‘ಬಾಸ್ ಸಿನಿಮಾ ರಿಲೀಸ್ ಮಾಡಲು ದರ್ಶನ್ ಒಪ್ಪಿದ್ದಾರೆ’: ತನುಷ್ ಶಿವಣ್ಣ
ಬಿಡುಗಡೆಗೂ ಮುನ್ನವೇ ‘ಬಾಸ್’ ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಈ ಸಿನಿಮಾದ ರಿಲೀಸ್ಗೆ ತಡೆ ನೀಡುವಂತೆ ಕೋರಿ ಈ ಮೊದಲು ವಿಜಯಲಕ್ಷ್ಮಿ ದರ್ಶನ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಂತಿಮವಾಗಿ ಅವರು ಈ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದ್ದಾರೆ. ಈ ಕುರಿತು ಚಿತ್ರದ ನಾಯಕ ನಟ ತನುಷ್ ಶಿವಣ್ಣ ಅವರು ಮಾತನಾಡಿದ್ದಾರೆ.
ಬಿಡುಗಡೆಗೂ ಮುನ್ನವೇ ‘ಬಾಸ್’ ಸಿನಿಮಾ (Boss Movie) ಸಾಕಷ್ಟು ಸದ್ದು ಮಾಡಿದೆ. ಈ ಸಿನಿಮಾದ ರಿಲೀಸ್ಗೆ ತಡೆ ನೀಡುವಂತೆ ಕೋರಿ ಈ ಮೊದಲು ವಿಜಯಲಕ್ಷ್ಮಿ ದರ್ಶನ್ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಂತಿಮವಾಗಿ ಅವರು ಈ ಚಿತ್ರದ ಬಿಡುಗಡೆಗೆ ಅನುಮತಿ ನೀಡಿದ್ದಾರೆ. ಈ ಕುರಿತು ಚಿತ್ರದ ನಾಯಕ ನಟ ತನುಷ್ ಶಿವಣ್ಣ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ‘ವಿಜಯಲಕ್ಷ್ಮಿ ದರ್ಶನ್ ಅವರು ನಮ್ಮ ಜೊತೆ ಮಾತನಾಡಿದರು. ಈ ಚಿತ್ರದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಏನಾದರೂ ತೋರಿಸಿದ್ದೀರಾ ಅಂತ ಕೇಳಿದರು. ಅವರ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದೆ. ಈ ಸಿನಿಮಾ ಬಿಡುಗಡೆ ಆಗಲಿ ಅಂತ ದರ್ಶನ್ ಅವರು ಕೂಡ ಹೇಳಿದ್ದಾರೆ. ಆಗಸ್ಟ್ 7ರಂದು ಬಾಸ್ ಸಿನಿಮಾ ರಿಲೀಸ್ ಆಗಲಿದೆ. ನಿಮ್ಮೆಲ್ಲರ ಆಶೀರ್ವಾದ, ಹಾರೈಕೆ ನಮಗೆ ಬೇಕು’ ಎಂದು ತನುಷ್ ಶಿವಣ್ಣ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಪ್ರಧಾನಿ ಮೋದಿಯವರ 25 ವರ್ಷಗಳ ಸಾರ್ಥಕ ಆಡಳಿತ: ಅಭಿವೃದ್ಧಿಯ ಪಥದಲ್ಲಿ ಭಾರತ
ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ
ಆಹಾರದಾಸೆಗೆ ಕಾರಿನ ಮೇಲೆ ಕಾಲಿಟ್ಟ ಕಾಡಾನೆ! ಪ್ರಯಾಣಿಕರು ಜಸ್ಟ್ ಮಿಸ್
‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’; ಯಶಸ್ ವಿರುದ್ಧ ಮಿತಿಮೀರಿದ ಮಂಜು ಮಾತು

