AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​​ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್​ಫ್ಲಿಕ್ಸ್: ವಿಶೇಷತೆಯೇನು?

Netflix movie: ಒಟಿಟಿ ದೈತ್ಯ ನೆಟ್​​ಫ್ಲಿಕ್ಸ್​, ಭಾರತದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಭಾರತದ ಕಂಟೆಂಟ್ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣದ ಸಿನಿಮಾ ರಂಗದ ಮೇಲೆ ಭಾರಿ ಭರವಸೆ ನೆಟ್​​ಫ್ಲಿಕ್ಸ್​ಗೆ ಇದ್ದು, ಇದೀಗ ಹೈದರಾಬಾದ್​​ನಲ್ಲಿ ವಿಶೇಷ ಸ್ಟುಡಿಯೋವನ್ನು ಸಹ ನಿರ್ಮಾಣ ಮಾಡಿದೆ.

ಹೈದರಾಬಾದ್​​ನಲ್ಲಿ ಸ್ಟುಡಿಯೋ ಪ್ರಾರಂಭಿಸಿದ ನೆಟ್​ಫ್ಲಿಕ್ಸ್: ವಿಶೇಷತೆಯೇನು?
Netflix
ಮಂಜುನಾಥ ಸಿ.
|

Updated on: Mar 13, 2026 | 10:45 AM

Share

ನೆಟ್​ಫ್ಲಿಕ್ಸ್ (Netflix), ವಿಶ್ವದ ಒಟಿಟಿ ದೈತ್ಯ. ನೆಟ್​​ಫ್ಲಿಕ್ಸ್​​ಗಿಂತಲೂ ಹೆಚ್ಚು ಕಂಟೆಂಟ್ ಹೊಂದಿರುವ, ಹೆಚ್ಚು ಸಬ್​​ಸ್ಕ್ರೈಬರ್​​ಗಳನ್ನು ಹೊಂದಿರುವ ಒಟಿಟಿಗಳು ಇವೆಯಾದರೂ ನೆಟ್​ಫ್ಲಿಕ್ಸ್​​ನಷ್ಟು ಲಾಭದಾಯಕ ಒಟಿಟಿ ಇನ್ಯಾವುದೂ ಸಹ ಇಲ್ಲ. ಇತ್ತೀಚೆಗಷ್ಟೆ ಲಕ್ಷಾಂತರ ಕೋಟಿ ಕೊಟ್ಟು ವಾರ್ನರ್ ಬ್ರದರ್ಸ್ ನಿರ್ಮಾಣ ಸಂಸ್ಥೆಯನ್ನು ಖರೀದಿಸಲು ಮುಂದಾಗಿತ್ತು ನೆಟ್​ಫ್ಲಿಕ್ಸ್. ಈ ಒಟಿಟಿ ದೈತ್ಯ, ಭಾರತದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದು, ಭಾರತದ ಕಂಟೆಂಟ್ ಮೇಲೆ ಸಾವಿರಾರು ಕೋಟಿ ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣದ ಸಿನಿಮಾ ರಂಗದ ಮೇಲೆ ಭಾರಿ ಭರವಸೆ ನೆಟ್​​ಫ್ಲಿಕ್ಸ್​ಗೆ ಇದ್ದು, ಇದೀಗ ಹೈದರಾಬಾದ್​​ನಲ್ಲಿ ವಿಶೇಷ ಸ್ಟುಡಿಯೋವನ್ನು ಸಹ ನಿರ್ಮಾಣ ಮಾಡಿದೆ.

ಹೈದರಾಬಾದ್​​ನಲ್ಲಿ ನೆಟ್​​ಫ್ಲಿಕ್ಸ್ ತನ್ನ ಪ್ರತಿಷ್ಠಿತ ‘ಐಲೈನ್ ಸ್ಟೂಡಿಯೋಸ್’ ಸ್ಟುಡಿಯೋ ನಿರ್ಮಾಣ ಮಾಡಿದೆ. ನೆಟ್​ಫ್ಲಿಕ್ಸ್​ ನ ಐದನೇ ಐಲನ್ ಸ್ಟುಡಿಯೋ ಕೇಂದ್ರ ಇದಾಗಿದೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಗುರುವಾರ ಹೈದರಾಬಾದ್‌ನಲ್ಲಿ ನೆಟ್‌ಫ್ಲಿಕ್ಸ್‌ನ ಈ ಪ್ರತಿಷ್ಠಿತ ‘ಐಲೈನ್ ಸ್ಟೂಡಿಯೋಸ್’ ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಹೈದರಾಬಾದ್‌ಗೆ ನೆಟ್‌ಫ್ಲಿಕ್ಸ್ ಬಂದಿರುವುದು ಎಂದರೆ ಹಾಲಿವುಡ್ ಹೈದರಾಬಾದ್‌ಗೆ ಬಂದಂತೆ” ಎಂದು ಬಣ್ಣಿಸಿದರು.

