IPL 2025: ಆರ್‌ಸಿಬಿ ಕಪ್ ಗೆಲ್ಲಬೇಕೆಂದರೆ ಮುಂಬೈ ಫೈನಲ್ಗೇರಲೇಬಾರದು..!
Mumbai Indians vs Punjab Kings Qualifier 2: ಐಪಿಎಲ್ 2025ರ ಕ್ವಾಲಿಫೈಯರ್ 2ರಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಐದನೇ ಬಾರಿ ಕ್ವಾಲಿಫೈಯರ್ 2 ಆಡುತ್ತಿದ್ದು, ಇದಕ್ಕೂ ಮೊದಲು ನಾಲ್ಕು ಬಾರಿ ಆಡಿದ್ದ ಕ್ವಾಲಿಫೈಯರ್ ಪಂದ್ಯಗಳ ಪೈಕಿ ಎರಡು ಬಾರಿ ಗೆದ್ದು ಐಪಿಎಲ್ ಪ್ರಶಸ್ತಿಯನ್ನು ಸಹ ಗೆದ್ದಿದೆ. ಅಂದರೆ ಮುಂಬೈ ಕ್ವಾಲಿಫೈಯರ್ 2 ಗೆದ್ದು ಫೈನಲ್ಗೇರಿದರೆ ಆರ್ಸಿಬಿಗೆ ಸಂಕಷ್ಟ ತಪ್ಪಿದಲ್ಲ.
ಐಪಿಎಲ್ 2025 ಈಗ ಅಂತಿಮ ಹಂತಕ್ಕೆ ಬಂದಿದೆ, ಈ ಸೀಸನ್‌ನಲ್ಲಿ ಇನ್ನ ಕೇವಲ 2 ಪಂದ್ಯಗಳು ಮಾತ್ರ ಉಳಿದಿವೆ. ಜೂನ್ 1 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ವಾಲಿಫೈಯರ್ -2 ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿವೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.
1 / 7
ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್, ಆರ್‌ಸಿಬಿ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಇತ್ತ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ನಂತರ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಕ್ಕೆ ಅರ್ಹತೆ ಪಡೆದುಕೊಂಡಿದೆ.
2 / 7
ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ಕ್ವಾಲಿಫೈಯರ್ -2 ಆಡುತ್ತಿರುವುದು ಇದು 5 ನೇ ಬಾರಿಯಾಗಲಿದೆ. ಕ್ವಾಲಿಫೈಯರ್-2 ರಲ್ಲಿ ಮುಂಬೈ ತಂಡದ ಪ್ರದರ್ಶನ ಉತ್ತಮವಾಗಿದ್ದು, ಆರ್‌ಸಿಬಿಯ ಹಾಗೂ ಅದರ ಅಭಿಮಾನಿಗಳ ಆತಂಕವನ್ನು ಹೆಚ್ಚಿಸುವ ಅಂಕಿಅಂಶಗಳೂ ಇವೆ.
3 / 7
2011 ರಿಂದ ಐಪಿಎಲ್‌ನಲ್ಲಿ ಪ್ಲೇಆಫ್ ಪರಿಚಯಿಸಲಾಯಿತು. ಅಂದಿನಿಂದ ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಕ್ವಾಲಿಫೈಯರ್ -2 ಪಂದ್ಯವನ್ನು ಆಡಿದೆ. ಇದರಲ್ಲಿ 2 ಪಂದ್ಯಗಳನ್ನು ಗೆದ್ದಿದ್ದರೆ, 2 ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಆದರೆ ವಿಶೇಷವೆಂದರೆ ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್-2 ಪಂದ್ಯವನ್ನು ಗೆದ್ದಾಗಲೆಲ್ಲಾ, ಪ್ರಶಸ್ತಿಯನ್ನು ಗೆಲ್ಲುವಲ್ಲಿಯೂ ಯಶಸ್ವಿಯಾಗಿದೆ.
4 / 7
2013ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕ್ವಾಲಿಫೈಯರ್ -2 ರಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿತ್ತು. ಇದಾದ ನಂತರ, ಫೈನಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
5 / 7
ಅದೇ ರೀತಿ, 2017 ರಲ್ಲಿಯೂ ಸಹ ಮುಂಬೈ ಕ್ವಾಲಿಫೈಯರ್ -2 ಗೆದ್ದು, ಆ ನಂತರ ಫೈನಲ್‌ನಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ ತಂಡವನ್ನು ಸೋಲಿಸಿತ್ತು. ಆ ಬಳಿಕ 2023 ರಲ್ಲಿ ಕ್ವಾಲಿಫೈಯರ್ 2 ಆಡಿದ್ದ ಮುಂಬೈ ಇಂಡಿಯನ್ಸ್, ಆ ಪಂದ್ಯದಲ್ಲಿ ಸೋಲನ್ನು ಎದುರಿಸಿತ್ತು.
6 / 7
ಇದೀಗ ನಾಳೆ ನಡೆಯಲ್ಲಿರುವ ಕ್ವಾಲಿಫೈಯರ್-2 ರಲ್ಲಿ ಮುಂಬೈ ಇಂಡಿಯನ್ಸ್, ಪಂಜಾಬ್ ತಂಡವನ್ನು ಸೋಲಿಸುವುದು ಸುಲಭವಲ್ಲ. ಐಪಿಎಲ್‌ನಲ್ಲಿ ಉಭಯ ತಂಡಗಳ ನಡುವೆ ಒಟ್ಟು 33 ಪಂದ್ಯಗಳು ನಡೆದಿದ್ದು, ಅದರಲ್ಲಿ ಮುಂಬೈ ತಂಡ 17 ಪಂದ್ಯಗಳಲ್ಲಿ ಗೆದ್ದಿದ್ದರೆ, 16 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಬಾರಿಯೂ ಲೀಗ್ ಹಂತದಲ್ಲಿ ಪಂಜಾಬ್ ವಿರುದ್ಧದ ಪಂದ್ಯವನ್ನು ಗೆಲ್ಲಲು ಮುಂಬೈಗೆ ಸಾಧ್ಯವಾಗಲಿಲ್ಲ.