IPL 2026: ಈ ಆಟಗಾರನನ್ನು ಖರೀದಿಸಿದ್ದೇ ಕೆಎಲ್ ರಾಹುಲ್ಗಾಗಿ..!
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ 19ನೇ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಜೋಡಿ ಬದಲಾಗುವುದು ಖಚಿತ. ಏಕೆಂದರೆ ಕಳೆದ ಬಾರಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಜೇಕ್ ಫ್ರೇಸರ್ ಮೆಕ್ ಗುರ್ಕ್ ಅವರನ್ನು ಡಿಸಿ ಫ್ರಾಂಚೈಸಿ ತಂಡದಿಂದ ಕೈ ಬಿಟ್ಟಿದೆ. ಹೀಗಾಗಿ ಕೆಎಲ್ ರಾಹುಲ್ ಹಾಗೂ ಬೆನ್ ಡಕೆಟ್ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
Updated on: Dec 22, 2025 | 7:55 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ಬಲಿಷ್ಠ ಪಡೆಯನ್ನು ರೂಪಿಸಿದೆ. ಹರಾಜಿಗೂ ಮುನ್ನ 17 ಆಟಗಾರರನ್ನು ಉಳಿಸಿಕೊಂಡಿದ್ದ ಡೆಲ್ಲಿ ಫ್ರಾಂಚೈಸಿ, ಆಕ್ಷನ್ ಮೂಲಕ 8 ಆಟಗಾರರನ್ನು ಖರೀದಿಸಿದ್ದಾರೆ. ಈ ಎಂಟು ಆಟಗಾರರಲ್ಲಿ ಐವರು ವಿದೇಶಿ ಪ್ಲೇಯರ್ಸ್ ಎಂಬುದು ವಿಶೇಷ.

ಈ ಐವರು ವಿದೇಶಿ ಆಟಗಾರರಲ್ಲಿ ಬೆನ್ ಡಕೆಟ್ ಕೂಡ ಒಬ್ಬರು. ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದರೆ ಕಳೆದ 18 ಸೀಸನ್ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನತ್ತ ಮುಖ ಮಾಡದ ಡಕೆಟ್ನನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ.

ವಿಶೇಷ ಎಂದರೆ ಬೆನ್ ಡಕೆಟ್ನ ಖರೀದಿಸಿರುವುದು ಕೆಎಲ್ ರಾಹುಲ್ಗಾಗಿ. ಐಪಿಎಲ್ ಹರಾಜಿಗೂ ಮುನ್ನ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮಾಲೀಕ ಪಾರ್ಥ್ ಜಿಂದಾಲ್ ಜೊತೆ ತಂಡಕ್ಕೆ ಡಕೆಟ್ ಅವರ ಅವಶ್ಯಕತೆಯಿದೆ ಎಂದಿದ್ದರು. ಹೀಗಾಗಿಯೇ ಬೆನ್ ಡಕೆಟ್ ಅವರಿಗಾಗಿ ನಾವು ಬಿಡ್ ಮಾಡಿದ್ದೇವೆ ಎಂದು ಜಿಂದಾಲ್ ತಿಳಿಸಿದ್ದಾರೆ.

ಇತ್ತ ಕೆಎಲ್ ರಾಹುಲ್ ಸೂಚನೆ ಮೇರೆಗೆ ಡಿಸಿ ಫ್ರಾಂಚೈಸಿ ಇಂಗ್ಲೆಂಡ್ ದಾಂಡಿಗನ ಖರೀದಿಸಿರುವ ಕಾರಣ ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಬೆನ್ ಡಕೆಟ್ ಆರಂಭಿಕನಾಗಿ ಆರಂಭಿಕನಾಗಿ ಕಣಕ್ಕಿಳಿಯಬಹುದು. ಅಂದರೆ ರಾಹುಲ್ ಹಾಗೂ ಡಕೆಟ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್, ಕೆಎಲ್ ರಾಹುಲ್, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಕರುಣ್ ನಾಯರ್, ಸಮೀರ್ ರಿಝ್ವಿ, ಅಶುತೋಷ್ ಶರ್ಮಾ, ವಿಪ್ರಾಜ್ ನಿಗಮ್, ಮಾಧವ್ ತಿವಾರಿ, ತ್ರಿಪುರಾಣ ವಿಜಯ್, ಅಜಯ್ ಮಂಡಲ್, ಕುಲ್ದೀಪ್ ಯಾದವ್, ಮಿಚೆಲ್ ಸ್ಟಾರ್ಕ್, ಟಿ. ನಟರಾಜನ್, ಮುಕೇಶ್ ಕುಮಾರ್, ದುಷ್ಮಂತ ಚಮೀರಾ, ಆಕಿಬ್ ನಬಿ, ಪಾತುಮ್ ನಿಸ್ಸಂಕಾ, ಬೆನ್ ಡಕೆಟ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಸಾಹಿಲ್ ಪರಾಖ್, ಪೃಥ್ವಿ ಶಾ, ಕೈಲ್ ಜೇಮಿಸನ್.
