AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್‌ನಲ್ಲಿ ಮಾರಾಟಕ್ಕಿವೆ 2 ತಂಡಗಳು..! ಸಂಚಲನ ಮೂಡಿಸಿದ 36000 ಕೋಟಿ ಒಡೆಯನ ಪೋಸ್ಟ್

IPL Franchise Sale: 2026ರ ಐಪಿಎಲ್ ಸಿದ್ಧತೆಗೂ ಮುನ್ನ ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳು ಮಾರಾಟಕ್ಕಿವೆ ಎಂಬ ಸ್ಫೋಟಕ ಸುದ್ದಿ ಹರಿದಾಡುತ್ತಿದೆ. ಖ್ಯಾತ ಉದ್ಯಮಿ ಹರ್ಷ್ ಗೋಯೆಂಕಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಅನೇಕ ಸಂಭಾವ್ಯ ಖರೀದಿದಾರರು ಆಸಕ್ತಿ ತೋರಿಸಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಐಪಿಎಲ್‌ನಲ್ಲಿ ಮಾರಾಟಕ್ಕಿವೆ 2 ತಂಡಗಳು..! ಸಂಚಲನ ಮೂಡಿಸಿದ 36000 ಕೋಟಿ ಒಡೆಯನ ಪೋಸ್ಟ್
Ipl 2026
ಪೃಥ್ವಿಶಂಕರ
|

Updated on:Nov 28, 2025 | 4:05 PM

Share

2026 ರ ಐಪಿಎಲ್ (IPL 2026) ಆರಂಭಕ್ಕೆ ಇನ್ನು ಸಾಕಷ್ಟು ಸಮಯವಿದೆ. ಅದಕ್ಕೂ ಮುನ್ನ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಆ ನಂತರ ಮಿನಿ ಹರಾಜು ನಡೆಯಬೇಕು. ಅದಾದ ಬಳಿಕ ಐಪಿಎಲ್ ವೇಳಾಪಟ್ಟಿ ಪ್ರಕಟವಾಗಲಿದೆ. ಆದರೆ ಅದಕ್ಕೂ ಮುನ್ನ ಐಪಿಎಲ್ ಫ್ರಾಂಚೈಸಿಗಳು ಮಾರಾಟಕ್ಕಿವೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಅದರಲ್ಲಿ ಒಂದು ಕಳೆದ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ. ಮೂಲಗಳ ಪ್ರಕಾರ ಆರ್​ಸಿಬಿ ಮಾರಾಟಕ್ಕಿರುವುದು ಖಚಿತವಾಗಿದೆ. ಇದೀಗ ಇದರ ಜೊತೆಗೆ ಮತ್ತೊಂದು ಫ್ರಾಂಚೈಸಿ ಮಾರಾಟಕ್ಕಿದೆ ಎಂಬ ಸ್ಫೋಟಕ ಮಾಹಿತಿಯನ್ನು ಹೆಸರಾಂತ ಉದ್ಯಮಿ ಹರ್ಷ್ ಗೋಯೆಂಕಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹರ್ಷ್ ಗೋಯೆಂಕಾ ಅವರ ಪ್ರಕಾರ ಆರ್​ಸಿಬಿ ಜೊತೆಗೆ ರಾಜಸ್ಥಾನ್ ರಾಯಲ್ಸ್ (Rajasthan Royals) ಫ್ರಾಂಚೈಸಿ ಕೂಡ ಮಾರಾಟಕ್ಕಿದೆ.

ಹರ್ಷ್ ಗೋಯೆಂಕಾ ಪೋಸ್ಟ್ ವೈರಲ್

ಪ್ರಸ್ತುತ ಐಪಿಎಲ್ ಚಾಂಪಿಯನ್‌ ಮತ್ತು ಲೀಗ್‌ನ ಮೊದಲ ಚಾಂಪಿಯನ್ ಫ್ರಾಂಚೈಸಿಗಳು ಮಾರಾಟಕ್ಕಿವೆ ಎಂದು ವರದಿಯಾಗಿದೆ ಎಂದು ಸಿಇಎಟಿ ಟೈರ್ ಉತ್ಪಾದನಾ ಕಂಪನಿಯ ಮಾಲೀಕ ಹರ್ಷ್ ಗೋಯೆಂಕಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಬರೆದುಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಗೋಯೆಂಕಾ ತಮ್ಮ ‘X’ ಖಾತೆಯಲ್ಲಿ, ‘ಕೇವಲ ಒಂದು ತಂಡವಲ್ಲ, ಎರಡು ಐಪಿಎಲ್ ತಂಡಗಳು ಮಾರಾಟಕ್ಕಿವೆ ಎಂಬ ಸುದ್ದಿ ಕೇಳಿಬರುತ್ತಿದೆ. ಆರ್​ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಮಾರಾಟಕ್ಕಿದ್ದು, ನಾಲ್ಕು ಅಥವಾ ಐದು ಸಂಭಾವ್ಯ ಖರೀದಿದಾರರು ಇದ್ದಾರೆ. ಈ ತಂಡಗಳನ್ನು ಖರೀದಿಸುವಲ್ಲಿ ಯಾರು ಯಶಸ್ವಿಯಾಗುತ್ತಾರೆ – ಪುಣೆ, ಅಹಮದಾಬಾದ್, ಮುಂಬೈ, ಬೆಂಗಳೂರು ಅಥವಾ ಯುಎಸ್​ಎ ನಿಂದ ಬರುತ್ತಾರೆಯೇ?’ ಎಂದು ಬರೆದುಕೊಂಡಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ನ ಮಾಲೀಕರು ಯಾರು?

ಆದಾಗ್ಯೂ, ರಾಜಸ್ಥಾನ್ ರಾಯಲ್ಸ್‌ನ ಮಾಲೀಕರು ಸಂಪೂರ್ಣ ಫ್ರಾಂಚೈಸಿಯನ್ನು ಮಾರಾಟ ಮಾಡಲು ನೋಡುತ್ತಿದ್ದಾರೆಯೇ ಅಥವಾ ಒಂದು ಭಾಗವನ್ನು ಮಾತ್ರ ಮಾರಾಟ ಮಾಡಲು ನೋಡುತ್ತಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ರಾಜಸ್ಥಾನ್ ರಾಯಲ್ಸ್ ಪ್ರಸ್ತುತ ರಾಯಲ್ ಮಲ್ಟಿಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ, ಇದು ಭಾರತೀಯ ಮೂಲದ ಬ್ರಿಟಿಷ್ ಉದ್ಯಮಿ ಮನೋಜ್ ಬಡಾಳೆ ಅವರ ಅತಿದೊಡ್ಡ ಪಾಲನ್ನು ಹೊಂದಿದೆ. ಅವರು ಪ್ರಸಿದ್ಧ ಅಮೇರಿಕನ್ ಹೂಡಿಕೆ ಸಂಸ್ಥೆ ರೆಡ್‌ಬರ್ಡ್ ಕ್ಯಾಪಿಟಲ್ ಜೊತೆಗೆ ಫ್ರಾಂಚೈಸಿಯಲ್ಲಿ ಪಾಲನ್ನು ಹೊಂದಿದ್ದಾರೆ. ಪ್ರಸ್ತುತ, ರಾಯಲ್ಸ್ ಅಂತಹ ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ.

ಸಹೋದರರ ನಡುವೆ ಪೈಪೋಟಿ?

ಒಂದು ಪ್ರಶ್ನೆಯೆಂದರೆ ಹರ್ಷ ಗೋಯೆಂಕಾ ಸ್ವತಃ ಈ ಫ್ರಾಂಚೈಸಿಗಳಲ್ಲಿ ಒಂದನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆಯೇ ಎಂಬುದು. ಸರಿಸುಮಾರು 36,000 ಕೋಟಿ ನಿವ್ವಳ ಮೌಲ್ಯದೊಂದಿಗೆ, ಹರ್ಷ್ ಗೋಯೆಂಕಾ ದೇಶದ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು ಮತ್ತು ಆರ್‌ಪಿಜಿ ಗ್ರೂಪ್‌ನ ಮಾಲೀಕರು. ಹರ್ಷ್ ಗೋಯೆಂಕಾ ಅವರ ಕಿರಿಯ ಸಹೋದರ ಸಂಜೀವ್ ಗೋಯೆಂಕಾ ಐಪಿಎಲ್‌ನ ಹೊಸ ಮತ್ತು ಅತ್ಯಂತ ದುಬಾರಿ ಫ್ರಾಂಚೈಸ್, ಲಕ್ನೋ ಸೂಪರ್ ಜೈಂಟ್ಸ್ ಅನ್ನು ಹೊಂದಿದ್ದಾರೆ. ಹೀಗಿರುವಾಗ ಮುಂಬರುವ ದಿನಗಳಲ್ಲಿ ಐಪಿಎಲ್‌ನಲ್ಲಿ ಇಬ್ಬರು ಸಹೋದರರ ನಡುವೆ ಪರಸ್ಪರ ಸ್ಪರ್ಧೆ ನಡೆಯಲಿದೇಯಾ ಎಂಬುದು ಕುತೂಹಲ ಮೂಡಿಸಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:03 pm, Fri, 28 November 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