯರ್ ಎರಡನೇ ದಿನ ದ್ವಿಶತಕ ಬಾರಿಸುವ ನಿರೀಕ್ಷೆಯಿತ್ತು. ಅದರಂತೆ ಯಾರನ್ನೂ ನಿರಾಶೆಗೊಳಿಸದ ಕರುಣ್ ಉಳಿದ 14 ರನ್‌ಗಳನ್ನು ಒಂದು ಗಂಟೆಯೊಳಗೆ ಪೂರ್ಣಗೊಳಿಸಿದರು. ವೈಯಕ್ತಿಕ 199 ರನ್‌ಗಳಿಂದಾಗ ಒಂದು ಬೌಂಡರಿ ಬಾರಿಸಿ ತಮ್ಮ ಸ್ಮರಣೀಯ ದ್ವಿಶತಕವನ್ನು ಪೂರೈಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 272 ಎಸೆತಗಳನ್ನು ಎದುರಿಸಿದ ಕರುಣ್ 26 ಬೌಂಡರಿಗಳು ಮತ್ತು 1 ಸಿಕ್ಸರ್ ಕೂಡ ಬಾರಿಸಿದರು. ಅಂತಿಮವಾಗಿ ಅವರು 204 ರನ್‌ಗಳಿಗೆ ಔಟಾದರು, ಆದರೆ ಆ ಹೊತ್ತಿಗೆ ಅವರು ಭಾರತ ಎ ತಂಡವನ್ನು 500 ರನ್‌ಗಳ ಗಡಿಯ ಹತ್ತಿರಕ್ಕೆ ಕೊಂಡೊಯ್ದಿದ್ದರು.

ಆಂಗ್ಲರ ನಾಡಿನಲ್ಲಿ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್

ಕರುಣ್‌ಗೆ ಇಂಗ್ಲೆಂಡ್ ಮೇಲೆ ವಿಶೇಷ ಪ್ರೀತಿ

ಇದು 33 ವರ್ಷದ ಕರುಣ್ ನಾಯರ್ ಅವರ ಪ್ರಥಮ ದರ್ಜೆ ವೃತ್ತಿಜೀವನದ ನಾಲ್ಕನೇ ದ್ವಿಶತಕವಾಗಿದೆ. ಕಾಕತಾಳೀಯವೆಂಬಂತೆ, ಈ ದ್ವಿಶತಕಗಳಲ್ಲಿ 3 ಇಂಗ್ಲೆಂಡ್ ಅಥವಾ ಅದರ ಸಂಬಂಧಿತ ತಂಡಗಳ ವಿರುದ್ಧ ಬಂದಿವೆ. 2016 ರಲ್ಲಿ ಇಂಗ್ಲೆಂಡ್ ವಿರುದ್ಧದ ಚೆನ್ನೈ ಟೆಸ್ಟ್‌ನಲ್ಲಿ ಐತಿಹಾಸಿಕ ತ್ರಿಶತಕ ಬಾರಿಸಿದ ಕರುಣ್ ನಂತರ ಕಳೆದ ವರ್ಷ, ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ನಲ್ಲಿ ಗ್ಲಾಮೋರ್ಗನ್ ವಿರುದ್ಧ ನಾರ್ಥಾಂಪ್ಟನ್‌ಶೈರ್ ಪರ ಇನ್ನೂರಕ್ಕೂ ಹೆಚ್ಚು ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ಪರ ದ್ವಿಶತಕ ಬಾರಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Sat, 31 May 25

ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