AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ತಂಡವೊಂದು ಮೂರು ಬಾಗಿಲಾದ ರಾಜಸ್ಥಾನ್ ರಾಯಲ್ಸ್

Rajasthan Royals: ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ರಾಹುಲ್ ದ್ರಾವಿಡ್ ತ್ಯಜಿಸಿದ್ದಾರೆ. ಅತ್ತ ಪ್ರಸ್ತುತ ತಂಡದ ನಾಯಕ ಸಂಜು ಸ್ಯಾಮ್ಸನ್ ಕೂಡ ಆರ್​ಆರ್ ತಂಡವನ್ನು ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೊಂದೆಡೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲೇ ಕೆಲ ಭಿನ್ನಾಭಿಪ್ರಾಯಗಳು ಏರ್ಪಟ್ಟಿದೆ.

ಝಾಹಿರ್ ಯೂಸುಫ್
|

Updated on: Aug 31, 2025 | 8:31 AM

Share
ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಕಳೆದ ಸೀಸನ್​ ಐಪಿಎಲ್​​ನಲ್ಲೇ ಜಗಜ್ಜಾಹೀರಾಗಿತ್ತು. ಈ ಜಾಹೀರಾಗುವಿಕೆಯನ್ನು ಪುಷ್ಠೀಕರಿಸುವಂತೆ ಇದೀಗ ಒಂದಷ್ಟು ವಿಚಾರಗಳು ಹೊರಬೀಳುತ್ತಿದೆ. ಅದರಲ್ಲೂ ಮುಖ್ಯ ಕೋಚ್ ಹುದ್ದೆಯಿಂದ ರಾಹುಲ್ ದ್ರಾವಿಡ್ ಹೊರ ನಡೆದ ಬೆನ್ನಲ್ಲೇ ತಂಡದ ಇನ್​​ಸೈಡ್ ವಿಷಯವೊಂದು ಹೊರಬಿದ್ದಿದೆ.

1 / 6
ರಾಜಸ್ಥಾನ್ ರಾಯಲ್ಸ್ ಮೂಲಗಳ ಮಾಹಿತಿ ಪ್ರಕಾರ, ನಾಯಕತ್ವದ ವಿಷಯದಲ್ಲಿ ಫ್ರಾಂಚೈಸಿಯಲ್ಲೇ ಗೊಂದಲ ಏರ್ಪಟ್ಟಿದೆ. ಅಂದರೆ ಮುಂದಿನ ಸೀಸನ್​ನಲ್ಲಿ ಯಾರನ್ನು ನಾಯಕರನ್ನಾಗಿಸಬೇಕೆಂಬ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಈ ಭಿನ್ನಾಭಿಪ್ರಾಯಗಳನ್ನು ಹೊಂದಿರುವವರು ಒಬ್ಬಬ್ಬೊರನ್ನು ನಾಯಕರನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದಿರುವುದೇ ಸಮಸ್ಯೆ.

2 / 6
ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಒಂದು ಗುಂಪು ಪ್ರಸ್ತುತ ತಂಡದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಅವರನ್ನೇ ನಾಯಕನಾಗಿ ಮುಂದುವರೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಇದಕ್ಕೆ ಫ್ರಾಂಚೈಸಿಯ ಕೆಲವರಿಂದ ಆಕ್ಷೇಪಣೆಯಿದೆ ಎಂದು ವರದಿಯಾಗಿದೆ.

3 / 6
ಮತ್ತೊಂದೆಡೆ ಫ್ರಾಂಚೈಸಿಯ ಒಂದು ಗ್ರೂಪ್ ರಿಯಾನ್ ಪರಾಗ್ ಅವರನ್ನು ನಾಯಕನಾಗಿ ಆಯ್ಕೆ ಮಾಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪರಾಗ್ ಆಲ್​ರೌಂಡರ್ ಆಟಗಾರ, ಭವಿಷ್ಯದ ದೃಷ್ಟಿಯಲ್ಲಿ ಈಗಾಲೇ ನಾಯಕತ್ವ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಅವರು ಮುಂದಿಡುತ್ತಿದ್ದಾರೆ.

4 / 6
ಆರ್​ಆರ್ ಫ್ರಾಂಚೈಸಿಯ ಇನ್ನೊಂದು ಗ್ರೂಪ್ ಯಶಸ್ವಿ ಜೈಸ್ವಾಲ್ ಅವರಿಗೆ ನಾಯಕತ್ವ ನೀಡಬೇಕೆಂದು ಆಗ್ರಹಿಸಿದ್ದಾರೆ. ಜೈಸ್ವಾಲ್ ಕಳೆದ ಕೆಲ ವರ್ಷಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದಾರೆ. ಅಲ್ಲದೆ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಭವಿಷ್ಯ ದೃಷ್ಟಿಯಿಂದ ಜೈಸ್ವಾಲ್​ಗೆ ಕ್ಯಾಪ್ಟನ್ ಪಟ್ಟ ನೀಡುವುದು ಉತ್ತಮ ಎಂದು ಅಭಿಪ್ರಾಯಪಡುತ್ತಿದ್ದಾರೆ.

5 / 6
ಹೀಗೆ ನಾಯಕನ ಆಯ್ಕೆ ವಿಚಾರದಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯಲ್ಲೇ ಗೊಂದಲ ಏರ್ಪಟ್ಟಿದೆ. ಈ ಗೊಂದಲದೊಂದಿಗೆ ಐಪಿಎಲ್ ಸೀಸನ್-19 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ತಂಡದ ಮುಂದಿನ ನಾಯಕ ಯಾರಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

6 / 6
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ

ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು

ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?

ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ

ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ

‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ

ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ

400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?

ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ

ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