Delhi Capitals
Delhi Capitals
IPL 2026: ಸತತ 14 ವರ್ಷಗಳ ಐಪಿಎಲ್ ಪ್ರಯಾಣಕ್ಕೆ ಅಂತ್ಯ ಹಾಡಿದ ಆರ್ಸಿಬಿ ಮಾಜಿ ನಾಯಕ
Faf du Plessis IPL Auction 2026: ಫಾಫ್ ಡು ಪ್ಲೆಸಿಸ್ 2026ರ ಐಪಿಎಲ್ ಮಿನಿ ಹರಾಜಿನಿಂದ ಹಿಂದೆ ಸರಿದಿದ್ದಾರೆ. 14 ವರ್ಷಗಳ ಯಶಸ್ವಿ ಐಪಿಎಲ್ ಪಯಣದ ನಂತರ, ಹೊಸ ಸವಾಲನ್ನು ಎದುರಿಸಲು ಪಿಎಸ್ಎಲ್ನಲ್ಲಿ ಆಡಲು ನಿರ್ಧರಿಸಿದ್ದಾರೆ ಎಂದು ಅವರು ನವೆಂಬರ್ 29 ರಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಸಿಎಸ್ಕೆ, ಆರ್ಸಿಬಿ ಮತ್ತು ಡೆಲ್ಲಿ ಪರ ಆಡಿದ್ದ ಫಾಫ್ ಭಾರತ ಮತ್ತು ಐಪಿಎಲ್ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.
- pruthvi Shankar
- Updated on: Nov 29, 2025
- 8:31 pm
IPL 2026: ಕೆಕೆಆರ್ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್?
KL Rahul IPL transfer: ಭಾರತ ಟಿ20 ತಂಡದಿಂದ ಹೊರಬಿದ್ದಿದ್ದರೂ ಕೆಎಲ್ ರಾಹುಲ್ಗೆ ಐಪಿಎಲ್ನಲ್ಲಿ ಭಾರಿ ಬೇಡಿಕೆಯಿದೆ. ಮುಂಬರುವ ಐಪಿಎಲ್ಗೆ ಶಾರುಖ್ ಖಾನ್ ಒಡೆತನದ ಕೆಕೆಆರ್ ರಾಹುಲ್ರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಅವರಿಗೆ ನಾಯಕತ್ವ, ಆರಂಭಿಕ ಮತ್ತು ವಿಕೆಟ್ಕೀಪಿಂಗ್ ಜವಾಬ್ದಾರಿ ನೀಡಲು ಕೆಕೆಆರ್ ಉತ್ಸುಕವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ನಿಂದ ರಾಹುಲ್ ಹೊರಬಿದ್ದರೆ, ಸಂಜು ಸ್ಯಾಮ್ಸನ್ ಡೆಲ್ಲಿ ಸೇರುವ ಸಾಧ್ಯತೆ ಇದೆ.
- pruthvi Shankar
- Updated on: Oct 15, 2025
- 10:00 pm
IPL 2026: ಸಿಎಸ್ಕೆ ಅಲ್ಲ.. ಈ ತಂಡಕ್ಕೆ ಸಂಜು ಸ್ಯಾಮ್ಸನ್ ಟ್ರೇಡ್?
Sanju Samson: ಐಪಿಎಲ್ 2026 ಕ್ಕಾಗಿ ಸಿದ್ಧತೆಗಳು ಶುರುವಾಗಿವೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಬಂದು ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಕುರಿತು ಚರ್ಚೆ ನಡೆಯುತ್ತಿದೆ. ಮಿನಿ ಹರಾಜಿಗೂ ಮುನ್ನ ಟ್ರೇಡಿಂಗ್ ವಿಂಡೋ ಮೂಲಕ ಈ ವರ್ಗಾವಣೆ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಸಂಜುಗಾಗಿ ಆಸಕ್ತಿ ತೋರಿಸಿದ್ದು, ಐಪಿಎಲ್ ಟ್ರೇಡ್ ವಿಂಡೋ ನಿಯಮಗಳ ಬಗ್ಗೆಯೂ ಲೇಖನದಲ್ಲಿ ವಿವರಿಸಲಾಗಿದೆ.
