Rohit Sharma: ಸಮಯ ಮುಗಿದ ನಂತರ ಡಿಆರ್‌ಎಸ್ ತೆಗೆದುಕೊಂಡ ರೋಹಿತ್ ಶರ್ಮಾ?: ಅಂಪೈರಿಂಗ್ ಬಗ್ಗೆ ಮತ್ತೆ ವಿವಾದ
RR vs MI, IPL 2025: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ರಿವ್ಯೂ ತೆಗೆದುಕೊಂಡ ನಂತರ, ಥರ್ಡ್ ಅಂಪೈರ್ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿರುವುದನ್ನು ಕಂಡುಕೊಂಡರು. ಅದಕ್ಕಾಗಿಯೇ ರೋಹಿತ್ ಔಟಾಗಲಿಲ್ಲ. ಇದಾದ ನಂತರ, ರೋಹಿತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು. ಅವರು ರಿಕ್ಟನ್ ಜೊತೆ 116 ರನ್‌ಗಳ ಜೊತೆಯಾಟ ಆಡಿದರು.

ಬೆಂಗಳೂರು (ಮೇ. 02): ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ (Rajasthan Royals vs Mumbai Indians) ನಡುವಿನ ಐಪಿಎಲ್ 2025 ರ ಪಂದ್ಯದಲ್ಲಿ ರೋಹಿತ್ ಶರ್ಮಾ ಡಿಆರ್‌ಎಸ್ ತೆಗೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿದೆ. ಪಂದ್ಯದ ವೇಳೆ ಅಂಪೈರ್ ರೋಹಿತ್‌ಗೆ ಔಟ್ ನೀಡಿದರು. ರೋಹಿತ್ ಡಿಆರ್‌ಎಸ್ ತೆಗೆದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಹೇಳುವಂತೆ ರೋಹಿತ್ ಅವರು 15 ಸೆಕೆಂಡುಗಳ ನಂತರ ಡಿಆರ್‌ಎಸ್ ತೆಗೆದುಕೊಂಡರು. ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.
ರೋಹಿತ್ ಡಿಆರ್‌ಎಸ್ ಬಗ್ಗೆ ವಿವಾದ:
ರೋಹಿತ್ ರಿವ್ಯೂ ತೆಗೆದುಕೊಂಡ ನಂತರ, ಥರ್ಡ್ ಅಂಪೈರ್ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿರುವುದನ್ನು ಕಂಡುಕೊಂಡರು. ಅದಕ್ಕಾಗಿಯೇ ರೋಹಿತ್ ಔಟಾಗಲಿಲ್ಲ. ಇದಾದ ನಂತರ, ರೋಹಿತ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದರು. ಅವರು ರಿಕ್ಟನ್ ಜೊತೆ 116 ರನ್‌ಗಳ ಜೊತೆಯಾಟ ಆಡಿದರು. ಈ ಪಂದ್ಯದಲ್ಲಿ ರೋಹಿತ್ ಮುಂಬೈ ಇಂಡಿಯನ್ಸ್ ಪರ 6000 ರನ್ ಗಳಿಸಿದರು. ಇದಕ್ಕೂ ಮೊದಲು ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಫಜಲ್ಹಕ್ ಫಾರೂಕಿ ರೋಹಿತ್ ಶರ್ಮಾ ಅವರನ್ನು ಎಲ್ಬಿಡಬ್ಲ್ಯೂ ಔಟ್ ಮಾಡಿದ್ದರು. ಅಂಪೈರ್ ಔಟ್ ಕೂಡ ನೀಡಿದರು. ಈ ಸಂದರ್ಭ ರೋಹಿತ್ ಡಿಆರ್‌ಎಸ್ ತೆಗೆದುಕೊಳ್ಳಲು ಸ್ವಲ್ಪ ಗೊಂದಲಕ್ಕೊಳಗಾಗಿದ್ದರು. 15 ಸೆಕೆಂಡುಗಳ ಸಮಯ ಮುಗಿಯುವುದರಲ್ಲಿತ್ತು.
Is Vinod Seshan travelling with MI team ??? He allowed Rohit to take review when timer was over.
