AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2023: ‘ದಿ ಕೇರಳ ಸ್ಟೋರಿ’ಯಿಂದ ಕೇಸರಿ ಬಿಕಿನಿ ತನಕ: 2023ರಲ್ಲಿ ಬಾಲಿವುಡ್​ ಮಂದಿಯ ವಿವಾದ ಒಂದೆರಡಲ್ಲ

2023 Bollywood Controversy: ಚಿತ್ರರಂಗದಲ್ಲಿ ವಿವಾದಗಳು ಸಹಜ. 2023ರಲ್ಲಿ ಬಾಲಿವುಡ್​ ಮಂದಿ ಅನೇಕ ವಿವಾದಗಳನ್ನು ಮಾಡಿಕೊಂಡರು. ಅಕ್ಷಯ್​ ಕುಮಾರ್​, ದೀಪಿಕಾ ಪಡುಕೋಣೆ, ಓಂ ರಾವತ್​, ರಣವೀರ್​ ಸಿಂಗ್​, ಸಲ್ಮಾನ್​ ಖಾನ್​, ರಣಬೀರ್​ ಕಪೂರ್​​, ನಾನಾ ಪಾಟೇಕರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕಾಂಟ್ರವರ್ಸಿ ಕಾರಣಕ್ಕೆ ಸುದ್ದಿಯಾದರು.

Year Ender 2023: ‘ದಿ ಕೇರಳ ಸ್ಟೋರಿ’ಯಿಂದ ಕೇಸರಿ ಬಿಕಿನಿ ತನಕ: 2023ರಲ್ಲಿ ಬಾಲಿವುಡ್​ ಮಂದಿಯ ವಿವಾದ ಒಂದೆರಡಲ್ಲ
ಹಿಂದಿ ಚಿತ್ರರಂಗದ ವಿವಾದ
ಮದನ್​ ಕುಮಾರ್​
|

Updated on:Dec 27, 2023 | 6:04 PM

Share

2023ರಲ್ಲಿ ಹಿಂದಿ ಚಿತ್ರರಂಗ (Hindi Film Industry) ಹಲವು ಏರಿಳಿತಗಳನ್ನು ಕಂಡಿದೆ. ಹಲವು ಸಿನಿಮಾಗಳು ಹೀನಾಯವಾಗಿ ಸೋತರೆ, ಒಂದಷ್ಟು ಸಿನಿಮಾಗಳು ಭರ್ಜರಿ ಕಮಾಯಿ ಮಾಡಿದವು. ಅದೇ ರೀತಿ, ವಿವಾದಗಳ (Controversy) ಕೂಡ ಹೇರಳವಾಗಿದ್ದವು. ಬಾಲಿವುಡ್​ ಸೆಲೆಬ್ರಿಟಿಗಳು ಒಂದಲ್ಲ ಒಂದು ಕಿರಿಕ್​ ಮಾಡಿಕೊಂಡು ಸುದ್ದಿಯಾದರು. ದೀಪಿಕಾ ಪಡುಕೋಣೆ (Deepika Padukone) ಧರಿಸಿದ ಕೇಸರಿ ಬಿಕಿನಿಯಿಂದ ಆರಂಭವಾಗಿ ಇತ್ತೀಚೆಗೆ ಬಿಡುಗಡೆ ಆದ ‘ಅನಿಮಲ್​’ ಸಿನಿಮಾದವರೆಗೆ ಅನೇಕ ವಿವಾದಗಳು ಸದ್ದು ಮಾಡಿದ್ದವು. ಅವುಗಳ ಬಗ್ಗೆ ಇಲ್ಲಿದೆ ವಿವರ..

ದೀಪಿಕಾ ಪಡುಕೋಣೆ ಬಿಕಿನಿ ವಿವಾದ:

ಶಾರುಖ್​ ಖಾನ್​ ಮತ್ತು ದೀಪಿಕಾ ಪಡುಕೋಣೆ ಅವರು ಜೋಡಿಯಾಗಿ ನಟಿಸಿದ ‘ಪಠಾಣ್​’ ಸಿನಿಮಾ 2023ರ ಜನವರಿ 25ರಂದು ಬಿಡುಗಡೆ ಆಯಿತು. ಆ ಸಿನಿಮಾದ ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಧರಿಸಿದ್ದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಲು ಕೆಲವರು ಮುಂದಾಗಿದ್ದರು. ಆದರೆ ಆ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತು.

