IPL 2026: ರಾಜಸ್ಥಾನದಿಂದ ಹೊರಬಂದ ರಾಜಸ್ಥಾನ್ ರಾಯಲ್ಸ್
IPL 2026: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಎರಡು ಮೈದಾನಗಳಲ್ಲಿ ಕಣಕ್ಕಿಳಿಯಲಿದೆ. ಆದರೆ ರಾಜಸ್ಥಾನದ ಜೈಪುರದಲ್ಲಿ ಈ ಬಾರಿ ಪಂದ್ಯವಾಡುವುದಿಲ್ಲ. ಬದಲಿಗೆ ಎರಡು ಹೋಮ್ ಗ್ರೌಂಡ್ಗಳನ್ನು ಆಯ್ಕೆ ಮಾಡಿಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಹೊಸ ಹೋಮ್ ಗ್ರೌಂಡ್ನಲ್ಲಿ ಕಣಕ್ಕಿಳಿಯಲಿದೆ. ಅಂದರೆ ಈ ಹಿಂದೆ ಆಡುತ್ತಿದ್ದ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ಈ ಬಾರಿ ಆರ್ಆರ್ ಕಣಕ್ಕಿಳಿಯುವುದಿಲ್ಲ ಎಂದು ವರದಿಯಾಗಿದೆ.
ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಪದೇ ಪದೇ ಎಚ್ಚರಿಕೆ ನೀಡಿದ್ದರೂ ರಾಜಸ್ಥಾನ ಕ್ರಿಕೆಟ್ ಸಂಘವು ಇನ್ನೂ ಸಹ ಚುನಾವಣೆಯನ್ನು ನಡೆಸಿಲ್ಲ. ಹೀಗಾಗಿ ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸದಿರಲು ಬಿಸಿಸಿಐ ನಿರ್ಧರಿಸಿದೆ.
ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಬದಲಿ ಹೋಮ್ ಗ್ರೌಂಡ್ ಅನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಮುಂದಿನ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಎರಡು ಮೈದಾನಗಳಲ್ಲಿ ಕಣಕ್ಕಿಳಿಯಲಿದೆ. ಅದು ಸಹ ಅಸ್ಸಾಂ ಹಾಗೂ ಮಹಾರಾಷ್ಟ್ರದಲ್ಲಿ ಎಂಬುದು ವಿಶೇಷ.
ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧೀನದಲ್ಲಿರುವ ಪುಣೆಯ ಎಂಸಿಎ ಸ್ಟೇಡಿಯಂ ಅನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ತನ್ನ ತವರು ಮೈದಾನವಾಗಿ ಆಯ್ಕೆ ಮಾಡಿಕೊಂಡಿದೆ. ಈ ಮೈದಾನದಲ್ಲಿ ಆರ್ಆರ್ ನಾಲ್ಕರಿಂದ ಐದು ಪಂದ್ಯಗಳನ್ನಾಡಲಿದೆ ಎಂದು ವರದಿಯಾಗಿದೆ.
ಇನ್ನುಳಿದ ಹೋಮ್ ಗ್ರೌಂಡ್ ಮ್ಯಾಚ್ಗಳನ್ನು ಗುವಾಹಟಿಯ ಬರ್ಸಾಪರ ಸ್ಟೇಡಿಯಂನಲ್ಲಿ ಆಡಲಿದೆ. ಕಳೆದ ಕೆಲ ವರ್ಷಗಳಿಂದ ಬರ್ಸಾಪರ ಸ್ಟೇಡಿಯಂ ಅನ್ನು ರಾಜಸ್ಥಾನ್ ರಾಯಲ್ಸ್ ತನ್ನ ದ್ವಿತೀಯ ಹೋಮ್ ಗ್ರೌಂಡ್ ಆಗಿ ಆಯ್ಕೆ ಮಾಡಿಕೊಂಡಿದೆ. ಅದರಂತೆ ಪ್ರತಿ ಸೀಸನ್ನಲ್ಲೂ ಇಲ್ಲಿ 2 ಮ್ಯಾಚ್ಗಳನ್ನಾಡುತ್ತಿದ್ದು, ಈ ಬಾರಿ ಕೂಡ ಅದು ಮುಂದುವರೆಯಲಿದೆ.
