AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋಟೋ ಶೂಟ್​ನಲ್ಲೂ ಕೊಹ್ಲಿಯನ್ನು ಬಿಡದ ಸ್ವಸ್ತಿಕ್; ದೂರ ತಳ್ಳಿದ ಡೇವಿಡ್, ಲಿವಿಂಗ್​ಸ್ಟೋನ್! ವಿಡಿಯೋ

RCB's Viral Video: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ವಾಲಿಫೈಯರ್ ಗೆಲುವಿನ ನಂತರದ ಫೋಟೋ ಶೂಟ್ ವೇಳೆ ನಡೆದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವ ಆಟಗಾರ ಸ್ವಸ್ತಿಕ್ ಚಿಕಾರ ವಿರಾಟ್ ಕೊಹ್ಲಿ ಜೊತೆ ಫೋಟೋ ತೆಗೆಸಿಕೊಳ್ಳಲು ಪ್ರಯತ್ನಿಸಿದಾಗ, ಟಿಮ್ ಡೇವಿಡ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಅವರನ್ನು ದೂರ ತಳ್ಳಿದ್ದಾರೆ.

ಫೋಟೋ ಶೂಟ್​ನಲ್ಲೂ ಕೊಹ್ಲಿಯನ್ನು ಬಿಡದ ಸ್ವಸ್ತಿಕ್; ದೂರ ತಳ್ಳಿದ ಡೇವಿಡ್, ಲಿವಿಂಗ್​ಸ್ಟೋನ್! ವಿಡಿಯೋ
Swastik Chikara
ಪೃಥ್ವಿಶಂಕರ
|

Updated on: May 31, 2025 | 2:42 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್‌ಗೆ ತಲುಪಿದೆ. ಇದೀಗ ಆರ್‌ಸಿಬಿ ಆಟಗಾರರು ಟ್ರೋಫಿ ಗೆಲ್ಲುವ ಉದ್ದೇಶದಿಂದ ಜೂನ್ 3 ರಂದು ಅಹಮದಾಬಾದ್ ಮೈದಾನ ಪ್ರವೇಶಿಸಲಿದ್ದಾರೆ. ಆದರೆ ಇದಕ್ಕೂ ಮುನ್ನ ಆರ್​ಸಿಬಿ ಪಾಳಯದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ, ಕ್ವಾಲಿಫೈಯರ್ ಗೆದ್ದ ನಂತರ ಆರ್‌ಸಿಬಿ ಆಟಗಾರರ ಫೋಟೋ ಶೂಟ್ ನಡೆದಿದೆ. ಈ ವೇಳೆ ಕೊಹ್ಲಿ (Virat Kohli) ಜೊತೆ ಫೋಟೋ ತೆಗೆಸಿಕೊಳ್ಳಲು ತಂಡದ ಸಹ ಆಟಗಾರ ಸ್ವಸ್ತಿಕ್ ಚಿಕಾರ (Swastik Chikara) ಪ್ರಯತ್ನಿಸಿದ್ದಾರೆ. ಆದರೆ ಇದಕ್ಕೆ ಟಿಮ್ ಡೇವಿಡ್ ಹಾಗೂ ಲಿಯಾಮ್ ಲಿವಿಂಗ್‌ಸ್ಟೋನ್ ಅವಕಾಶ ಮಾಡಿಕೊಟ್ಟಿಲ್ಲ. ಇವರಿಬ್ಬರು ಸೇರಿ ಸ್ವಸ್ತಿಕ್​ರನ್ನು ಕೊಹ್ಲಿಯಿಂದ ದೂರ ತಳ್ಳಿದ್ದಾರೆ. ಇದೀಗ ಅದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಚಿಕಾರನನ್ನು ತಳ್ಳಲು ಕಾರಣವೇನು?

