AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WPL 2026 Final: ಸತತ 4ನೇ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್ ಕೈಜಾರಿದ ಟ್ರೋಫಿ

Delhi Capitals' WPL Finals Curse: 2026ರ WPL ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸತತ ನಾಲ್ಕನೇ ಫೈನಲ್ ಸೋಲು. 2023ರಲ್ಲಿ ಪ್ರಾರಂಭವಾದ WPLನ ಎಲ್ಲಾ ನಾಲ್ಕು ಫೈನಲ್‌ ತಲುಪಿದ ಏಕೈಕ ತಂಡ ಡೆಲ್ಲಿ, ಆದರೆ ಕಪ್ ಗೆಲ್ಲುವ ಅದೃಷ್ಟ ಒದಗಿ ಬಂದಿಲ್ಲ.

ಪೃಥ್ವಿಶಂಕರ
|

Updated on: Feb 06, 2026 | 7:12 AM

Share
 2026 ರ ಮಹಿಳಾ ಪ್ರೀಮಿಯರ್ ಲೀಗ್​​ಗೆ ಅದ್ಧೂರಿ ತೆರೆ ಬಿದ್ದಿದೆ. ವಡೋದರಾದಲ್ಲಿ ನಡೆದ 4ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿಹಿಡಿಯಿತು. ಇತ್ತ ಸತತ ನಾಲ್ಕನೇ ಬಾರಿಗೆ ಫೈನಲ್​ಗೇರಿದ್ದ ಡೆಲ್ಲಿ ತಂಡ ಈ ಬಾರಿಯೂ ಸೋಲಿನ ನಿರಾಶೆಗೆ ಕೊರಳೊಡ್ಡಬೇಕಾಯಿತು.

1 / 6
2023 ರಲ್ಲಿ ಆರಂಭವಾದ ಮಹಿಳಾ ಪ್ರೀಮಿಯರ್ ಲೀಗ್ ಇದುವರೆಗೆ 4 ಆವೃತ್ತಿಗಳನ್ನು ಕಂಡಿದೆ. ಅಚ್ಚರಿಯ ಸಂಗತಿಯೆಂದರೆ ಈ ನಾಲ್ಕು ಆವೃತ್ತಿಗಳ ಫೈನಲ್​ ಪಂದ್ಯವನ್ನು ಆಡಿದ ಏಕೈಕ ತಂಡವೆಂದರೆ ಅದು ಡೆಲ್ಲಿ ಕ್ಯಾಪಿಟಲ್ಸ್. ಆದರೆ ಒಮ್ಮೆಯೂ ಡೆಲ್ಲಿ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಸಾಧ್ಯವಾಗಿಲ್ಲ. ಮೊದಲ 3 ಆವೃತ್ತಿಯಲ್ಲಿ ಮೆಗ್ ಲ್ಯಾನಿಂಗ್ ತಂಡವನ್ನು ಮುನ್ನಡೆದಸಿದ್ದರೆ, ಈ ಆವೃತ್ತಿಯಲ್ಲಿ ಜೆಮಿಮಾ ರಾಡ್ರಿಗಸ್ ತಂಡದ ನಾಯಕತ್ವವಹಿಸಿದ್ದರು. ನಾಯಕಿ ಬದಲಾದರೂ ಡೆಲ್ಲಿ ತಂಡದ ಅದೃಷ್ಟ ಮಾತ್ರ ಬದಲಾಗಲಿಲ್ಲ.

2 / 6
2023 ರಲ್ಲಿ ನಡೆದಿದ್ದ ಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ 131 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಕೇವಲ 3 ವಿಕೆಟ್ ಕಳೆದುಕೊಂಡು ಕೊನೆಯ ಓವರ್​ನಲ್ಲಿ ಜಯದ ನಗೆ ಬೀರಿತ್ತು.

3 / 6
2024 ರಲ್ಲಿ ನಡೆದ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್​ಗೇರಿತ್ತು. ಆದರೆ ಈ ಬಾರಿ ಎದುರಾಳಿಯಾಗಿ ಆರ್​ಸಿಬಿ ಮುಂದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ ಕೊನೆಯ ಓವರ್​ನಲ್ಲಿಮ ಗೆದ್ದು ಬೀಗಿತ್ತು.

