Rajasthan Royals
Rajasthan Royals
ಐಪಿಎಲ್‌ನಲ್ಲಿ ಮಾರಾಟಕ್ಕಿವೆ 2 ತಂಡಗಳು..! ಸಂಚಲನ ಮೂಡಿಸಿದ 36000 ಕೋಟಿ ಒಡೆಯನ ಪೋಸ್ಟ್
IPL Franchise Sale: 2026ರ ಐಪಿಎಲ್ ಸಿದ್ಧತೆಗೂ ಮುನ್ನ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳು ಮಾರಾಟಕ್ಕಿವೆ ಎಂಬ ಸ್ಫೋಟಕ ಸುದ್ದಿ ಹರಿದಾಡುತ್ತಿದೆ. ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅನೇಕ ಸಂಭಾವ್ಯ ಖರೀದಿದಾರರು ಆಸಕ್ತಿ ತೋರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.
- pruthvi Shankar
- Updated on: Nov 28, 2025
- 4:05 pm
IPL 2026: ಟೈಗರ್ ಕಾ ಹುಕುಂ… ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸ ಕೋಚ್ ಎಂಟ್ರಿ
ಕುಮಾರ್ ಸಂಗಕ್ಕಾರ 2021 ಮತ್ತು 2024 ರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಅವರಿಗೆ ಆರ್ಆರ್ ತಂಡದ ನಿರ್ದೇಶಕನ ಹುದ್ದೆ ನೀಡಲಾಗಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಡೈರೆಕ್ಟರ್ ಹುದ್ದೆಯ ಜೊತೆ ಸಂಗಕ್ಕಾರ ಮುಖ್ಯ ಕೋಚ್ ಆಗಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ.
- Zahir Yusuf
- Updated on: Nov 17, 2025
- 12:55 pm
ಹಲ್ಲಾ ಬೋಲ್… ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ರವೀಂದ್ರ ಜಡೇಜಾ ಎಂಟ್ರಿ
Ravindra Jadeja: ಕಳೆದ 12 ವರ್ಷಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ 200 ಪಂದ್ಯಗಳನ್ನಾಡಿರುವ ರವೀಂದ್ರ ಜಡೇಜಾ 149 ಇನಿಂಗ್ಸ್ಗಳ ಮೂಲಕ 2354 ರನ್ ಕಲೆಹಾಕಿದ್ದಾರೆ. ಇದರ ನಡುವೆ 5 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ. ಅಷ್ಟೇ ಅಲ್ಲದೆ 3 ಬಾರಿ ಸಿಎಸ್ಕೆ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಜಡೇಜಾ ಪ್ರಮುಖ ಪಾತ್ರವಹಿಸಿದ್ದರು.
- Zahir Yusuf
- Updated on: Nov 15, 2025
- 10:53 am
IPL 2026: ನಾನು ತಂಡಕ್ಕೆ ಬರಬೇಕೆಂದರೆ..; ರಾಜಸ್ಥಾನ್ಗೆ ಬಿಸಿ ತುಪ್ಪವಾದ ರವೀಂದ್ರ ಜಡೇಜಾ ಷರತ್ತು
Ravindra Jadeja's Condition: ಐಪಿಎಲ್ 2026 ಮಿನಿ ಹರಾಜುಗೂ ಮುನ್ನ, ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಸಂಜು ಸ್ಯಾಮ್ಸನ್ ಹಾಗೂ ರವೀಂದ್ರ ಜಡೇಜಾ ವಿನಿಮಯ ವರದಿಯಾಗಿದೆ. ರಾಜಸ್ಥಾನ್ ಸೇರಲು ಜಡೇಜಾ ನಾಯಕತ್ವದ ಷರತ್ತು ವಿಧಿಸಿದ್ದು, ಫ್ರಾಂಚೈಸಿ ಒಪ್ಪಿಕೊಂಡಿದೆ ಎನ್ನಲಾಗಿದೆ. ಇದರಿಂದ ಸಂಜು ನಿರ್ಗಮನದಿಂದ ಹೊಸ ನಾಯಕನ ಅವಶ್ಯಕತೆ ಇದ್ದು, ಜಡೇಜಾ ಅವರ ಅನುಭವಕ್ಕೆ RR ಮಣೆ ಹಾಕಿದೆ. ಆದರೆ, ಈ ಒಪ್ಪಂದ ಯುವ ಆಟಗಾರರ ಮೇಲೆ ಪರಿಣಾಮ ಬೀರಲಿದೆ.