- pruthvi Shankar
- Updated on: Oct 15, 2025
- 9:19 pm
IPL 2026: ಅಕ್ಷರ್ ಪಟೇಲ್ಗೆ ಕೊಕ್: ಡೆಲ್ಲಿ ಕ್ಯಾಪಿಟಲ್ಸ್ಗೆ ಹೊಸ ನಾಯಕ
Delhi Capitals: ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಅಕ್ಷರ್ ಪಟೇಲ್ ಮುಂದಾಳತ್ವದಲ್ಲಿ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಮ್ಯಾಚ್ಗಳಲ್ಲಿ ಗೆದ್ದಿದ್ದು ಕೇವಲ 7 ಪಂದ್ಯಗಳನ್ನು ಮಾತ್ರ. ಅಲ್ಲದೆ ಪ್ಲೇಆಫ್ ಪ್ರವೇಶಿಸುವಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿಫಲವಾಗಿತ್ತು. ಇದೇ ಕಾರಣದಿಂದಾಗಿ ಮುಂಬರುವ ಸೀಸನ್ನಲ್ಲಿ ಹೊಸ ನಾಯಕನನ್ನು ಕಣಕ್ಕಿಳಿಸಲು ಡಿಸಿ ಫ್ರಾಂಚೈಸಿ ಮುಂದಾಗಿದೆ.
- Zahir Yusuf
- Updated on: Sep 1, 2025
- 2:54 pm
PBKS vs DC: ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ನಿರ್ಮಾಣವಾದ ದಾಖಲೆಗಳ ಪಟ್ಟಿ ನೋಡಿ
Punjab Kings vs Delhi Capitals record: ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ 200 ಕ್ಕೂ ಹೆಚ್ಚು ಗುರಿಯನ್ನು ಬೆನ್ನಟ್ಟಿದ್ದು ಇದು ಮೂರನೇ ಬಾರಿ. ಇದೇ ಋತುವಿನ ಆರಂಭದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಗುಜರಾತ್ ವಿರುದ್ಧ ಈ ಸಾಧನೆ ಮಾಡಿದ್ದರೆ, 2023 ರ ಐಪಿಎಲ್ನಲ್ಲಿ ಹೈದರಾಬಾದ್ ರಾಜಸ್ಥಾನ ವಿರುದ್ಧ ಈ ಸಾಧನೆ ಮಾಡಿತ್ತು.
- Vinay Bhat
- Updated on: May 25, 2025
- 9:11 am
ಕೆಎಲ್ ರಾಹುಲ್ ಎಳೆದ ವೃತ್ತದಲ್ಲಿ ಸಿಲುಕಿ ಸೋತು ಸುಣ್ಣವಾದ ಡೆಲ್ಲಿ ಕ್ಯಾಪಿಟಲ್ಸ್
KL Rahul: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ವೃತ್ತ ಎಳೆದು ಸಂಭ್ರಮಿಸಿದ ಕೆಎಲ್ ರಾಹುಲ್ ವಿರುದ್ಧ ಆರ್ಸಿಬಿಯ ಕೆಲ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳನ್ನು ಹೊರಹಾಕಿದ್ದರು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇಆಫ್ ರೇಸ್ನಿಂದ ಸೋಲುತ್ತಿದ್ದಂತೆ ರಾಹುಲ್ ಬರೆದ ವೃತ್ತದಲ್ಲಿ ಸಿಲುಕಿ ಸೋತು ಸುಣ್ಣವಾದ ಡೆಲ್ಲಿ ಕ್ಯಾಪಿಟಲ್ಸ್ ಎಂದು ಟ್ರೋಲ್ ಮಾಡಲಾಗುತ್ತಿದೆ.