4 / 6
ಕೊನೆಯ ಆವೃತ್ತಿಯಲ್ಲಿ ಅಂದರೆ 2025 ರ ಆವೃತ್ತಿಯಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್​ಗೇರಿತ್ತು. ಈ ಬಾರಿ ಮುಂಬೈ ಇಂಡಿಯನ್ಸ್ ಎರಡನೇ ಬಾರಿಗೆ ಡೆಲ್ಲಿ ತಂಡಕ್ಕೆ ಎದುರಾಳಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ 149 ರನ್ ಕಲೆಹಾಕಿತ್ತು. ಗುರಿ ಬೆನ್ನಟ್ಟಿದ್ದ ಡೆಲ್ಲಿ ತಂಡ 20 ಓವರ್​ಗಳಲ್ಲಿ 141 ರನ್ ಕಲೆಹಾಕಲಷ್ಟೇ ಶಕ್ತವಾಗಿ 8 ರನ್​ಗಳಿಂದ ಸೋತಿತ್ತು.

5 / 6
ಇದೀಗ 2026 ರ ಆವೃತ್ತಿಯಲ್ಲೂ ಫೈನಲ್​ಗೇರಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೇ ಸೋಲಿನ ಆಘಾತ ಎದುರಾಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ಗಳ ಬೃಹತ್ ರನ್ ದಾಖಲಿಸಿತು.  ಈ ಗುರಿ ಬೆನ್ನಟ್ಟಿದ ಆರ್​ಸಿಬಿ ಕೊನೆಯ ಓವರ್​ನಲ್ಲಿ ಗೆಲುವಿನ ರುಚಿ ಕಂಡಿತು. ಹೀಗಾಗಿ ಈ ಬಾರಿಯೂ ಡೆಲ್ಲಿ ತಂಡಕ್ಕೆ ಗೆಲುವು ಧಕ್ಕಲಿಲ್ಲ.

6 / 6
WPL ಟ್ರೋಫಿಯನ್ನು ಆರ್​ಸಿಬಿ ಅಭಿಮಾನಿಗಳಿಗೆ ಅರ್ಪಿಸಿದ ಸ್ಮೃತಿ

ಆರ್​ಸಿಬಿ ಚಾಂಪಿಯನ್ ಸಂಭ್ರಮಾಚರಣೆ ಹೇಗಿತ್ತು ನೋಡಿ

ಫೈನಲ್​ನಲ್ಲಿ 23 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ಸ್ಮೃತಿ

ಮೆಟ್ರೋ ಟಿಕೆಟ್ ದರ ಏರಿಕೆ ಮಾಡಿದ್ಯಾರು? ತೇಜಸ್ವಿ ಸೂರ್ಯ ಹೇಳಿದ್ದಿಷ್ಟು

ಒಂದು ನಾಯಿಯಿಂದ ತಪ್ಪಿಸಿಕೊಳ್ಳಲು ಗೇಟ್ ಹಾರಿದವನಿಗೆ ಕಾದಿತ್ತು ಶಾಕ್!

ಈ ಕಟ್ಟಡದ ಮುಂಭಾಗ ರೀಲ್ಸ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಜತ್

ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ;ಮೋದಿ ವಾಗ್ದಾಳಿ

ಜ್ಯೋತಿಷಿ ಜತೆ ಚಕ್ಕಂದ: ಹೆಂಡ್ತಿಯ ಮತ್ತಷ್ಟು ಕಾಮಪುರಣ ಬಿಚ್ಚಿಟ್ಟ ಪತಿ

ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ

ನಮ್ಮ ಮೆಟ್ರೋ ದರ ಏರಿಕೆ ಬಗ್ಗೆ ಬಿಎಂಆರ್​​ಸಿಎಲ್​​​​ನ CPRO ಹೇಳಿದ್ದಿಷ್ಟು