AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಸತತ 14 ವರ್ಷಗಳ ಐಪಿಎಲ್ ಪ್ರಯಾಣಕ್ಕೆ ಅಂತ್ಯ ಹಾಡಿದ ಆರ್​ಸಿಬಿ ಮಾಜಿ ನಾಯಕ

Faf du Plessis IPL Auction 2026: ಫಾಫ್ ಡು ಪ್ಲೆಸಿಸ್ 2026ರ ಐಪಿಎಲ್ ಮಿನಿ ಹರಾಜಿನಿಂದ ಹಿಂದೆ ಸರಿದಿದ್ದಾರೆ. 14 ವರ್ಷಗಳ ಯಶಸ್ವಿ ಐಪಿಎಲ್ ಪಯಣದ ನಂತರ, ಹೊಸ ಸವಾಲನ್ನು ಎದುರಿಸಲು ಪಿಎಸ್ಎಲ್​ನಲ್ಲಿ ಆಡಲು ನಿರ್ಧರಿಸಿದ್ದಾರೆ ಎಂದು ಅವರು ನವೆಂಬರ್ 29 ರಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಸಿಎಸ್‌ಕೆ, ಆರ್‌ಸಿಬಿ ಮತ್ತು ಡೆಲ್ಲಿ ಪರ ಆಡಿದ್ದ ಫಾಫ್ ಭಾರತ ಮತ್ತು ಐಪಿಎಲ್ ತಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.

ಪೃಥ್ವಿಶಂಕರ
|

Updated on: Nov 29, 2025 | 8:31 PM

Share
ಐಪಿಎಲ್ 2026 ರ ಆಟಗಾರರ ಮಿನಿ ಹರಾಜು ಡಿಸೆಂಬರ್ 16 ರಂದು ನಿಗದಿಯಾಗಿದ್ದು, ಈ ಬಾರಿಯೂ ಸಹ ಅನೇಕ ದೊಡ್ಡ ಹೆಸರುಗಳು ಹರಾಜಿನಲ್ಲಿ ಭಾಗವಹಿಸಲಿವೆ. ಎಲ್ಲಾ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ತಮ್ಮ ಫ್ರಾಂಚೈಸಿಗಳಲ್ಲಿ ನೋಡಲು ಬಯಸುತ್ತಿದ್ದರೂ, ಐಪಿಎಲ್‌ನ ಅತ್ಯಂತ ಯಶಸ್ವಿ ಮತ್ತು ಅತ್ಯಂತ ಪ್ರೀತಿಯ ಅನುಭವಿ ಆಟಗಾರರಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಈ ಬಾರಿ ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.

1 / 5
ನವೆಂಬರ್ 29 ರಂದು, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಐಪಿಎಲ್​ ಹರಾಜಿನಲ್ಲಿ ಭಾಗವಹಿಸದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ಡು ಪ್ಲೆಸಿಸ್ ಈ ವರ್ಷ ಹರಾಜಿನಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದರು. ಡು ಪ್ಲೆಸಿಸ್ ‘ಐಪಿಎಲ್‌ನಲ್ಲಿ 14 ವರ್ಷಗಳ ನಂತರ, ನಾನು ಈ ವರ್ಷ ಹರಾಜಿನಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದೇನೆ. ಇದು ಒಂದು ದೊಡ್ಡ ನಿರ್ಧಾರ ಮತ್ತು ಬಹಳ ಕೃತಜ್ಞತೆಯಿಂದ ತೆಗೆದುಕೊಂಡ ನಿರ್ಧಾರ’ ಎಂದು ಬರೆದುಕೊಂಡಿದ್ದಾರೆ.

2 / 5
ಚೆನ್ನೈ ಸೂಪರ್ ಕಿಂಗ್ಸ್ ಪರ ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಡು ಪ್ಲೆಸಿಸ್ ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಆದರೆ ಈ ವರ್ಷದ ಹರಾಜಿಗೆ ಮುನ್ನವೇ ಅವರನ್ನು ಡೆಲ್ಲಿ ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಇದೀಗ 40 ವರ್ಷದ ಡು ಪ್ಲೆಸಿಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

3 / 5
ಈ ಬಗ್ಗೆ ಮುಂದುವರೆದು ಬರೆದುಕೊಂಡಿರುವ ಫಾಫ್, ‘14 ವರ್ಷಗಳು ಬಹಳ ಸಮಯ, ಮತ್ತು ಈ ಮೈಲಿಗಲ್ಲು ನನಗೆ ಎಷ್ಟು ಅರ್ಥವಾಗಿದೆ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ಭಾರತವು ನನ್ನ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ, ಮತ್ತು ಇದು ಖಂಡಿತವಾಗಿಯೂ ವಿದಾಯವಲ್ಲ. ನೀವು ನನ್ನನ್ನು ಮತ್ತೆ ನೋಡುತ್ತೀರಿ. ಈ ವರ್ಷ, ನಾನು ಹೊಸ ಸವಾಲನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಮತ್ತು ಪಿಎಸ್ಎಲ್​ನ ಮುಂಬರುವ ಸೀಸನ್​ನಲ್ಲಿ ಆಡುತ್ತೇನೆ’ ಎಂದಿದ್ದಾರೆ.

4 / 5
2012 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಫಾಫ್, ಈ ಫ್ರಾಂಚೈಸಿ ಪರ ಏಳು ಸೀಸನ್ ಆಡಿದರು. ಈ ನಡುವೆ 2018 ಮತ್ತು 2021 ರಲ್ಲಿ ತಂಡವನ್ನು ಚಾಂಪಿಯನ್ ಮಾಡುವಲ್ಲು ಶ್ರಮಿಸಿದ್ದರು. ಆ ನಂತರ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್, ಆರ್​ಸಿಬಿ ಮತ್ತು ದೆಹಲಿ ಕ್ಯಾಪಿಟಲ್ಸ್ ಪರವೂ ಆಡಿದ್ದಾರೆ. ಇದುವರೆಗೆ ಐಪಿಎಲ್‌ನಲ್ಲಿ 154 ಪಂದ್ಯಗಳನ್ನಾಡಿರುವ ಫಾಫ್, 39 ಅರ್ಧಶತಕಗಳನ್ನು ಒಳಗೊಂಡಂತೆ 4,773 ರನ್ ಬಾರಿಸಿದ್ದಾರೆ.

5 / 5
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?

ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ

ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ

ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!

ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