AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸೂರು-ಬೆಂಗಳೂರು ರಸ್ತೆಯಲ್ಲಿ ಸಂಚಾರ ದಟ್ಟಣೆ: ಮಡಿವಾಳ ವ್ಯಾಪ್ತಿಯಲ್ಲಿ ಟ್ರಾಫಿಕ್ ಮಾರ್ಗ ಬದಲಾವಣೆ

ಬೆಂಗಳೂರಿನ ಹೊಸೂರು-ಮಡಿವಾಳ ರಸ್ತೆಯಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೊಸ ಮಾರ್ಗ ಬದಲಾವಣೆಯನ್ನು ಜಾರಿಗೊಳಿಸಲಾಗಿದೆ. ಪ್ರತಿದಿನ ಬೆಳಗ್ಗೆ 8 ರಿಂದ 10:30ರ ವರೆಗೆ ಈ ಪ್ರಾಯೋಗಿಕ ನಿಯಮಗಳು ಜಾರಿಯಲ್ಲಿರುತ್ತವೆ. ಸಾರ್ವಜನಿಕರು ಬದಲಿ ಮಾರ್ಗಗಳನ್ನು ಬಳಸಿಕೊಂಡು ಪೊಲೀಸರೊಂದಿಗೆ ಸಹಕರಿಸಬೇಕೆಂದು ಮಡಿವಾಳ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಹೊಸೂರು-ಬೆಂಗಳೂರು ರಸ್ತೆಯಲ್ಲಿ ಸಂಚಾರ ದಟ್ಟಣೆ: ಮಡಿವಾಳ ವ್ಯಾಪ್ತಿಯಲ್ಲಿ ಟ್ರಾಫಿಕ್ ಮಾರ್ಗ ಬದಲಾವಣೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Aug 05, 2026 | 10:26 PM

Share

ಬೆಂಗಳೂರು ಆ. 5: ಹೊಸೂರು-ಬೆಂಗಳೂರು ರಸ್ತೆಯಲ್ಲಿ ದಿನೇ ದಿನೇ ಸಂಚಾರ ದಟ್ಟಣೆ (Traffic Jam) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಂಚಾರ ಸುಗಮಗೊಳಿಸಲು ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ಪೊಲೀಸರು ಪ್ರಾಯೋಗಿಕವಾಗಿ ಹೊಸ ಮಾರ್ಗ ಬದಲಾವಣೆಯನ್ನು (Traffic Diversion) ಜಾರಿಗೆ ತಂದಿದ್ದಾರೆ. ಈ ನೂತನ ಸಂಚಾರ ನಿಯಮಗಳು ಪ್ರತಿದಿನ ಬೆಳಗ್ಗೆ 8:00 ರಿಂದ 10:30 ರವರೆಗೆ ಜಾರಿಯಲ್ಲಿರಲಿವೆ.

ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಬರುವ ಎಲ್ಲಾ ವಾಹನಗಳಿಗೆ ಸರ್ಜಾಪುರ ರಸ್ತೆ ಜಂಕ್ಷನ್‌ನಲ್ಲೇ ಪ್ರವೇಶ ನಿಷೇಧಿಸಲಾಗಿದೆ. 100 ಅಡಿ ರಸ್ತೆಯಿಂದ ವಾಟರ್ ಟ್ಯಾಂಕ್ ಜಂಕ್ಷನ್ ಮೂಲಕ ಅಯ್ಯಪ್ಪ ಜಂಕ್ಷನ್‌ಗೆ ಬಂದು, ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ತೆರಳುವ ವಾಹನಗಳಿಗೆ ಅಯ್ಯಪ್ಪ ಜಂಕ್ಷನ್‌ನಲ್ಲಿ ನಿಷೇಧ ಹೇರಲಾಗಿದೆ.

