ಸರ್ಟಿಫಿಕೇಟ್ ಕೊಡುವ ಲ್ಯಾಬ್‍ಗಳೇ ಫೇಕ್:ಬ್ರಾಂಡೆಡ್ ತಿನಿಸುಗಳ ಶಾಕಿಂಗ್ ಸತ್ಯ ಬಯಲು
ನೀವು ನಿಮ್ಮ ಮಕ್ಕಳಿಗೆ ಬ್ರಾಂಡೆಡ್ ಅಂತಾ ಟೆಟ್ರಾಪ್ಯಾಕ್ ಜ್ಯೂಸ್, ಬ್ರಾಂಡೆಡ್ ಬಿಸ್ಕೆಟ್, ತಿನಿಸುಗಳನ್ನು ಕೊಡ್ತಿದ್ದೀರಾ? ಹಾಗಿದ್ರೆ ಹುಷಾರ್. ನೀವು ನಂಬಿರುವ ಬ್ರಾಂಡೆಡ್ ಫುಡ್ ಕೂಡ ಸೇಫ್ ಅಲ್ಲ. ಯಾಕಂದ್ರೆ ಮಾರುಕಟ್ಟೆಯಲ್ಲಿರೋ ಬಹುತೇಕ ಬ್ರಾಂಡೆಡ್ ತಿನಿಸುಗಳಿಗೆ ಸಿಕ್ಕಿರುವ ಲ್ಯಾಬ್ ಸರ್ಟಿಫಿಕೇಟ್‍ಗಳೇ ಫೇಕ್. ಹಣ ಕೊಟ್ಟು ಫೇಕ್ ಸರ್ಟಿಫಿಕೇಟ್ ಪಡೆದು ಮಾರುಕಟ್ಟೆಗೆ ತಿನಿಸು ಬಿಡ್ತಿರುವ ಶಾಕಿಂಗ್ ಸತ್ಯ ಬಯಲಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 15): ಮಾರುಕಟ್ಟೆಗೆ ಯಾವುದೇ ಆಹಾರ ಬಿಡುವ ಮುನ್ನ ಲ್ಯಾಬ್ ಟೆಸ್ಟ್ ಕಡ್ಡಾಯ. ಆಹಾರದ ಗುಣಮಟ್ಟ, ಕೆಮಿಕಲ್, ಬಣ್ಣ, ಎಕ್ಸ್‍ಪೈರಿ ಬಗ್ಗೆ ಲ್ಯಾಬ್ ಸರ್ಟಿಫಿಕೇಟ್ ಪಡೆಯಬೇಕು. ಸರ್ಕಾರವೇ ಇದಕ್ಕೆ ದರ ನಿಗದಿ ಮಾಡಿದೆ, ಮಾನದಂಡದ ಪ್ರಕಾರ ಟೆಸ್ಟ್‍ಗೆ ಇಂತಿಷ್ಟು ಹಣ ಪಡೆಯಬೇಕು ಅಂತಾ.ಆದ್ರೆ ಕೆಲವು ಖಾಸಗಿ ಲ್ಯಾಬ್‍ಗಳು ಕಳ್ಳಾಟವಾಡುತ್ತಿವೆ. ಸರ್ಕಾರ ನಿಗದಿ ಮಾಡಿರೋ ದರಕ್ಕಿಂತ 2 ಪಟ್ಟು ಕಡಿಮೆ ಹಣಕ್ಕೆ ಸ್ಯಾಂಪಲ್ ಪಡೆಯುತ್ತಿವೆ.
ಉದಾ: 1ಸಾವಿರ ರೂ. ಟೆಸ್ಟ್‍ಗೆ 600 ರೂ.ಗೆ ಸರ್ಟಿಫಿಕೇಟ್ ಸಿಕ್ತಿದೆ. ಸ್ಯಾಂಪಲ್ ಅನ್ನು ಸರಿಯಾಗಿ ಟೆಸ್ಟ್ ಮಾಡದೆಯೇ, ಫೇಕ್ ರಿಪೋರ್ಟ್ ಕ್ರಿಯೇಟ್ ಮಾಡಿ ಕೊಡುತ್ತಿವೆ. ಅದರಲ್ಲೂ ಮಕ್ಕಳೇ ಹೆಚ್ಚು ತಿನ್ನುವ ಟೆಟ್ರಾಪ್ಯಾಕ್ ಜ್ಯೂಸ್, ಬ್ರಾಂಡೆಡ್ ಬಿಸ್ಕೆಟ್, ಚಿಪ್ಸ್, ಕೇಕ್, ಚಾಕೊಲೇಟ್‍ಗಳಿಗೆ ಈ ಫೇಕ್ ಸರ್ಟಿಫಿಕೇಟ್ ಹೆಚ್ಚು. ಅಂದ್ರೆ ನೀವು ಲ್ಯಾಬ್ ಟೆಸ್ಟೆಡ್, ಸರ್ಟಿಫೈಡ್ ಎಂದು ನಂಬಿ ತಿನ್ನುತ್ತಿರುವ ಬ್ರಾಂಡೆಡ್ ಫುಡ್‍ನ ಗುಣಮಟ್ಟವನ್ನು ಲ್ಯಾಬ್‍ನಲ್ಲಿ ಟೆಸ್ಟ್ ಮಾಡೇ ಇಲ್ಲ. ನೇರವಾಗಿ ಫೇಕ್ ಸರ್ಟಿಫಿಕೇಟ್ ನೀಡಲಾಗಿದೆ.