- pruthvi Shankar
- Updated on: Nov 12, 2025
- 4:56 pm
IPL 2026: ಸಿಎಸ್ಕೆ ಅಲ್ಲ.. ಈ ತಂಡಕ್ಕೆ ಸಂಜು ಸ್ಯಾಮ್ಸನ್ ಟ್ರೇಡ್?
Sanju Samson: ಐಪಿಎಲ್ 2026 ಕ್ಕಾಗಿ ಸಿದ್ಧತೆಗಳು ಶುರುವಾಗಿವೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬಂದು ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಕುರಿತು ಚರ್ಚೆ ನಡೆಯುತ್ತಿದೆ. ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ವಿಂಡೋ ಮೂಲಕ ಈ ವರ್ಗಾವಣೆ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಸಂಜುಗಾಗಿ ಆಸಕ್ತಿ ತೋರಿಸಿದ್ದು, ಐಪಿಎಲ್ ಟ್ರೇಡ್ ವಿಂಡೋ ನಿಯಮಗಳ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.
- pruthvi Shankar
- Updated on: Oct 15, 2025
- 9:19 pm
IPL 2026: ಸಂಜು ಸ್ಯಾಮ್ಸನ್ ರಿಲೀಸ್ ಖಚಿತ… ಆದರೆ
IPL 2026 Auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2026) ಹರಾಜು ಡಿಸೆಂಬರ್ ತಿಂಗಳ ಮೂರನೇ ವಾರದಲ್ಲಿ ನಡೆಯಲಿದೆ. ಈ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ರಿಟೈನ್ ಹಾಗೂ ರಿಲೀಸ್ ಪಟ್ಟಿಗಳನ್ನು ಸಿದ್ಧಪಡಿಸಿಕೊಳ್ಳಬೇಕಿದೆ. ಹೀಗೆ ರಾಜಸ್ಥಾನ್ ರಾಯಲ್ಸ್ ಸಿದ್ಧಪಡಿಸಿರುವ ರಿಲೀಸ್ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ ಹೆಸರು ಕೂಡ ಇದೆ ಎಂದು ವರದಿಯಾಗಿದೆ.
- Zahir Yusuf
- Updated on: Oct 12, 2025
- 7:53 am
IPL 2026: ತಂಡವೊಂದು ಮೂರು ಬಾಗಿಲಾದ ರಾಜಸ್ಥಾನ್ ರಾಯಲ್ಸ್
Rajasthan Royals: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ರಾಹುಲ್ ದ್ರಾವಿಡ್ ತ್ಯಜಿಸಿದ್ದಾರೆ. ಅತ್ತ ಪ್ರಸ್ತುತ ತಂಡದ ನಾಯಕ ಸಂಜು ಸ್ಯಾಮ್ಸನ್ ಕೂಡ ಆರ್ಆರ್ ತಂಡವನ್ನು ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲೇ ಕೆಲ ಭಿನ್ನಾಭಿಪ್ರಾಯಗಳು ಏರ್ಪಟ್ಟಿದೆ.
