AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಹೃದಯವಂತ ರಿಷಬ್..! ಪಂತ್ ಕ್ರೀಡಾ ಸ್ಫೂರ್ತಿಗೆ ಸಲಾಂ ಹೊಡೆದ ಕ್ರೀಡಾ ಜಗತ್ತು; ವಿಡಿಯೋ ನೋಡಿ

Rishabh Pant's Sportsmanship: ಐಪಿಎಲ್ 2025 ರ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಲಕ್ನೋ ಸೂಪರ್ ಜೈಂಟ್ಸ್, ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿತು. ಆದರೆ ಪಂದ್ಯದ 17ನೇ ಓವರ್‌ನಲ್ಲಿ ನಡೆದ ಘಟನೆಗಳು ಎಲ್ಲರ ಗಮನ ಸೆಳೆದವು. ರಿಷಭ್ ಪಂತ್ ಅವರ ಕ್ರೀಡಾ ಮನೋಭಾವ ಮತ್ತು ಜಿತೇಶ್ ಶರ್ಮಾ ಅವರ ಅದ್ಭುತ ಇನ್ನಿಂಗ್ಸ್ ಈ ಪಂದ್ಯದ ಹೈಲೈಟ್ ಆಗಿತ್ತು. ದಿಗ್ವೇಶ್ ಮಅಡಿದ ಮಂಕಡಿ ಔಟ್ ಅನ್ನು ರಿಷಬ್ ಪಂತ್ ಹಿಂತೆಗೆದುಕೊಂಡು ಜಿತೇಶ್ ಅವರನ್ನು ಆಟ ಮುಂದುವರೆಸುವಂತೆ ಹೇಳಿದ್ದು ವಿಶೇಷವಾಗಿತ್ತು.

IPL 2025: ಹೃದಯವಂತ ರಿಷಬ್..! ಪಂತ್ ಕ್ರೀಡಾ ಸ್ಫೂರ್ತಿಗೆ ಸಲಾಂ ಹೊಡೆದ ಕ್ರೀಡಾ ಜಗತ್ತು; ವಿಡಿಯೋ ನೋಡಿ
Roishbh Pant
ಪೃಥ್ವಿಶಂಕರ
|

Updated on:May 29, 2025 | 3:29 PM

Share

ಐಪಿಎಲ್ 2025 (IPL 2025) ರ ಕೊನೆಯ ಲೀಗ್ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ನಡುವೆ ನಡೆಯಿತು. ಈ ಪಂದ್ಯವನ್ನು ಆರ್‌ಸಿಬಿ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಎಲ್‌ಎಸ್‌ಜಿ, ರಿಷಭ್ ಪಂತ್ (Rishabh Pant) ಅವರ ಶತಕದ ನೆರವಿನಿಂದ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 227 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ ಜಿತೇಶ್ ಶರ್ಮಾ (Jitesh Sharma) ಅವರ ಅದ್ಭುತ ಇನ್ನಿಂಗ್ಸ್ ನಿಂದ ಸುಲಭವಾಗಿ ಗುರಿ ತಲುಪಿತು. ಈ ಪಂದ್ಯದಲ್ಲಿ ಆರ್​ಸಿಬಿ ಗೆದ್ದಿತ್ತಾದರೂ, ಎದುರಾಳಿ ತಂಡದ ನಾಯಕ ರಿಷಬ್ ಪಂತ್ ತಮ್ಮ ಕ್ರೀಡಾ ಸ್ಫೂರ್ತಿಯಿಂದ ಇಡೀ ಕ್ರೀಡಾ ಜಗತ್ತಿನ ಹೃದಯ ಗೆದ್ದರು.

ರೋಚಕ 17ನೇ ಓವರ್​

ಅಷ್ಟಕ್ಕೂ ನಡೆದಿದ್ದೇನೆಂದರೆ, ಆರ್​ಸಿಬಿ ಬ್ಯಾಟಿಂಗ್ ಮಾಡುವ ವೇಳೆ 17ನೇ ಓವರ್​ ಬೌಲ್ ಮಾಡುವ ಜವಬ್ದಾರಿಯನ್ನು ನಾಯಕ ಪಂತ್, ದಿಗ್ವೇಶ್ ರಾಥಿಗೆ ನೀಡಿದರು. ಈ ಓವರ್​ ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ ಎಂದು ಸಾಭೀತಾಯಿತು. ಏಕೆಂದರೆ ಈ ಓವರ್​ನ ಮೊದಲ ಎಸೆತವನ್ನು ರಿವರ್​ ಸ್ವೀಪ್ ಆಡುವ ಯತ್ನದಲ್ಲಿ ನಾಯಕ ಜಿತೇಶ್, ಪಾಯಿಂಟ್​ನಲ್ಲಿ ನಿಂತಿದ್ದ ಆಯುಷ್​ಗೆ ಸುಲಭ ಕ್ಯಾಚ್ ನೀಡಿದರು. ಇತ್ತ ಜಿತೇಶ್ ಕೂಡ ಕ್ಯಾಚ್​ ನೀಡಿದಕ್ಕೆ ನಿರಾಶರಾಗಿ ಸ್ವಲ್ಪ ಸಮಯ ಕ್ರೀಸ್​ನಲ್ಲಿಯೇ ಮಂಡಿಯೂರು ಕುಳಿತುಕೊಂಡರು. ಆದರೆ ಇಲ್ಲಿ ಅದೃಷ್ಟ ಜಿತೇಶ್ ಪರವಿತ್ತು. ಏಕೆಂದರೆ ಜಿತೇಶ್ ಕ್ಯಾಚ್ ನೀಡಿದ ಆ ಎಸೆತ ನೋ ಬಾಲ್ ಆಗಿತ್ತು. ಹೀಗಾಗಿ ಜಿತೇಶ್ ಔಟಾಗುವುದರಿಂದ ಪಾರಾದರು. ಆ ಬಳಿಕ ಫ್ರೀ ಹಿಟ್​ನ ಲಾಭ ಪಡೆದ ಜಿತೇಶ್ ಮುಂದಿನ ಎಸೆತವನ್ನು ಸಿಕ್ಸರ್​ಗಟ್ಟಿದರು.