ವಾಸ್ತವವಾಗಿ, ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನ ನಂತರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇಡೀ ತಂಡವು ಗುಂಪು ಫೋಟೋಕ್ಕಾಗಿ ಒಟ್ಟುಗೂಡಿತ್ತು. ಇದಕ್ಕಾಗಿ ಮುಂದಿನ ಸಾಲಿನಲ್ಲಿ ಕುರ್ಚಿಗಳನ್ನು ಸಹ ಇರಿಸಲಾಗಿತ್ತು. ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರು ಅದರ ಮೇಲೆ ಕುಳಿತುಕೊಳ್ಳುತ್ತಿದ್ದರು. ಉಳಿದ ಆಟಗಾರರು ಅವರ ಹಿಂದೆ ಸಾಲಿನಲ್ಲಿ ನಿಲ್ಲಲು ಆರಂಭಿಸಿದರು. ತಂಡದ ಯುವ ಆಟಗಾರ ಸ್ವಸ್ತಿಕ್ ಚಿಕಾರ ಕೂಡ ಗ್ರೂಪ್ ಫೋಟೋಗಾಗಿ ಕೊಹ್ಲಿ ಹಿಂದೆ ನಿಂತಿದ್ದರು. ಆದರೆ ಈ ವೇಳೆ ಅಲ್ಲಿಗೆ ಬಂದ ಟಿಮ್ ಡೇವಿಡ್ ಚಿಕಾರನನ್ನು ಕೊಹ್ಲಿಯಿಂದ ದೂರ ತಳ್ಳಿದರು. ಅಲ್ಲಿಗೆ ಸುಮ್ಮನಾಗದ ಚಿಕಾರ ಮತ್ತೆ ಕೊಹ್ಲಿ ಬಳಿಕ ಬರಲು ಪ್ರಯತ್ನಿಸಿದರು. ಆಗ ಅಲ್ಲೇ ನಿಂತಿದ್ದ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತೆ ಚಿಕಾರನನ್ನು ದೂರ ತಳ್ಳಿದರು. ಇವರಿಬ್ಬರು ಹಾಗೇ ಮಾಡಲು ಕಾರಣವೂ ಇದೆ.

ವಾಸ್ತವವಾಗಿ ಇದೇ ಮೊದಲ ಬಾರಿಗೆ ಆರ್​ಸಿಬಿ ಪಾಳಯ ಸೇರಿಕೊಂಡಿರುವ ಸ್ವಸ್ತಿಕ್ ಚಿಕಾರ, ಕೊಹ್ಲಿಯ ಬಾಲವಾಗಿಬಿಟ್ಟಿದ್ದಾರೆ. ಲೈವ್ ಪಂದ್ಯದಲ್ಲೂ ಡ್ರೇಸಿಂಗ್ ರೂಮ್​ನಲ್ಲೂ, ಡಗೌಟ್​ನಲ್ಲೂ ಕೊಹ್ಲಿ ಹಿಂದೆ ಚಿಕಾರ ಇದ್ದೇ ಇರುತ್ತಾರೆ. ಸ್ವಸ್ತಿಕ್ ಅವರ ನಡೆಯಿಂದ ಕೊಹ್ಲಿಗೂ ಇರಿಸು ಮುರಿಸಾಗಿದ್ದು, ಅವರು ಕೂಡ ಈ ಹಿಂದಿನ ಸಂದರ್ಶನದಲ್ಲಿ ಚಿಕಾರನನ್ನು ನನ್ನ ರೂಮ್​ನಲ್ಲಿ ಇರಿಸಿಕೊಳ್ಳಲು ಬಯಸುವುದಿಲ್ಲ ಎಂದಿದ್ದರು. ಆರ್​ಸಿಬಿ ಆಟಗಾರರು ಕೂಡ ಚಿಕಾರನನ್ನು ಇದೇ ವಿಷಯವಾಗಿ ಸಾಕಷ್ಟು ಬಾರಿ ಕೀಟಲೆ ಮಾಡಿದ್ದಾರೆ. ಇದೀಗ ಫೋಟೋ ಶೂಟ್ ಸಮಯದಲ್ಲೂ ಚಿಕಾರ, ವಿರಾಟ್ ಬಳಿ ಬಂದಾಗ, ತಂಡದ ಆಟಗಾರರು ಚಿಕಾರನನ್ನ ಕೀಟಲೆ ಮಾಡಿದ್ದಾರೆ.

