‘ಅನಿಮಲ್​’ ಗೆದ್ದ ಬಳಿಕ ‘ಆಶಿಕಿ 3’ ಚಿತ್ರಕ್ಕೆ ನಾಯಕಿಯಾದ ಬೋಲ್ಡ್​ ನಟಿ ತೃಪ್ತಿ ದಿಮ್ರಿ

‘ಆಶಿಕಿ 3’ ತಂಡವು ನಾಯಕಿಗಾಗಿ ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿತ್ತು. ಅಂತಿಮವಾಗಿ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಿನಿಮಾದಿಂದ ತೃಪ್ತಿ ದಿಮ್ರಿ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ‘ಅನಿಮಲ್​’ ತೆರೆಕಂಡ ಬಳಿಕ ಚಿತ್ರರಂಗದಲ್ಲಿ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

‘ಅನಿಮಲ್​’ ಗೆದ್ದ ಬಳಿಕ ‘ಆಶಿಕಿ 3’ ಚಿತ್ರಕ್ಕೆ ನಾಯಕಿಯಾದ ಬೋಲ್ಡ್​ ನಟಿ ತೃಪ್ತಿ ದಿಮ್ರಿ
ಕಾರ್ತಿಕ್​ ಆರ್ಯನ್​, ತೃಪ್ತಿ ದಿಮ್ರಿ
Follow us
ಮದನ್​ ಕುಮಾರ್​
|

Updated on: Dec 27, 2023 | 12:03 PM

ಬಾಲಿವುಡ್​ ನಟಿ ತೃಪ್ತಿ ದಿಮ್ರಿ (Tripti Dimri) ಅವರು ಸಖತ್​ ಸುದ್ದಿಯಲ್ಲಿದ್ದಾರೆ. ‘ಅನಿಮಲ್​’ ಸಿನಿಮಾದಲ್ಲಿ ರಣಬೀರ್​ ಕಪೂರ್​ ಜೊತೆ ಬೋಲ್ಡ್​ ದೃಶ್ಯದಲ್ಲಿ ನಟಿಸಿದ ಅವರಿಗೆ ಜನಪ್ರಿಯತೆ ಹೆಚ್ಚಾಗಿದೆ. ಹೊಸ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಈಗ ತೃಪ್ತಿ ದಿಮ್ರಿ ಅವರು ‘ಆಶಿಕಿ 3’ (Aashiqui 3) ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿ ಆಗಿದೆ. ಈ ಸಿನಿಮಾದಲ್ಲಿ ತೃಪ್ತಿ ದಿಮ್ರಿ ಜೊತೆ ಕಾರ್ತಿಕ್​ ಆರ್ಯನ್​ (Kartik Aaryan) ಅಭಿನಯಿಸಲಿದ್ದಾರೆ. ಅನುರಾಗ್​ ಬಸು ಅವರು ‘ಆಶಿಕಿ 3’ ಸಿನಿಮಾಗೆ ನಿರ್ದೇಶನ ಮಾಡಲಿದ್ದಾರೆ.

‘ಆಶಿಕಿ 3’ ತಂಡವು ನಾಯಕಿಗಾಗಿ ಹಲವು ದಿನಗಳಿಂದ ಹುಡುಕಾಟ ನಡೆಸುತ್ತಿತ್ತು. ಅಂತಿಮವಾಗಿ ತೃಪ್ತಿ ದಿಮ್ರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಸಿನಿಮಾದಿಂದ ತೃಪ್ತಿ ದಿಮ್ರಿ ಅವರ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ‘ಅನಿಮಲ್​’ ತೆರೆಕಂಡ ಬಳಿಕ ಅವರನ್ನು ಸೋಶಿಯಲ್​ ಮೀಡಿಯಾದಲ್ಲಿ ಫಾಲೋ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಇದನ್ನೂ ಓದಿ:  ‘ಅನಿಮಲ್​’ ನಟಿಯ 8 ವರ್ಷದ ಹಳೇ ವಿಡಿಯೋ ವೈರಲ್​; ತೃಪ್ತಿ ದಿಮ್ರಿ ಆಗಲೇ ಬೋಲ್ಡ್​

1990ರಲ್ಲಿ ಬಂದ ‘ಆಶಿಕಿ’ ಸಿನಿಮಾದಲ್ಲಿ ರಾಹುಲ್ ರಾಯ್​, ಅನು ಅಗರ್​ವಾಲ್​ ಅವರು ಜೋಡಿಯಾಗಿ ನಟಿಸಿದ್ದರು. ಆ ಸಿನಿಮಾ ಮ್ಯೂಸಿಕಲ್​ ಹಿಟ್​ ಆಗಿತ್ತು. 2013ರಲ್ಲಿ ತೆರೆಕಂಡ ‘ಆಶಿಕಿ 2’ ಸಿನಿಮಾದ ಮೂಲಕ ಆದಿತ್ಯ ರಾಯ್​ ಕಪೂರ್​ ಮತ್ತು ಶ್ರದ್ಧಾ ಕಪೂರ್​ ಅವರು ಫೇಮಸ್​ ಆದರು. ಈಗ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್​ ಆರ್ಯನ್​ ಮತ್ತು ತೃಪ್ತಿ ದಿಮ್ರಿ ಜೋಡಿ ಆಗುತ್ತಿರುವುದು ನಿರೀಕ್ಷೆ ಮೂಡಿಸಿದೆ.

ಇದನ್ನೂ ಓದಿ: ಅನಿಮಲ್ ನಟಿ ತೃಪ್ತಿ ದಿಮ್ರಿ ಖ್ಯಾತಿ ಹೆಚ್ಚಲು ಸಿಕ್ಕಿದೆ ಇನ್ನೊಂದು ಕಾರಣ

2022ರಲ್ಲಿ ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆಯಾದ ‘ಕಲಾ’ ವೆಬ್​ ಸರಣಿಯಲ್ಲಿ ತೃಪ್ತಿ ದಿಮ್ರಿ ನಟಿಸಿದ್ದರು. ಗಾಯಕಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಆ ವೆಬ್​ ಸಿರೀಸ್​ನಿಂದ ಅವರಿಗೆ ಜನಮೆಚ್ಚುಗೆ ಸಿಕ್ಕಿತ್ತು. ಒಟಿಟಿಯಲ್ಲಿ ಹೆಚ್ಚು ಫೇಮಸ್​ ಆಗಿದ್ದ ಅವರು ‘ಅನಿಮಲ್​’ ತೆರೆಕಂಡ ಬಳಿಕ ಭಾರಿ ಜನಪ್ರಿಯತೆ ಪಡೆದುಕೊಂಡರು. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು ಈಗ 44 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್