ಮಂಕಡಿಗ್ ಹಿಂಪಡೆದ ಪಂತ್

ಇನ್ನು ಇದೇ ಓವರ್​ನಲ್ಲಿ ಮತ್ತೊಂದು ಆಘಾತ ಆರ್​ಸಿಬಿಗೆ ಎದುರಾಗಿತ್ತು. ಆದರೆ ಈ ವೇಳೆ ಆರ್​ಸಿಬಿ ಅಭಿಮಾನಿಗಳ ಪಾಲಿಗೆ ದೇವರಂತೆ ಕಾಣಿಸಿಕೊಂಡ ಪಂತ್, ತನ್ನ ಕ್ರೀಡಾ ಸ್ಫೂರ್ತಿಯಿಂದ ಎಲ್ಲರ ಹೃದಯ ಗೆದ್ದರು. ವಾಸ್ತವವಾಗಿ 17ನೇ ಓವರ್​ನ ಕೊನೆಯ ಎಸೆತವನ್ನು ಎದುರಿಸಲು ಮಯಾಂಕ್ ಸ್ಟ್ರೈಕ್​ನಲ್ಲಿದ್ದರೆ, ಜಿತೇಶ್ ನಾನ್ ಸ್ಟ್ರೈಕ್​ನಲ್ಲಿದ್ದರು. ಈ ವೇಳೆ ಚಾಣಾಕ್ಷತನ ತೋರಿದ ದಿಗ್ವೇಶ್ ಮಂಕಡಿಗ್ ಮೂಲಕ ಜಿತೇಶ್​ರನ್ನು ರನೌಟ್ ಮಾಡಿದರು. ಅಂದರೆ ಜಿತೇಶ್ ಬೌಲ್ ಮಾಡುವುದಕ್ಕೂ ಮುನ್ನವೇ ಜಿತೇಶ್ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮನಿಸಿದ ದಿಗ್ವೇಶ್ ಕೂಡಲೇ ಬೆಲ್ಸ್ ಹಾರಿಸಿದರು.

ಬೌಲರ್​ನ ಅನುಮತಿಯ ಮೇರೆಗೆ ಅಂಪೈರ್ ಕೂಡ ಮೂರನೇ ಅಂಪೈರ್​ಗೆ ಮನವಿ ಮಾಡಿದರು. ರಿವ್ಯೂವ್ ಪರಿಶೀಲಿಸಿದ ಮೂರನೇ ಅಂಪೈರ್​ಗೆ ಜಿತೇಶ್ ಕ್ರೀಸ್ ಬಿಟ್ಟಿದ್ದು ಸ್ಪಷ್ಟವಾಗಿ ಗೋಚರಿಸಿತ್ತು. ಹೀಗಾಗಿ ಜಿತೇಶ್ ಔಟಾಗುವುದು ಖಚಿತವಾಗಿತ್ತು. ಆದರೆ ಮೂರನೇ ಅಂಪೈರ್ ನಿರ್ಧಾರ ನಾಟೌಟ್ ಎಂದು ದೊಡ್ಡ ಪರದೆಯ ಮೇಲೆ ಭಿತ್ತರವಾಯಿತು. ಇದನ್ನು ಗಮನಿಸಿದ ಎಲ್ಲರೂ ಕ್ಷಣ ಹೊತ್ತು ಆಶ್ಚರ್ಯಚಕಿತರಾದರು. ವಾಸ್ತವವಾಗಿ ಅಂಪೈರ್ ತಮ್ಮ ನಿರ್ಧಾರವನ್ನು ಬದಲಿಸಲು ಲಕ್ನೋ ನಾಯಕ ರಿಷಬ್ ಪಂತ್ ಕಾರಣರಾಗಿದ್ದರು. ಜಿತೇಶ್ ವಿಕೆಟ್ ಮನವಿಯನ್ನು ಪಂತ್ ವಾಪಸ್ ಪಡೆದರು. ನಿರ್ಣಾಯಕ ಹಂತದಲ್ಲಿ ಕ್ರೀಡಾ ಸ್ಫೂರ್ತಿ ತೋರಿದ ಪಂತ್​ಗೆ ನಾಯಕ ಜಿತೇಶ್ ಕೂಡ ಪ್ರೀತಿಯ ಅಪ್ಪುಗೆ ನೀಡದರು. ಕೊನೆಯಲ್ಲಿ ಜಿತೇಶ್ ಔಟಾಗುವುದರಿಂದ ಪಾರಾಗಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:03 am, Wed, 28 May 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