IPL 2025: ‘ಒಂಟಿಯಾಗಿರುವುದಕ್ಕೆ ಬಿಡಲ್ಲ’; ಕೊಹ್ಲಿಗೆ ಇರಿಸು ಮುರಿಸು ತಂದ ಸ್ವಸ್ತಿಕ್ ಚಿಕಾರ ಚೇಷ್ಟೆ

ಸ್ವಸ್ತಿಕ್ ಚಿಕಾರ ಯಾರು?

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ವಸ್ತಿಕ್ ಚಿಕಾರ ಅವರನ್ನು 30 ಲಕ್ಷ ರೂ.ಗೆ ಖರೀದಿಸಿತು. ಆದರೆ, ಅವರಿಗೆ ಐಪಿಎಲ್ 2025 ರಲ್ಲಿ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಉತ್ತರ ಪ್ರದೇಶ ಪರ ದೇಶೀಯ ಕ್ರಿಕೆಟ್ ಆಡುವ ಸ್ವಸ್ತಿಕ್ ಚಿಕಾರ, ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 6 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಅವರು 33.33 ಸರಾಸರಿಯಲ್ಲಿ 200 ರನ್ ಗಳಿಸಿದ್ದಾರೆ, ಇದರಲ್ಲಿ 1 ಶತಕವೂ ಸೇರಿದೆ. ಅವರು 2 ಪ್ರಥಮ ದರ್ಜೆ ಪಂದ್ಯಗಳಲ್ಲಿ 74 ರನ್ ಮತ್ತು 4 ಟಿ20 ಪಂದ್ಯಗಳಲ್ಲಿ 15 ರನ್ ಗಳಿಸಿದ್ದಾರೆ. ಆದಾಗ್ಯೂ, ಚಿಕಾರಾ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಬಹಳ ಕಡಿಮೆ ಅನುಭವವಿದೆ. ಆದರೆ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಕಳೆದ ವರ್ಷ, ಅವರು ಯುಪಿ ಟಿ20 ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಚಿಕಾರ 12 ಪಂದ್ಯಗಳಲ್ಲಿ 49.90 ಸರಾಸರಿ ಮತ್ತು 185 ಸ್ಟ್ರೈಕ್ ರೇಟ್‌ನಲ್ಲಿ 499 ರನ್ ಗಳಿಸಿದರು. ಈ ಅವಧಿಯಲ್ಲಿ, ಅವರ ಬ್ಯಾಟ್‌ನಿಂದ 5 ಅರ್ಧಶತಕಗಳು ಮತ್ತು 1 ಶತಕ ಕೂಡ ಸಿಡಿದಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ಫುಟ್‌ಪಾತ್ ಅಂಗಡಿಗಳ ತೆರವು ವೇಳೆ ಇಳಕಲ್​​ನಲ್ಲಿ ಹೈಡ್ರಾಮಾ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಮತ್ತೆ BJP ಸರ್ಕಾರ ಬರುತ್ತೆ: ಜೋಶಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ತಮ್ಮೂರು ತುಮಕೂರಿನ ಬಗ್ಗೆ ಧ್ರುವ ಸರ್ಜಾ ಮಾತು: ವಿಡಿಯೋ ನೋಡಿ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಅಭಿಮಾನೋತ್ಸವದಲ್ಲಿ ಭಾವುಕವಾಗಿ ಮಾತನಾಡಿದ ಯಡಿಯೂರಪ್ಪ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಮೊದಲ ಬಾರಿಗೆ ಕಾನ್ಸರ್ಟ್ ನೀಡುತ್ತಿದ್ದಾರೆ ಅಜನೀಶ್: ಇಲ್ಲಿದೆ ಮಾಹಿತಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಬಿಎಸ್​​ವೈ ಬರ್ತಿದ್ದಂತೆ ಜೈಕಾರ; ಹೇಗಿದೆ ನೋಡಿ ರಾಜಾಹುಲಿ ಎಂಟ್ರಿ
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