AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ‘ಒಂಟಿಯಾಗಿರುವುದಕ್ಕೆ ಬಿಡಲ್ಲ’; ಕೊಹ್ಲಿಗೆ ಇರಿಸು ಮುರಿಸು ತಂದ ಸ್ವಸ್ತಿಕ್ ಚಿಕಾರ ಚೇಷ್ಟೆ

Virat Kohli's Viral Video: ಆರ್‌ಸಿಬಿ ತಂಡ ಐಪಿಎಲ್ 2025ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್ ತಲುಪಲು ಒಂದು ಗೆಲುವು ಮಾತ್ರ ಬೇಕಾಗಿದೆ. ವಿರಾಟ್ ಕೊಹ್ಲಿ ಈ ಸೀಸನ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಈ ನಡುವೆ ಕೊಹ್ಲಿ, ತಂಡದ ಸಹ ಆಟಗಾರನ ಜೊತೆ ಕೊಠಡಿಯನ್ನು ಹಂಚಿಕೊಳ್ಳಲು ಇಷ್ಟಪಡದಿರುವುದರ ಬಗ್ಗೆ ನೀಡಿರುವ ಹೇಳಿಕೆಯ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

IPL 2025: ‘ಒಂಟಿಯಾಗಿರುವುದಕ್ಕೆ ಬಿಡಲ್ಲ’; ಕೊಹ್ಲಿಗೆ ಇರಿಸು ಮುರಿಸು ತಂದ ಸ್ವಸ್ತಿಕ್ ಚಿಕಾರ ಚೇಷ್ಟೆ
Virat Kohli
ಪೃಥ್ವಿಶಂಕರ
|

Updated on:May 02, 2025 | 5:37 PM

Share

ಐಪಿಎಲ್ 2025ರಲ್ಲಿ (IPL 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಅದ್ಭುತ ಪ್ರದರ್ಶನ ನೀಡುತ್ತಿದೆ. ತಂಡವು ಆಡಿರುವ 10 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ಲೇಆಫ್ ತಲುಪಲು ತಂಡಕ್ಕೆ ಕೇವಲ ಒಂದು ಗೆಲುವು ಮಾತ್ರ ಬೇಕಾಗಿದೆ. ಇದೀಗ ತನ್ನ 11 ನೇ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಎದುರಿಸಲಿರುವ ಆರ್​ಸಿಬಿ, ಈ ಪಂದ್ಯವನ್ನು ಗೆದ್ದು ಪ್ಲೇಆಫ್​ಗೆ ಟಿಕೆಟ್ ಖಚಿತಪಡಿಸಿಕೊಳ್ಳುವ ಇರಾದೆಯಲ್ಲಿದೆ. ಈ ನಡುವೆ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್​ ಕೊಹ್ಲಿಯ  (Virat Kohli) ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಕೊಹ್ಲಿಗೆ ತಂಡದ ಸಹ ಆಟಗಾರನಿಂದಲೇ ಕಸಿವಿಸಿಯಾಗುತ್ತಿರುವುದು ಈ ವಿಡಿಯೋ ಮೂಲಕ ಸ್ಪಷ್ಟವಾಗಿದೆ.

ವಾಸ್ತವವಾಗಿ ಈ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಸೀಸನ್‌ನಲ್ಲಿ ಅವರು ಇಲ್ಲಿಯವರೆಗೆ 6 ಅರ್ಧಶತಕಗಳನ್ನು ಗಳಿಸಿದ್ದಾರೆ. ಅದ್ಭುತ ಬ್ಯಾಟಿಂಗ್ ಮಾಡುವುದರ ಜೊತೆಗೆ, ವಿರಾಟ್ ತಂಡದಲ್ಲಿ ಆರೋಗ್ಯಕರ ಪರಿಸರವನ್ನು ನಿರ್ಮಿಸುವುದರಲ್ಲೂ ಪ್ರಮುಖ ಪಾತ್ರವಹಿಸುತ್ತಾರೆ. ಕೊಹ್ಲಿ ಹಿರಿಯರು, ಕಿರಿಯರು ಎನ್ನದೆ ಎಲ್ಲಾ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹಾಗಾಗಿ ಪಂದ್ಯದ ಸಮಯದಲ್ಲಾಗಲಿ ಅಥವಾ ಡ್ರೆಸಿಂಗ್ ರೂಂನಲ್ಲಾಗಲಿ ಯುವ ಆಟಗಾರರ ಜೊತೆಗೆ ಅನುಭವಿ ಆಟಗಾರರು ಕೂಡ ಕೊಹ್ಲಿ ಹಿಂದೆ ಮುಂದೆ ಸದಾ ಇರುತ್ತಾರೆ. ಇದೀಗ ಕೊಹ್ಲಿಯ ಸ್ನೇಹ ಮನೋಭಾವವೇ ಅವರಿಗೆ ದೊಡ್ಡ ತಲೆನೋವಾಗಿದೆ ಎಂಬುದು ಸಂದರ್ಶನವೊಂದರಲ್ಲಿ ಬಹಿರಂಗವಾಗಿದೆ.