ಇದನ್ನೂ ಓದಿ: ಶೇ.50ರಷ್ಟು ರಿಯಾಯಿತಿಯಲ್ಲಿ ನಕಲಿ ಕ್ಯಾನ್ಸರ್ ಔಷಧಗಳ ಮಾರಾಟ: ಮಹಾರಾಷ್ಟ್ರ, ಗುಜರಾತನ್ನೂ ಜಾಲ ತಲುಪಿರುವ ಶಂಕೆ
ಬ್ರಾಂಡೆಡ್ ಅಂದ ಮಾತ್ರಕ್ಕೆ ಸೇಫ್ ಅಂತಾ ಅಂದುಕೊಳ್ಳುವಂತಿಲ್ಲ. ಲ್ಯಾಬ್ ಸರ್ಟಿಫಿಕೇಟ್ ಇದೆ ಅಂದ ಮಾತ್ರಕ್ಕೆ ನಂಬುವಂತಿಲ್ಲ.ಈ ಫೇಕ್ ಸರ್ಟಿಫಿಕೇಟ್ ದಂಧೆ ಬೆಳಕಿಗೆ ಬರ್ತಿದ್ದಂತೆ ಸರ್ಕಾರ ಎಚ್ಚೆತ್ತುಕೊಂಡಿದೆ. ಆಹಾರ ಸುರಕ್ಷತಾ ಇಲಾಖೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಬ್ರಾಂಡೆಡ್ ಫುಡ್‍ಗಳ ಸ್ಯಾಂಪಲ್‍ಗಳನ್ನು ಸಂಗ್ರಹಿಸುತ್ತಿದೆ.ಲ್ಯಾಬ್‍ನಿಂದ ಸರ್ಟಿಫಿಕೇಟ್ ಪಡೆದ ಫುಡ್‍ಗಳನ್ನೇ ಮತ್ತೆ ಸರ್ಕಾರಿ ಲ್ಯಾಬ್‍ನಲ್ಲಿ ರೀ-ಟೆಸ್ಟ್ ಮಾಡಲಾಗುತ್ತಿದೆ. ಈ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ FDA ಅಧಿಕಾರಿಗಳ ಜೊತೆಗೆ ಮಹತ್ವದ ಮಾತುಕತೆಗೆ ಮುಂದಾಗಿದ್ದಾರೆ.
ಫೇಕ್ ಎಷ್ಟು ಡೇಂಜರ್?
ಟೆಟ್ರಾಪ್ಯಾಕ್ ಜ್ಯೂಸ್‍ಗಳಲ್ಲಿ ಅನುಮತಿಗಿಂತ ಹೆಚ್ಚು ಸಕ್ಕರೆ, ಕಲರ್, ಪ್ರಿಸರ್ವೇಟಿವ್ ಇರುವ ಸಾಧ್ಯತೆ. ಬಿಸ್ಕೆಟ್, ತಿನಿಸುಗಳಲ್ಲಿ ಕಳಪೆ ಎಣ್ಣೆ, ಮೈದಾ, ಹಾನಿಕಾರಕ ಕೆಮಿಕಲ್ ಇರಬಹುದು. ಇದು ನೇರವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೊಟ್ಟೆನೋವು, ಫುಡ್ ಪಾಯಿಸನ್, ದೀರ್ಘಕಾಲದಲ್ಲಿ ಕಿಡ್ನಿ, ಲಿವರ್ ಸಮಸ್ಯೆ. ಇನ್ನು ಈ ಫೇಕ್ ಲ್ಯಾಬ್ ವರದಿಯಿಂದ ಜನರ ಆರೋಗ್ಯದ ಮೇಲೆ ಸಾಕಷ್ಟು ಸಮಸ್ಯೆಗಳು ಜನರಿಗೆ ಎದುರಾಗುತ್ತದೆ.. ನಕಲಿ ಉತ್ಪನ್ನಗಳು ಜನರ ಕೈಗೆ ಸಿಕ್ಕು ನೇರವಾಗಿ ಮಕ್ಕಳ ದೊಡ್ಡವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೊಟ್ಟೆನೋವು, ಫುಡ್ ಪಾಯಿಸನ್, ದೀರ್ಘಕಾಲದಲ್ಲಿ ಕಿಡ್ನಿ, ಲಿವರ್ ಸಮಸ್ಯೆ ಕಂಡು ಬರುತ್ತವೆ
ಒಟ್ಟಾರೆ ಬ್ರಾಂಡೆಡ್ ಹೆಸರಿನಲ್ಲಿ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡಲಾಗುತ್ತಿದೆ. ಸರ್ಟಿಫಿಕೇಟ್ ಕೊಡುವ ಲ್ಯಾಬ್‍ಗಳೇ ಫೇಕ್ ಆಗಿದ್ದರೆ, ಯಾವ ಫುಡ್ ತಿನ್ನಬೇಕು ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಈ ಫೇಕ್ ಲ್ಯಾಬ್ ದಂಧೆಗೆ ಕಡಿವಾಣ ಹಾಕಿ, ಮಕ್ಕಳ ತಿನಿಸುಗಳ ಗುಣಮಟ್ಟದ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.