ಸರ್ಜಾಪುರ ರಸ್ತೆ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಕಡೆಗೆ ಹಾಗೂ ವಾಟರ್ ಟ್ಯಾಂಕ್ ಜಂಕ್ಷನ್ ಕಡೆಯಿಂದ ಅಯ್ಯಪ್ಪ ಜಂಕ್ಷನ್ ಮೂಲಕ ಮಡಿವಾಳ ಠಾಣೆ ಕಡೆಗೆ ಹೋಗುವ ವಾಹನಗಳು ಕೃಪಾನಿಧಿ ಜಂಕ್ಷನ್/ಸರ್ಜಾಪುರ ರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ವಾಟರ್ ಟ್ಯಾಂಕ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದುಕೊಳ್ಳಬೇಕು. ಬಳಿಕ ಮಡಿವಾಳ ಮಾರುಕಟ್ಟೆ ರಸ್ತೆ ಮೂಲಕ ಸಾಗಿ, ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಹೊಸೂರು ಮುಖ್ಯರಸ್ತೆಯ ಮೂಲಕ ಮುಂದೆ ಸಂಚರಿಸಬಹುದು.

ಇದನ್ನೂ ಓದಿ: 120 ಕೋಟಿ ಮಠದ ಜಮೀನು ಕಬಳಿಕೆ ಕೇಸ್: ಕೊನೆಗೂ ಪೊಲೀಸರ ಮುಂದೆ ಹಾಜರಾದ ಕಿಂಗ್‌ಪಿನ್ ನರೇಶ್ ಗೌಡ

ಸಾರ್ವಜನಿಕರು ಹಾಗೂ ಸವಾರರು ಪೊಲೀಸರೊಂದಿಗೆ ಸಹಕರಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಡಿವಾಳ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
ಓಂಪ್ರಕಾಶ್ ರಾವ್ ನನ್ನ ಗುರುಗಳು: ‘ಪ್ರೇಮದ ಊರಲಿ’ ಡೈರೆಕ್ಟರ್ ಹೆಮ್ಮೆಯ ಮಾತು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
‘ಪ್ರೇಮದ ಊರಲಿ’ ನಟಿಯರಿಗೆ ಕನ್ನಡದ ಬಗ್ಗೆ ಸಂಕಲ್ಪ ಮಾಡಿಸಿದ ರಂಗಾಯಣ ರಘು
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಕೊನೆಗೂ ತಾಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಮುಹೂರ್ತ ಫಿಕ್ಸ್
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಂಪುಟ ಅನುಮೋದನೆ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ದಸರಾ, ದೀಪಾವಳಿ ಹೊತ್ತಲ್ಲೇ ಬೆಲೆ ಏರಿಕೆ ಶಾಕ್: ಹಾಲಿನ ದರ 8 ರೂ. ಹೆಚ್ಚಳ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಕೆಪಿಎಸ್​ಸಿ ಅಕ್ರಮ: ಮಾಜಿ ಅಧ್ಯಕ್ಷ ಶಿವಶಂಕರಪ್ಪ,ಸದಸ್ಯೆ ಗೀತಾ ಇಡಿ ವಶಕ್ಕೆ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ಬಿಗ್​​ಬಾಸ್ ಕನ್ನಡ: ‘ಅಯ್ಯೋ ಉರಿ’ ಕಣ್ಣೀರು ಹಾಕಿದ ಕಿರಣ್ ಶಾಸ್ತ್ರಿ
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ನಮ್ಮ್ ಸಿಎಂ ಫೋನ್‌ಗೆ ಸಿಗಲ್ಲ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ದಾವಣಗೆರೆ: ಭತ್ತದ ವ್ಯಾಪಾರಿಯಿಂದ 4 ಕೋಟಿ ವಂಚನೆ ಆರೋಪ
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!
ಪ್ರತಿಭಟನೆ ವೇಳೆ ಬ್ಯಾರಿಕೇಡ್ ಹತ್ತಿ ಧ್ವಜ ಬೀಸಿದ ರಾಹುಲ್ ಗಾಂಧಿ!