- Zahir Yusuf
- Updated on: Aug 31, 2025
- 8:31 am
Sanju Samson: ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತೊರೆಯಲು ಕಾರಣ ಬಹಿರಂಗ
Sanju Samson: ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಜೋಸ್ ಬಟ್ಲರ್ ಅವರ ಬಿಡುಗಡೆ ಈ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ. ಸಂಜು ಬಟ್ಲರ್ ಅವರನ್ನು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದರು ಆದರೆ ರಾಯಲ್ಸ್ ಬಟ್ಲರ್ ಅವರನ್ನು ಬಿಟ್ಟು ಹೆಟ್ಮೈರ್ ಅವರನ್ನು ಉಳಿಸಿಕೊಂಡಿತು. ಇದರಿಂದ ಅಸಮಾಧಾನಗೊಂಡ ಸಂಜು ತಂಡ ತೊರೆದಿರಬಹುದು ಎಂದು ವರದಿಯಾಗಿದೆ.
- pruthvi Shankar
- Updated on: Aug 14, 2025
- 7:33 pm
ಸಂಜು ಬದಲಿಗೆ ಸಿಎಸ್ಕೆ ಬಳಿ ಈ ಮೂವರು ಆಟಗಾರರಲ್ಲಿ ಒಬ್ಬರನ್ನು ಕೇಳಿದ ರಾಜಸ್ಥಾನ್?
Sanju Samson IPL Trade: ಐಪಿಎಲ್ ಟ್ರೇಡಿಂಗ್ ವಿಂಡೋ ತೆರೆದಿರುವ ಹಿನ್ನೆಲೆಯಲ್ಲಿ, ಸಂಜು ಸ್ಯಾಮ್ಸನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್‌ಗೆ ವರ್ಗಾಯಿಸುವ ಬಗ್ಗೆ ರಾಜಸ್ಥಾನ್ ರಾಯಲ್ಸ್ ಮತ್ತು CSK ನಡುವೆ ಮಾತುಕತೆ ನಡೆಯುತ್ತಿದೆ. ರಾಜಸ್ಥಾನ್, ಸಂಜು ಬದಲಾಗಿ ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ ಅಥವಾ ಶಿವಂ ದುಬೆ ಅವರಲ್ಲಿ ಒಬ್ಬರನ್ನು ಬಯಸುತ್ತಿದೆ. ಆದರೆ CSK, ಸಂಜು ಅವರನ್ನು ನಗದು ಮೊತ್ತಕ್ಕೆ ಪಡೆಯಲು ಬಯಸುತ್ತಿದೆ. ಒಪ್ಪಂದ ಕಾಣದಿದ್ದರೆ, ಸಂಜು ಹರಾಜಿನಲ್ಲಿ ಲಭ್ಯವಾಗಬಹುದು.
- pruthvi Shankar
- Updated on: Aug 13, 2025
- 8:47 pm
Sanju Samson: ರಾಜಸ್ಥಾನ್ ರಾಯಲ್ಸ್ ತಂಡವನ್ನು ತೊರೆಯಲಿದ್ದಾರೆ ಸಂಜು ಸ್ಯಾಮ್ಸನ್
Sanju Samson: ಐಪಿಎಲ್ ಟ್ರೇಡಿಂಗ್ ವಿಂಡೋ ತೆರೆದಿರುವ ಹಿನ್ನೆಲೆಯಲ್ಲಿ, ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ತಂಡ ಬಿಡುವ ಸಾಧ್ಯತೆ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಲವು ವರದಿಗಳ ಪ್ರಕಾರ ಸಂಜು ತಮ್ಮ ತಂಡದ ನಿರ್ವಹಣೆಯೊಂದಿಗೆ ಭಿನ್ನಾಭಿಪ್ರಾಯಗಳಿಂದಾಗಿ ತಂಡ ಬಿಡಲು ನಿರ್ಧರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಇತರ ತಂಡಗಳು ಸಂಜು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ವರದಿಯಾಗಿದೆ. ಆದರೆ ಇದಕ್ಕೆ ಇನ್ನೂ ಅಧಿಕೃತ ದೃಢೀಕರಣ ಸಿಕ್ಕಿಲ್ಲ.
- pruthvi Shankar
- Updated on: Aug 7, 2025
- 7:27 pm