‘ದಿ ಕೇರಳ ಸ್ಟೋರಿ’

ಮೇ ತಿಂಗಳಲ್ಲಿ ಬಿಡುಗಡೆಯಾದ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಕೆಲವು ವಿವಾದಿತ ಅಂಶಗಳು ಇವೆ ಎಂದು ಆಕ್ಷೇಪ ಎದುರಾಗಿತ್ತು. ಒಂದು ಸಮುದಾಯದ ಜನರನ್ನು ಇದರಲ್ಲಿ ಆಕ್ಷೇಪಾರ್ಹವಾಗಿ ತೋರಿಸಲಾಗಿದೆ ಎಂದು ಹೇಳಲಾಗಿತ್ತು. ನೈಜ ಘಟನೆಗಳನ್ನು ವೈಭವೀಕರಿಸಿ ಸಿನಿಮಾ ಮಾಡಲಾಗಿದೆ ಹಾಗೂ ಇದೊಂದು ಪ್ರೊಪಗಾಂಡ ಸಿನಿಮಾ ಎಂಬ ಆರೋಪ ಎದುರಾಗಿತ್ತು. ಈ ಚಿತ್ರ ಕೂಡ ಗಲ್ಲಾ ಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್​ ಮಾಡಿತು.

‘ಆದಿಪುರುಷ್​’

ಪ್ರಭಾಸ್​ ನಟನೆಯ ‘ಆದಿಪುರುಷ್​’ ಸಿನಿಮಾದಲ್ಲಿನ ಡೈಲಾಗ್​ಗಳು ಕಳಪೆ ಆಗಿವೆ ಮತ್ತು ರಾಮಾಯಣದ ಪಾತ್ರಗಳಿಗೆ ಅವಮಾನ ಆಗುವ ರೀತಿಯಲ್ಲಿ ವೇಷಭೂಷಣ ಇದೆ ಎಂದು ಪ್ರೇಕ್ಷಕರು ಆರೋಪಿಸಿದ್ದರು. ಈ ಸಿನಿಮಾದ ನಿರ್ದೇಶಕ ಓಂ ರಾವತ್​ ಮತ್ತು ಬರಹಗಾರ ಮನೋಜ್​ ಮುಂಥಶೀರ್​ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್​ ಮಾಡಿದ್ದರು.

ಇದನ್ನೂ ಓದಿ: Year Ender 2023: ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳು ಇವರು..

‘ಆಪನ್​ಹೈಮರ್​’

ಹಿಂದಿಗೂ ಡಬ್​ ಆಗಿ ಬಿಡುಗಡೆಯಾದ ಇಂಗ್ಲಿಷ್​ನ ಆಪನ್​ಹೈಮರ್​ ಸಿನಿಮಾದಲ್ಲಿ ಭಗವದ್ಗೀತೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಎದುರಾಗಿತ್ತು. ಈ ಸಿನಿಮಾದಲ್ಲಿನ ಬೆಡ್​ರೂಮ್​ ದೃಶ್ಯದಲ್ಲಿ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುತ್ತಾನೆ. ಅದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಆಗಿದೆ ಎಂದು ಕೆಲವರು ತಕರಾರು ತೆಗೆದಿದ್ದರು. ಇಂಥ ದೃಶ್ಯಕ್ಕೆ ಒಪ್ಪಿಗೆ ನೀಡಿದ ಸೆನ್ಸಾರ್​ ಮಂಡಳಿ ವಿರುದ್ಧ ನೆಟ್ಟಿಗರು ಗರಂ ಆಗಿದ್ದರು.

‘ಒಎಂಜಿ 2’

ಅಕ್ಷಯ್​ ಕುಮಾರ್​, ಪಂಕಜ್​ ತ್ರಿಪಾಠಿ ನಟಿಸಿದ ‘ಒಎಂಜಿ 2’ ಸಿನಿಮಾದಲ್ಲಿ ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕಥಾಹಂದರ ಇದೆ. ಇದರಲ್ಲಿನ ಕೆಲವು ದೃಶ್ಯಗಳಿಂದ ಜನರ ಭಾವನೆಗೆ ಧಕ್ಕೆ ಆಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸೆನ್ಸಾರ್​ ಮಂಡಳಿ ತಕರಾರು ತೆಗೆದಿತ್ತು. ‘ಎ’ ಪ್ರಮಾಣಪತ್ರ ನೀಡಿದ್ದೂ ಅಲ್ಲದೇ, 27 ಕಡೆಗಳಲ್ಲಿ ಕತ್ತರಿ ಹಾಕಲಾಗಿತ್ತು. ಅಕ್ಷಯ್​ ಕುಮಾರ್​ ಅವರ ಪಾತ್ರಕ್ಕೂ ಸ್ವಲ್ಪ ಬದಲಾವಣೆ ಮಾಡಲಾಯಿತು.

ಡೀಪ್​ಫೇಕ್​ ಕಾಟ

ರಶ್ಮಿಕಾ ಮಂದಣ್ಣ ಅವರ ಡೀಪ್​ಫೇಕ್​ ವಿಡಿಯೋದಿಂದ ಸಾಕಷ್ಟು ವಿವಾದ ಸೃಷ್ಟಿ ಆಗಿತ್ತು. ಬೇರೆ ಯುವತಿಯ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಎಡಿಟ್​ ಮಾಡಿ ಕಿಡಿಗೇಡಿಗಳು ವೈರಲ್​ ಮಾಡಿದ್ದರು. ಕಾಜೋಲ್​, ಆಲಿಯಾ ಭಟ್​, ತಮನ್ನಾ ಭಾಟಿಯಾ ಮುಂತಾದ ನಟಿಯರಿಗೂ ಡೀಪ್​ಫೇಕ್​ ಕಾಟ ಎದುರಾಯಿತು. ಇದನ್ನು ಅನೇಕ ಸೆಲೆಬ್ರಿಟಿಗಳು ವಿರೋಧಿಸಿದರು.

ಇದನ್ನೂ ಓದಿ: Year Ender 2023: ಹೀನಾಯವಾಗಿ ಮುಗ್ಗರಿಸಿದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳು..  

ಅಕ್ಷಯ್​ ಕುಮಾರ್​​ ಜಾಹೀರಾತು

ನಟ ಅಕ್ಷಯ್​ ಕುಮಾರ್​​ ಅವರು ಕಾಣಿಸಿಕೊಂಡ ಗುಟ್ಕಾ ಜಾಹೀರಾತು ಈ ವರ್ಷವೂ ಪ್ರಸಾರ ಕಂಡಿದೆ. ಅದರಿಂದ ವಿವಾದ ಸೃಷ್ಟಿ ಆಯಿತು. ಇನ್ಮುಂದೆ ಇಂಥ ಜಾಹೀರಾತು ಮಾಡಲ್ಲ ಎಂದು ಅಕ್ಷಯ್​ ಕುಮಾರ್​ ಈ ಮೊದಲೇ ಹೇಳಿದ್ದರು. ಹಾಗಿದ್ದರೂ ಕೂಡ 2023ರಲ್ಲಿ ಮತ್ತೆ ಜಾಹೀರಾತು ಬಿತ್ತರ ಆಗಿದ್ದಕ್ಕೆ ಅನೇಕರು ಬೇಸರ ವ್ಯಕ್ತಪಡಿಸಿದ್ದರು. 2021ರಲ್ಲಿ ಅಕ್ಷಯ್​ ಕುಮಾರ್​ ಮಾಡಿಕೊಂಡಿದ್ದ ಒಪ್ಪಂದದ ವಾಯಿದೆ ಈ ವರ್ಷದವರೆಗೂ ಮುಂದುವರಿದಿತ್ತು. ಹಾಗಾಗಿ ಈ ಜಾಹೀರಾತು ಪ್ರಸಾರ ಆಯಿತು.

ಕಾಫಿ ವಿತ್​ ಕರಣ್​

ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ದಂಪತಿ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿದ್ದವು. ಮದುವೆಗೂ ಮುನ್ನ ರಣವೀರ್​ ಸಿಂಗ್​ ಜೊತೆ ಡೇಟಿಂಗ್​ ಮಾಡುವಾಗಲೂ ಬೇರೆ ಪುರುಷರ ಜೊತೆಗೂ ಸಂಪರ್ಕ ಹೊಂದಿದ್ದೆ ಎಂದು ದೀಪಿಕಾ ಪಡುಕೋಣೆ ಒಪ್ಪಿಕೊಂಡಿದ್ದಕ್ಕೆ ನೆಟ್ಟಿಗರು ಟ್ರೋಲ್​ ಮಾಡಿದರು. ಟ್ರೋಲ್​ ಮಾಡುವವರಿಗೆ ಕರಣ್​ ಜೋಹರ್​ ಮಿಡಲ್​ ಫಿಂಗರ್​ ತೋರಿಸಿದರು.

ಸಲ್ಮಾನ್​ ಖಾನ್​ ಡ್ರೆಸ್​ ಕೋಡ್​

ಸಲ್ಮಾನ್​ ಖಾನ್​ ಅವರು ತಮ್ಮ ಸಿನಿಮಾದ ಸೆಟ್​ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಡ್ರೆಸ್​ ಕೋಡ್​ ಜಾರಿ ಮಾಡಿದ್ದಾರೆ ಎಂದು ನಟಿ ಪಲಕ್​ ತಿವಾರಿ ಹೇಳಿದ್ದು ವಿವಾದಕ್ಕೆ ಕಾರಣ ಆಗಿತ್ತು. ನಂತರ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ನಟಿ ಸಮಜಾಯಿಷಿ ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

ಇದನ್ನೂ ಓದಿ: Kiara Advani: 2023ರಲ್ಲಿ ಅತಿ ಹೆಚ್ಚು ಸರ್ಚ್​ ಆದ ಸೆಲೆಬ್ರಿಟಿ: ನಟಿ ಕಿಯಾರಾ ಅಡ್ವಾಣಿಗೆ ಮೊದಲ ಸ್ಥಾನ

ನಾನಾ ಪಾಟೇಕರ್​ ಕಪಾಳಮೋಕ್ಷ

ಸಿನಿಮಾದ ಶೂಟಿಂಗ್​ ಸಂದರ್ಭದಲ್ಲಿ ಸೆಲ್ಫಿ ಕೇಳಲು ಬಂದ ಅಭಿಮಾನಿಗೆ ಹಿರಿಯ ನಟ ನಾನಾ ಪಾಟೇಕರ್​ ಅವರು ಕಪಾಳಮೋಕ್ಷ ಮಾಡಿದ ವಿಡಿಯೋ ವೈರಲ್​ ಆಯಿತು. ಆದರೆ ಇದು ಸಿನಿಮಾ ಚಿತ್ರೀಕರಣದ ಒಂದು ದೃಶ್ಯ ಎಂದು ನಾನಾ ಪಾಟೇಕರ್​ ಸ್ಪಷ್ಟನೆ ನೀಡಿದರು. ಹಾಗಿದ್ದರೂ ಕೂಡ ಆ ಯುವಕನಿಗೆ ವಿಡಿಯೋ ಮೂಲಕ ಅವರು ಕ್ಷಮೆ ಕೇಳಿದರು.

‘ಅನಿಮಲ್​’ ಚಿತ್ರಕ್ಕೆ ವಿರೋಧ

ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್​’ ಸಿನಿಮಾದಲ್ಲಿ ಅನೇಕ ಆಕ್ಷೇಪಾರ್ಹ ವಿಷಯ ಇದೆ ಎಂದು ವಿಮರ್ಶಕರು ಟೀಕಿಸಿದರು. ಮಹಿಳೆಯರನ್ನು ಅವಹೇಳನ ಮಾಡುವಂತಹ ಸಂಭಾಷಣೆ ಮತ್ತು ದೃಶ್ಯಗಳು ಇವೆ ಎಂದು ಖಂಡನೆ ವ್ಯಕ್ತವಾಯಿತು. ಹಿಂಸೆಯನ್ನು ವೈಭವೀಕರಿಸಿದ ಕಾರಣದಿಂದಲೂ ಈ ಸಿನಿಮಾ ವಿವಾದಕ್ಕೆ ಕಾರಣವಾಯಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:21 pm, Wed, 27 December 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