IPL 2026: ಟೈಗರ್ ಕಾ ಹುಕುಂ… ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಹೊಸ ಕೋಚ್ ಎಂಟ್ರಿ
ಕುಮಾರ್ ಸಂಗಕ್ಕಾರ 2021 ಮತ್ತು 2024 ರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಅವರಿಗೆ ಆರ್ಆರ್ ತಂಡದ ನಿರ್ದೇಶಕನ ಹುದ್ದೆ ನೀಡಲಾಗಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಡೈರೆಕ್ಟರ್ ಹುದ್ದೆಯ ಜೊತೆ ಸಂಗಕ್ಕಾರ ಮುಖ್ಯ ಕೋಚ್ ಆಗಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 19ರ ಹರಾಜಿಗೂ ಮುಂಚಿತವಾಗಿ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಮರುನೇಮಕ ಮಾಡಲಾಗಿದೆ. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾರ್ಯ ನಿರ್ವಹಿಸಿದ್ದರು. ಇದೀಗ ಸಂಗಕ್ಕಾರ ಅವರನ್ನು ಹೆಡ್ ಕೋಚ್ ಹುದ್ದೆಯಲ್ಲಿ ಕೂರಿಸಲಾಗಿದೆ.
ಕುಮಾರ್ ಸಂಗಕ್ಕಾರ 2021 ಮತ್ತು 2024 ರ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಅವರಿಗೆ ಆರ್ಆರ್ ತಂಡದ ನಿರ್ದೇಶಕನ ಹುದ್ದೆ ನೀಡಲಾಗಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಡೈರೆಕ್ಟರ್ ಹುದ್ದೆಯ ಜೊತೆ ಸಂಗಕ್ಕಾರ ಮುಖ್ಯ ಕೋಚ್ ಆಗಿಯೂ ಸಹ ಕಾಣಿಸಿಕೊಳ್ಳಲಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡ: ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡೊನೊವನ್ ಫೆರೇರಾ , ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್-ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್, ಯದುವೀರ್ ಸಿಂಗ್ ಚರಕ್, ತುಷಾರ್ ದೇಶಪಾಂಡೆ, ಕ್ವೆನಾ ಮಫಕಾ, ನಾಂಡ್ರೆ ಬರ್ಗರ್, ಜೋಫ್ರಾ ಆರ್ಚರ್.
ರಾಜಸ್ಥಾನ್ ರಾಯಲ್ಸ್ ರಿಲೀಸ್ ಮಾಡಿದ ಆಟಗಾರರು: ಸಂಜು ಸ್ಯಾಮ್ಸನ್ (ಸಿಎಸ್ಕೆ ಟ್ರೇಡ್), ನಿತೀಶ್ ರಾಣಾ (ಡೆಲ್ಲಿ ಕ್ಯಾಪಿಟಲ್ಸ್‌ಗೆ ಟ್ರೇಡ್), ವನಿಂದು ಹಸರಂಗ, ಮಹೇಶ್ ತೀಕ್ಷಣ, ಫಝಲ್‌ಹಕ್ ಫಾರೂಕಿ, ಕುನಾಲ್ ಸಿಂಗ್ ರಾಥೋಡ್, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಅಶೋಕ್ ಶರ್ಮಾ.