‘ಸಲಾರ್​’ ನಟಿ ಶ್ರುತಿ ಹಾಸನ್​ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ

‘ಶ್ರುತಿ ಹಾಸನ್​ ಗಂಡನ ಜೊತೆ ನನಗೆ ಸ್ನೇಹ ಇದೆ’ ಎಂದು ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಹೇಳಿದ್ದಾರೆ. ಹಾಗಾಗಿ ಶ್ರುತಿ ಹಾಸನ್​ ಅವರು ಬಾಯ್​ಫ್ರೆಂಡ್​ ಶಾಂತನು ಹಜಾರಿಕಾ ಜೊತೆ ಗುಟ್ಟಾಗಿ ಮದುವೆ ಆಗಿರಬಹುದು ಎಂದು ಎಲ್ಲರೂ ಊಹಿಸಿದ್ದಾರೆ. ಅದಕ್ಕೆ ಈಗ ಶ್ರುತಿ ಹಾಸನ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಸಲಾರ್​’ ನಟಿ ಶ್ರುತಿ ಹಾಸನ್​ ಗುಟ್ಟಾಗಿ ಮದುವೆ ಆಗಿದ್ದಾರಾ? ಸ್ಪಷ್ಟನೆ ನೀಡಿದ ಕಮಲ್​ ಪುತ್ರಿ
ಶ್ರುತಿ ಹಾಸನ್​, ಶಾಂತನು ಹಜಾರಿಕಾ
Follow us
ಮದನ್​ ಕುಮಾರ್​
|

Updated on: Dec 27, 2023 | 11:16 AM

ನಟಿ ಶ್ರುತಿ ಹಾಸನ್​ ಅವರು ‘ಸಲಾರ್​’ (Salaar Movie) ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಡಿಸೆಂಬರ್​ 22ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರದ ಗೆಲುವಿನಿಂದ ಶ್ರುತಿ ಹಾಸನ್​ (Shruti Haasan) ಅವರ ಡಿಮ್ಯಾಂಡ್​ ಹೆಚ್ಚಾಗಿದೆ. ಇದರ ನಡುವೆ ಅವರ ಮದುವೆ (Shruti Haasan Marriage) ಕುರಿತು ಗಾಸಿಪ್​ ಹರಿದಾಡಿದೆ. ಇದಕ್ಕೆಲ್ಲ ಕಾರಣ ಆಗಿದ್ದು ಒಂದೇ ಒಂದು ಕಮೆಂಟ್​. ಆದರೆ ಅದಕ್ಕೆ ಸ್ವತಃ ಶ್ರುತಿ ಹಾಸನ್​ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ತಾವು ಇನ್ನೂ ಮದುವೆ ಆಗಿಲ್ಲ ಎಂದು ಅವರು ಹೇಳಿದ್ದಾರೆ. ಅದರ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ..

ಬಾಲಿವುಡ್​ ಸೆಲೆಬ್ರಿಟಿಗಳ ಸ್ನೇಹಿತ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಇತ್ತೀಚೆಗೆ ಪ್ರಶ್ನೋತ್ತರ ನಡೆಸಿದರು. ಈ ವೇಳೆ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ‘ಶ್ರುತಿ ಹಾಸನ್​ ಗಂಡನ ಜೊತೆ ನನಗೆ ಸ್ನೇಹ ಇದೆ’ ಎಂದು ಒರಿ ಹೇಳಿದರು. ಹಾಗಾಗಿ ಶ್ರುತಿ ಹಾಸನ್​ ಅವರು ಬಾಯ್​ಫ್ರೆಂಡ್​ ಶಾಂತನು ಹಜಾರಿಕಾ ಜೊತೆ ಗುಟ್ಟಾಗಿ ಮದುವೆ ಆಗಿರಬಹುದು ಎಂದು ಎಲ್ಲರೂ ಊಹಿಸಿದ್ದಾರೆ. ಅದಕ್ಕೆ ಶ್ರುತಿ ಹಾಸನ್​ ಪ್ರತಿಕ್ರಿಯೆ ನೀಡಿದ್ದಾರೆ.

‘ನಾನು ಮದುವೆ ಆಗಿಲ್ಲ. ಎಲ್ಲದರ ಬಗ್ಗೆಯೂ ತಿಳಿಸುವ ನಾನು ಮದುವೆ ವಿಚಾರವನ್ನು ಯಾಕೆ ಮುಚ್ಚಿಡಲಿ? ನನ್ನ ಬಗ್ಗೆ ಏನೂ ಗೊತ್ತಿಲ್ಲದೇ ಇರುವವರು ದಯವಿಟ್ಟು ಸುಮ್ಮನಿರಿ’ ಎಂದು ಶ್ರುತಿ ಹಾಸನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಶಾಂತನು ಹಜಾರಿಕಾ ಜೊತೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ. ಆದರೆ ಮದುವೆ ಬಗ್ಗೆ ಇನ್ನೂ ನಿರ್ಧಾರ ತಿಳಿಸಿಲ್ಲ.

ಇದನ್ನೂ ಓದಿ: ‘ಸಲಾರ್​’ ಚಿತ್ರಕ್ಕೆ ಪ್ರಭಾಸ್​, ಪ್ರಶಾಂತ್​ ನೀಲ್​, ಶ್ರುತಿ ಹಾಸನ್​ ಪಡೆದ ಸಂಭಾವನೆ ಎಷ್ಟು?

ಕಮಲ್​ ಹಾಸನ್​ ಅವರ ಮಗಳು ಎಂಬ ಕಾರಣಕ್ಕೆ ಶ್ರುತಿ ಹಾಸನ್​ಗೆ ಬೇಗ ಅವಕಾಶಗಳು ಸಿಕ್ಕವು. ಈಗಲೂ ಅವರು ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸ್ಟಾರ್​ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ಅವರು ಆಗಾಗ ಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಮದುವೆ ಕುರಿತು ಅವರು ನೀಡಿರುವ ಸ್ಪಷ್ಟನೆ ಬಗ್ಗೆ ಒರಿ ಏನು ಹೇಳ್ತಾರೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.