ನೆಟ್​​ಫ್ಲಿಕ್ಸ್ ಈ ವರೆಗೆ ಲಾಸ್ ಏಂಜಲೀಸ್, ವ್ಯಾಂಕೋವರ್, ಲಂಡನ್ ಮತ್ತು ಸಿಯೋಲ್ ನಲ್ಲಿ ಮಾತ್ರವೇ ಐಲೈನ್ ಸ್ಟುಡಿಯೋಗಳನ್ನು ಹೊಂದಿತ್ತು. ಇದೀಗ ಹೈದರಾಬಾದ್‌ನಲ್ಲಿ ಆರಂಭವಾಗಿರುವ ಈ ಸ್ಟೂಡಿಯೋ ನೆಟ್‌ಫ್ಲಿಕ್ಸ್‌ನ ವಿಶ್ವದ 5ನೇ ಅತಿದೊಡ್ಡ ವಿಎಫ್‌ಎಕ್ಸ್ (VFX) ಮತ್ತು ವರ್ಚುವಲ್ ಪ್ರೊಡಕ್ಷನ್ ಕೇಂದ್ರವಾಗಿದೆ. ಸುಮಾರು 32,000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಸ್ಟೂಡಿಯೋ ಅತ್ಯಾಧುನಿಕ ದೃಶ್ಯ ವೈಭವದ ತಂತ್ರಜ್ಞಾನವನ್ನು ಹೊಂದಿದೆ. ಇದು ತೆಲಂಗಾಣದ ಸ್ಥಳೀಯ ಕಲಾವಿದರು ಮತ್ತು ತಾಂತ್ರಿಕ ನುರಿತ ಯುವಕರಿಗೆ ಜಾಗತಿಕ ಮಟ್ಟದ ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಜೊತೆಗೆ ದಕ್ಷಿಣದ ಸಿನಿಮಾ, ವೆಬ್ ಸರಣಿಗಳಿಗೆ ನೆಟ್​​ಫ್ಲಿಕ್ಸ್​ ಇನ್ನಷ್ಟು ಒತ್ತಾಸೆಯನ್ನು ನೀಡಲಿದೆ.

ಇದನ್ನೂ ಓದಿ:ನೆಟ್‌ಫ್ಲಿಕ್ಸ್‌ನ ‘ಘೂಸ್‌ಖೋರ್ ಪಂಡತ್’ ವಿವಾದ: ಟೀಸರ್ ಡಿಲೀಟ್ ಮಾಡಿದ ಚಿತ್ರತಂಡ

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ನೆಟ್‌ಫ್ಲಿಕ್ಸ್ ಸಂಸ್ಥೆಯು ತನ್ನ ಕಾರ್ಪೊರೇಟ್ ಕಚೇರಿಯನ್ನು ಸರ್ಕಾರ ನಿರ್ಮಿಸುತ್ತಿರುವ ‘ಭಾರತ್ ಫ್ಯೂಚರ್ ಸಿಟಿ’ಗೆ ಸ್ಥಳಾಂತರಿಸುವಂತೆ ಆಹ್ವಾನ ನೀಡಿದ್ದಾರೆ. ಇದಕ್ಕಾಗಿ ಅಗತ್ಯವಿರುವ ಭೂಮಿ ಮತ್ತು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಐಟಿ ಸಚಿವ ಡಿ. ಶ್ರೀಧರ್ ಬಾಬು, ಚಿತ್ರನಟ ರಾಣಾ ದಗ್ಗುಬಾಟಿ, ಐಲೈನ್ ಸ್ಟೂಡಿಯೋಸ್ ಸಿಇಒ ಜೆಫ್ ಶಪಿರೊ ಮತ್ತು ಇತರ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು.

ನೆಟ್​ಫ್ಲಿಕ್ಸ್​ ಕಳೆದ ಕೆಲ ವರ್ಷಗಳಿಂದ ತೆಲುಗು ಚಿತ್ರೋದ್ಯಮದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ‘ಆರ್​​ಆರ್​​ಆರ್’ ಸಿನಿಮಾದ ಬಳಿಕ ನೆಟ್​​ಫ್ಲಿಕ್ಸ್​ನ ಸಿಇಒ ಖುದ್ದು ಹೈದರಾಬಾದ್​​ಗೆ ಬಂದು ರಾಜಮೌಳಿ, ಜೂ ಎನ್​​ಟಿಆರ್ ಸೇರಿದಂತೆ ತೆಲುಗು ಚಿತ್ರರಂಗದ ಹಲವು ತಾರೆಯರನ್ನು ಭೇಟಿ ಆಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು