IPL 2025: ಐಪಿಎಲ್ನಿಂದ ಹೊರಬಿದ್ದ ರಾಜಸ್ಥಾನ್ ವೇಗಿ ಸಂದೀಪ್ ಶರ್ಮಾ
Sandeep Sharma Injury: ರಾಜಸ್ಥಾನ ರಾಯಲ್ಸ್ ತಂಡ ಐಪಿಎಲ್ 2025ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ಈಗಾಗಲೇ ಒಂಬತ್ತನೇ ಸ್ಥಾನದಲ್ಲಿರುವ ತಂಡಕ್ಕೆ ಪ್ರತಿ ಪಂದ್ಯವೂ ಮಹತ್ವದ್ದಾಗಿದೆ. ಈ ಸಮಯದಲ್ಲಿ, ಅನುಭವಿ ವೇಗಿ ಸಂದೀಪ್ ಶರ್ಮಾ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಬಲಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಸಂದೀಪ್ ಈ ಸೀಸನ್‌ನಲ್ಲಿ ಉಳಿದಿರುವ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ.

ಐಪಿಎಲ್ 2025 (IPL 2025) ರಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡ ತುಂಬಾ ನಿರಾಶಾದಾಯಕ ಪ್ರದರ್ಶನ ನೀಡಿದೆ. ಆಡಿದ 9 ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಮಾತ್ರ ಜಯಗಳಿಸಿದ್ದು ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಹೀಗಾಗಿನ ರಾಜಸ್ಥಾನ್ ತಂಡಕ್ಕೆ ಪ್ರತಿಯೊಂದು ಪಂದ್ಯವೂ ಮಾಡು ಇಲ್ಲವೇ ಮಡಿಯಂತ್ತಾಗಿದೆ. ಒಂದೇ ಒಂದು ಸೋಲು ಕೂಡ ತಂಡವನ್ನು ಪ್ಲೇಆಫ್‌ನಿಂದ ಹೊರ ಹಾಕಬಹುದು. ಇಂತಹ ಒತ್ತಡದ ಸಮಯದಲ್ಲಿ ರಾಜಸ್ಥಾನ್ ತಂಡಕ್ಕೆ ಆಘಾತಕ್ಕಾರಿ ಸುದ್ದಿ ಎದುರಾಗಿದೆ. ತಂಡದ ಅನುಭವಿ ವೇಗದ ಬೌಲರ್ ಸಂದೀಪ್ ಶರ್ಮಾ (Sandeep Sharma) ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದಿದ್ದಾರೆ.
ಐಪಿಎಲ್ನಿಂದ ಸಂದೀಪ್ ಶರ್ಮಾ ಔಟ್
ಏಪ್ರಿಲ್ 28 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಸಂದೀಪ್ ಶರ್ಮಾ ಗಾಯಗೊಂಡಿದ್ದರು. ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನ 16 ನೇ ಓವರ್ ಎಸೆದಿದ್ದ ಸಂದೀಪ್ ಶರ್ಮಾ ಅವರ ನಾಲ್ಕನೇ ಎಸೆತವನ್ನು ಗಿಲ್ ಚೆಂಡನ್ನು ಡ್ರೈವ್ ಮಾಡಿದರು. ಸಂದೀಪ್ ತನ್ನ ಫಾಲೋ ಥ್ರೂನಲ್ಲಿ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಅವರ ಬಲಗೈ ಬೆರಳಿಗೆ ಗಾಯವಾಯಿತು. ಇದರ ಹೊರತಾಗಿಯೂ, ಅವರು ಬೌಲಿಂಗ್ ಮುಂದುವರಿಸಿ ನಾಲ್ಕು ಓವರ್‌ಗಳ ಕೋಟಾವನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಅವರು 4 ಓವರ್‌ಗಳಲ್ಲಿ 33 ರನ್‌ಗಳಿಗೆ ಒಂದು ವಿಕೆಟ್ ಪಡೆದರು.
Clapping for this warrior who fractured his finger but still put his body on the line to complete his spell for the team! 💗
Get well soon Sandy and comeback stronger 💪 pic.twitter.com/UA9aZTJOKr
— Rajasthan Royals (@rajasthanroyals) May 1, 2025
ಮೇ 1 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಂದೀಪ್ ಶರ್ಮಾ ತಂಡದ ಬಸ್ಸಿನಿಂದ ಇಳಿಯುವಾಗ ಅವರ ಬಲಗೈಗೆ ಬ್ಯಾಂಡೇಜ್ ಹಾಕಲಾಗಿತ್ತು. ರಾಜಸ್ಥಾನ ರಾಯಲ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ವಿಡಿಯೋವನ್ನು ಹಂಚಿಕೊಂಡಿದೆ. ಅದರಲ್ಲಿ ಬೆರಳಿನಲ್ಲಿ ಮೂಳೆ ಮುರಿತವಾಗಿದ್ದರೂ ತಂಡಕ್ಕಾಗಿ ತನ್ನ ದೇಹವನ್ನು ಪಣಕ್ಕಿಟ್ಟು ತನ್ನ ಖೋಟಾವನ್ನು ಪೂರ್ಣಗೊಳಿಸಿದ ಈ ಯೋಧನಿಗೆ ಚಪ್ಪಾಳೆ ತಟ್ಟಿ ಎಂದು ಬರೆದುಕೊಂಡಿದೆ.
IPL 2025: ಕೊದಲೆಳೆ ಅಂತರದಲ್ಲಿ ಸಿಕ್ಕ ಜೀವದಾನ; ವಿಶೇಷ ದಾಖಲೆ ಬರೆದ ರೋಹಿತ್ ಶರ್ಮಾ
ಸಂದೀಪ್ ಪ್ರದರ್ಶನ
ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಸಂದೀಪ್ ಶರ್ಮಾ ಈ ಸೀಸನ್‌ನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿದ್ದು, 9.89 ಎಕಾನಮಿಯಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಐಪಿಎಲ್‌ನಲ್ಲಿ ಅವರ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಅವರು ಇಲ್ಲಿಯವರೆಗೆ 137 ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 8.03 ಸರಾಸರಿಯಲ್ಲಿ 146 ವಿಕೆಟ್‌ಗಳನ್ನು ಪಡೆದಿದ್ದಾರೆ. ಸಂದೀಪ್ ಶರ್ಮಾ ಅವರನ್ನು ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಕರೆಯಲಾಗುತ್ತದೆ. ಇದಕ್ಕೆ ಪೂರಕವಾಗಿ ಅವರು ಕೊನೆಯ ಓವರ್‌ಗಳಲ್ಲಿ ಎಷ್ಟೋ ಬಾರಿ ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:57 pm, Thu, 1 May 25