ಚಿಕಾರ ಇರಲೇಬಾರದು ಎಂದ ಕೊಹ್ಲಿ

ಆರ್​ಸಿಬಿ ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿರುವಂತೆ ಕೊಹ್ಲಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಒಂದು ಪ್ರಶ್ನೆ, ನೀವು ಯಾರೊಂದಿಗಾದರೂ ನಿಮ್ಮ ಕೊಠಡಿ ಹಂಚಿಕೊಳ್ಳಲು ಬಯಸುತ್ತೀರಾ? ಎಂಬುದಾಗಿದೆ. ಇದಕ್ಕೆ ನಗುತ್ತಾ ಉತ್ತರಿಸಿದ ಕೊಹ್ಲಿ, ಸ್ವಸ್ತಿಕ್ ಚಿಕಾರ ಜೊತೆ ಕೊಠಡಿ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ, ಏಕೆಂದರೆ ಅವನು ಎಂದಿಗೂ ನನ್ನನ್ನು ಒಂಟಿಯಾಗಿ ಬಿಡುವುದಿಲ್ಲ. ಈಗ ಅವನು ಇಡೀ ದಿನ ನನ್ನ ಜೊತೆ ಇರುತ್ತಾನೆ. ಇದರಿಂದಾಗಿ ಕೆಲವೊಮ್ಮೆ ನನಗೆ ಬೇಸರವಾಗುತ್ತದೆ’ ಎಂದಿದ್ದಾರೆ.

ಹಾಗೆಯೇ ಯಾರೊಂದಿಗೆ ಕೊಠಡಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎಂಬುದನ್ನು ವಿವರಿಸಿರುವ ಕೊಹ್ಲಿ, ‘ನಾನು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರೊಂದಿಗೆ ತಮ್ಮ ಕೊಠಡಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಏಕೆಂದರೆ ಅವರು ತುಂಬಾ ಬುದ್ಧಿವಂತ ಮತ್ತು ಸಂಯೋಜಿತ ಆಟಗಾರ. ಅವನ ಜೊತೆ ಕೊಠಡಿ ಹಂಚಿಕೊಳ್ಳಲು ನನಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದಿದ್ದಾರೆ. ಕೊಹ್ಲಿಯ ಈ ಬೋಲ್ಡ್ ಕಾಮೆಂಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ವಿಶೇಷ ಸಂದೇಶದ ಮೂಲಕ ಮಡದಿ ಅನುಷ್ಕಾಗೆ ಜನ್ಮ ದಿನದ ಶುಭಕೋರಿದ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿಯ ಪ್ರದರ್ಶನ

ಈ ಸೀಸನ್‌ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್ ಅಬ್ಬರಿಸುತ್ತಿದೆ. ಇಲ್ಲಿಯವರೆಗೆ, ಆಡಿರುವ 10 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ, 63.28 ಸರಾಸರಿ ಮತ್ತು 138.87 ಸ್ಟ್ರೈಕ್ ರೇಟ್‌ನಲ್ಲಿ 443 ರನ್ ಗಳಿಸಿದ್ದಾರೆ, ಇದರಲ್ಲಿ 6 ಅರ್ಧಶತಕಗಳು ಸೇರಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Fri, 2 May 25