- Zahir Yusuf
- Updated on: May 22, 2025
- 9:55 am
IPL 2025: ಮುಂಬೈ ವಿರುದ್ಧ ಸೋತು ಪ್ಲೇಆಫ್ನಿಂದ ಹೊರಬಿದ್ದ ಡೆಲ್ಲಿ ಕ್ಯಾಪಿಟಲ್ಸ್
IPL 2025: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025ರ 63ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ ಮುಂಬೈ 181 ರನ್ ಗಳಿಸಿತು. ಡೆಲ್ಲಿ ತಂಡ ಈ ಗುರಿಯನ್ನು ಬೆನ್ನಟ್ಟಲು ವಿಫಲವಾಗಿ ಪ್ಲೇಆಫ್ನಿಂದ ಹೊರಬಿದ್ದಿತು. ಮುಂಬೈ, ಗುಜರಾತ್ ಟೈಟನ್ಸ್, ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇಆಫ್ಗೆ ಅರ್ಹತೆ ಪಡೆದಿವೆ.
- pruthvi Shankar
- Updated on: May 21, 2025
- 11:15 pm
IPL 2025: ಮುಂಬೈ ವಿರುದ್ಧ ಕಣಕ್ಕಿಳಿಯದ ಅಕ್ಷರ್ ಪಟೇಲ್; ಡು ಪ್ಲೆಸಿಸ್ಗೆ ನಾಯಕತ್ವ
IPL 2025: ಐಪಿಎಲ್ 2025 ರ 63ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಅನಾರೋಗ್ಯದ ಕಾರಣ ಹೊರಗುಳಿದಿದ್ದಾರೆ. ಅವರ ಬದಲಿಗೆ ಫಾಫ್ ಡು ಪ್ಲೆಸಿಸ್ ನಾಯಕತ್ವ ವಹಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಈ ಮಹತ್ವದ ಪಂದ್ಯದಲ್ಲಿ ಡೆಲ್ಲಿಯ ಗೆಲುವಿಗೆ ಡು ಪ್ಲೆಸಿಸ್ ಅವರ ಅನುಭವ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಪ್ರಮುಖ ಪಾತ್ರ ವಹಿಸಲಿದೆ. ಪಂದ್ಯದ ಫಲಿತಾಂಶ ಪ್ಲೇಆಫ್ ಅರ್ಹತೆಯ ಮೇಲೆ ಪರಿಣಾಮ ಬೀರಲಿದೆ.
- pruthvi Shankar
- Updated on: May 21, 2025
- 8:01 pm
IPL 2025: MI vs DC ಪಂದ್ಯವನ್ನು ಸ್ಥಳಾಂತರಿಸುವಂತೆ ಮನವಿ
IPL 2025 MI vs DC: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಆರ್ಸಿಬಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪ್ಲೇಆಪ್ಗೆ ಪ್ರವೇಶಿಸಿದರೆ, ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಪ್ಲೇಆಫ್ ಪೈಪೋಟಿ ಮುಂದುವರೆದಿದೆ.
- Zahir Yusuf
- Updated on: May 21, 2025
- 9:54 am
IPL 2025: MI vs DC ಪಂದ್ಯ ಮಳೆಯಿಂದ ರದ್ದಾದ್ರೆ, ಯಾರು ಪ್ಲೇಆಫ್ಗೆ?
IPL 2025 MI vs DC: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ರಲ್ಲಿ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಪ್ಲೇಆಫ್ಗೇರಿದೆ. ಇನ್ನುಳಿದ ಒಂದು ಸ್ಥಾನಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಗೆದ್ದರೆ ಮುಂದಿನ ಹಂತಕ್ಕೇರಲಿದೆ.
- Zahir Yusuf
- Updated on: May 21, 2025
- 8:32 am