It’s not coincidence any more. He has been involved as on field or third umpire in 7 out off 11 MI matches so far. pic.twitter.com/54QwPMsM5z
— Fearless🦁 (@ViratTheLegend) May 1, 2025
ರೋಹಿತ್ ಡಿಆರ್‌ಎಸ್ ತೆಗೆದುಕೊಳ್ಳುವುದಿಲ್ಲ ಎಂದು ತೋರುತ್ತಿತ್ತು. ಆದರೆ, ಟೈಮರ್ ಶೂನ್ಯ ತಲುಪಿದ ತಕ್ಷಣ, ಅವರು ಡಿಆರ್‌ಎಸ್‌ಗೆ ಸಿಗ್ನಲ್ ಮಾಡಿದರು. ಸಮಯ ಮುಗಿದ ನಂತರ ಅವರು ಡಿಆರ್‌ಎಸ್ ತೆಗೆದುಕೊಂಡರು ಎಂದು ಕೆಲವರು ಹೇಳುತ್ತಿದ್ದಾರೆ. ನಂತರ ಥರ್ಡ್ ಅಂಪೈರ್ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಬಿದ್ದಿರುವುದನ್ನು ನೋಡಿ ಅಂಪೈರ್ ನಿರ್ಧಾರ ಬದಲಾಯಿಸಿ ಎಂದು ಹೇಳಿದರು.
I’m a die-hard fan of Rohit Sharma, but this is a complete fixing, bro. I hope RR wins this match and Mumbai doesn’t win the final — whichever team reaches the final, let them win instead.#MIvsRR pic.twitter.com/y9Tuq9Nsgg
— Priyanshu Verma (@iPriyanshVerma) May 1, 2025
15 ಸೆಕೆಂಡುಗಳ ನಂತರ ತೆಗೆದುಕೊಂಡ DRS:
15 ಸೆಕೆಂಡುಗಳ ನಂತರ ರೋಹಿತ್ ಡಿಆರ್‌ಎಸ್‌ಗಾಗಿ ಸಿಗ್ನಲ್ ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳುತ್ತಿದ್ದಾರೆ. ಡಿಆರ್‌ಎಸ್ ನಿಯಮಗಳ ಪ್ರಕಾರ, ಆಟಗಾರರು 15 ಸೆಕೆಂಡುಗಳ ಒಳಗೆ ಡಿಆರ್‌ಎಸ್ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದೀಗ ಅಂಪೈರ್ ನಿರ್ಧಾರ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ರೋಹಿತ್ ಶರ್ಮಾ ತನಗೆ ಸಿಕ್ಕಿ ಅವಕಾಶವನ್ನು ಸಂಪೂರ್ಣ ಲಾಭ ಪಡೆದುಕೊಂಡು 36 ಎಸೆತಗಳಲ್ಲಿ 53 ರನ್ ಗಳಿಸಿದರು.
RR vs MI, IPL 2025: ಪ್ಲೇಆಫ್‌ನಿಂದ ಹೊರಬಿದ್ದ ನಂತರ ರಿಯಾನ್ ಪರಾಗ್ ನೋವಿನ ಮಾತು: ಏನು ಹೇಳಿದ್ರು?
ನಿರ್ಧಾರದ ಬಗ್ಗೆ ಉದ್ಭವಿಸುವ ಪ್ರಶ್ನೆ:
ರೋಹಿತ್ ಶರ್ಮಾ ಡಿಆರ್‌ಎಸ್ ತೆಗೆದುಕೊಂಡ ರೀತಿ ಬಗ್ಗೆ ಜನರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವರು ಸಮಯಕ್ಕೆ ಸರಿಯಾಗಿ ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ಕೆಲವರು ಅಂಪೈರ್ ನಿರ್ಧಾರ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ. ಈ ಘಟನೆಯು ಐಪಿಎಲ್‌ನಲ್ಲಿ ಡಿಆರ್‌ಎಸ್ ನಿಯಮಗಳ ಬಗ್ಗೆ ಮತ್ತೆ ಚರ್ಚೆಗೆ ನಾಂದಿ ಹಾಡಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




