IPL 2025: ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ನಮ್ಮ ಕಿಂಗ್ ಕೊಹ್ಲಿ
Virat Kohli's Record-Breaking IPL Innings: ಐಪಿಎಲ್ 2025ರ ಕೊನೆಯ ಲೀಗ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಆರ್‌ಸಿಬಿ ಲಕ್ನೋವನ್ನು ಮಣಿಸಿ ಕ್ವಾಲಿಫೈಯರ್ 1ಗೆ ಅರ್ಹತೆ ಪಡೆಯಿತು. ಇದೇ ಪಂದ್ಯದಲ್ಲಿ ಕೊಹ್ಲಿ ಒಂದೇ ತಂಡದ ಪರ 9000 ಐಪಿಎಲ್ ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವ ದಾಖಲೆಯನ್ನು ಸೃಷ್ಟಿಸಿದರು. ಅಲ್ಲದೆ ಈ ಸೀಸನ್‌ನಲ್ಲಿ ಕೊಹ್ಲಿ 600ನೇ ರನ್‌ಗಳನ್ನು ಪೂರೈಸಿದಲ್ಲದೆ 63ನೇ ಅರ್ಧಶತಕವನ್ನು ದಾಖಲಿಸಿದರು.

ಐಪಿಎಲ್ 2025 (IPL 2025) ರ ಕೊನೆಯ ಲೀಗ್ ಪಂದ್ಯದಲ್ಲಿ ಲಕ್ನೋ ತಂಡವನ್ನು ಮಣಿಸಿದ ಆರ್‌ಸಿಬಿ (RCB vs LSG) ಕ್ವಾಲಿಫೈಯರ್ 1 ಗೆ ಅರ್ಹತೆ ಪಡೆದುಕೊಂಡಿದೆ. ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿರುವ ಆರ್‌ಸಿಬಿ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ವಿರುದ್ಧ ಆಡಲಿದೆ. ಇನ್ನು ಈ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅರ್ಧಶತಕದ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಅವರು ಟಿ20 ಕ್ರಿಕೆಟ್‌ನಲ್ಲಿ ವಿಶ್ವದ ಯಾವ ಆಟಗಾರನಿಗೂ ಸಾಧ್ಯವಾಗದ ದಾಖಲೆಯೊಂದನ್ನು ನಿರ್ಮಿಸಿದರು.
ವಿರಾಟ್ ಕೊಹ್ಲಿ ಐತಿಹಾಸಿಕ ಸಾಧನೆ
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 30 ಎಸೆತಗಳನ್ನು ಎದುರಿಸಿ 180 ಸ್ಟ್ರೈಕ್ ರೇಟ್‌ನಲ್ಲಿ 54 ರನ್ ಗಳಿಸಿದರು. ಇದರೊಂದಿಗೆ ಅವರು ಐಪಿಎಲ್‌ನಲ್ಲಿ 9000 ರನ್‌ಗಳನ್ನು ಪೂರ್ಣಗೊಳಿಸಿದರು. ವಿಶೇಷವೆಂದರೆ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅಂದರೆ ಐಪಿಎಲ್‌ನಲ್ಲಿ ಒಂದೇ ತಂಡದ ಪರ ಈ ಎಲ್ಲಾ ರನ್ ಗಳಿಸಿದ್ದಾರೆ. ಇದರೊಂದಿಗೆ, ಅವರು ಟಿ20 ಕ್ರಿಕೆಟ್‌ನಲ್ಲಿ ಒಂದೇ ತಂಡದ ಪರ 9000 ರನ್‌ಗಳನ್ನು ಪೂರ್ಣಗೊಳಿಸಿದ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಕೊಹ್ಲಿಯನ್ನು ಹೊರತುಪಡಿಸಿ ಯಾವುದೇ ಆಟಗಾರನಿಗೆ ಒಂದೇ ತಂಡದ ಪರ 7000 ಟಿ20 ರನ್‌ಗಳನ್ನು ಗಳಿಸಲು ಸಾಧ್ಯವಾಗಿಲ್ಲ.
IPL 2025: ಆರ್‌ಸಿಬಿ ವಿರುದ್ಧ ಶತಕ ಬಾರಿಸಿ ಪಲ್ಟಿ ಹೊಡೆದ ಪಂತ್; ವಿಡಿಯೋ ನೋಡಿ
ಐಪಿಎಲ್‌ನಲ್ಲೂ ಇತಿಹಾಸ ಸೃಷ್ಟಿ
ಈ ಇನ್ನಿಂಗ್ಸ್‌ನೊಂದಿಗೆ ವಿರಾಟ್ ಕೊಹ್ಲಿ ಐಪಿಎಲ್ 2025 ರಲ್ಲಿ ತಮ್ಮ 600 ರನ್‌ಗಳನ್ನು ಪೂರ್ಣಗೊಳಿಸಿದರು. ಈ ಮೂಲಕ ಕೊಹ್ಲಿ 5 ನೇ ಬಾರಿಗೆ ಒಂದು ಸೀಸನ್‌ನಲ್ಲಿ 600 ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಹಾಗೆಯೇ ಈ ಸೀಸನ್‌ನಲ್ಲಿ ವಿರಾಟ್ ಕೊಹ್ಲಿ 8 ಬಾರಿ 50+ ರನ್ ಗಳಿಸಿದ್ದು, ಇದು ಇತರ ಆಟಗಾರರಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಅಲ್ಲದೆ ಲಕ್ನೋ ವಿರುದ್ಧದ ಅರ್ಧಶತಕದೊಂದಿಗೆ ಕೊಹ್ಲಿ ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ಲದೆ ಈ ವಿಷಯದಲ್ಲಿ ಡೇವಿಡ್ ವಾರ್ನರ್ ಅವರನ್ನು ಹಿಂದಿಕ್ಕಿದರು. ಇದಕ್ಕೂ ಮೊದಲು ಕೊಹ್ಲಿ ಮತ್ತು ವಾರ್ನರ್ ಜಂಟಿಯಾಗಿ ಅಗ್ರಸ್ಥಾನದಲ್ಲಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಐಪಿಎಲ್‌ನಲ್ಲಿ 62 ಅರ್ಧಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದರು. ಆದರೆ, ಕೊಹ್ಲಿ ಈಗ 63 ಅರ್ಧಶತಕಗಳನ್ನು ಗಳಿಸಿದ್ದಾರೆ. ಉಳಿದಂತೆ ಐಪಿಎಲ್‌ನಲ್ಲಿ 46 ಅರ್ಧಶತಕಗಳನ್ನು ಗಳಿಸಿರುವ ರೋಹಿತ್ ಶರ್ಮಾ ಮೂರನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 am, Wed, 28 May 25
