ಬಿಗ್ ಬಾಸ್ನಿಂದ ಹೊರ ಬರಲು ಅಶ್ವಿನಿ-ಜಾನ್ವಿ ಕಾರಣವಾದ್ರಾ? ಉತ್ತರಿಸಿದ ಸುಧಿ
‘ಬಿಗ್ ಬಾಸ್ ಮನೆಯಲ್ಲಿ ಸುಧಿ ಅವರು ಹೊರ ಬಂದಿದ್ದಾರೆ. ಅವರ ಎಲಿಮಿನೇಷನ್ಗೆ ಕಾಣ ಹಲವು ಇವೆ. ಇದರಲ್ಲಿ ಪ್ರಮುಖವಾಗಿ ಪ್ರಭಾವ ಬೀರಿದ್ದು ಯಾವುದು ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ. ಈ ಬಗ್ಗೆ ಸುಧಿ ಅವರೇ ಉತ್ತರ ನೀಡಿದರು. ಆ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಏಳನೇ ವಾರದಲ್ಲಿ ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಅವರು ಎಲಿಮಿನೇಷನ್ ಆಗಲು ಕಾರಣ ಹಲವು. ‘ಅಶ್ವಿನಿ ಹಾಗೂ ಜಾನ್ವಿ ಗುಂಪಿನಿಂದ ದೂರ ಇದ್ದಿದ್ರೆ ಸಹಾಯ ಆಗುತ್ತಿತ್ತು’ ಎಂದು ಸುಧಿ ಪತ್ನಿಯೇ ಹೇಳಿದ್ದರು. ಈ ಬಗ್ಗೆ ಸುಧಿ ಮಾತನಾಡಿದ್ದಾರೆ. ‘ಜಾನ್ವಿ, ಅಶ್ವಿನಿ ಅವರೆಲ್ಲ ಒಂಟಿ ತಂಡದಲ್ಲಿ ಇದ್ದರು. ಹೀಗಾಗಿ, ಅವರ ಜೊತೆ ಒಳ್ಳೆಯ ಗೆಳೆತನ ಬೆಳೆಯಿತು. ಅವರು ನಮ್ಮದೇ ಏಜ್ ಗ್ರೂಪ್ನವರು. ಬಿಗ್ ಬಾಸ್ನಲ್ಲಿ ಹಲವು ಗ್ರೂಪ್ಗಳು ಇವೆ. ಬಹುಶಃ ನಮ್ಮ ಗ್ರೂಪಿಸಂ ಸ್ವಲ್ಪ ಹೆಚ್ಚಾಗಿ ಕಾಣಿಸಿತೇನೋ’ ಎಂದು ಸುಧಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ

