AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2023: ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳು ಇವರು..

ಈ ವರ್ಷ ಅನೇಕ ಸೆಲೆಬ್ರಿಟಿಗಳು ಮದುವೆ ಆಗಿದ್ದಾರೆ. ವಾಸುಕಿ ವೈಭವ್, ಹರಿಪ್ರಿಯಾ, ಹರ್ಷಿಕಾ ಪೂಣಚ್ಚ ಸೇರಿ ಅನೇಕ ಸೆಲೆಬ್ರಿಟಿಗಳು ಈ ವರ್ಷ ಮದುವೆ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

Year Ender 2023: ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳು ಇವರು..
ಈ ವರ್ಷ ಹಸೆಮಣೆ ಏರಿದ ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿಗಳು ಇವರು..
ರಾಜೇಶ್ ದುಗ್ಗುಮನೆ
|

Updated on:Dec 27, 2023 | 1:12 PM

Share

2023ನೇ ವರ್ಷ ಪೂರ್ಣಗೊಳ್ಳಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಚಿತ್ರರಂಗದಲ್ಲಿ ಸಾಕಷ್ಟು ಬೆಳವಣಿಗೆ ನಡೆದಿದೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಹೊಸ ಬದುಕು ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದ (Kannada Film Industry) ಅನೇಕರು ಮದುವೆ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ

ಕನ್ನಡ ಚಿತ್ರರಂಗದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಆಗಸ್ಟ್ ತಿಂಗಳಲ್ಲಿ ಮದುವೆ ಆದರು. ಇಬ್ಬರೂ ಬಹುಕಾಲದಿಂದ ಪ್ರೀತಿಸುತ್ತಿದ್ದರು. ಚಿತ್ರರಂಗದ ಅನೇಕ ಗಣ್ಯರು ಕೊಡಗಿಗೆ ತೆರಳಿ ಈ ಸೆಲೆಬ್ರಿಟಿ ವಿವಾಹದಲ್ಲಿ ಭಾಗಿ ಆಗಿದ್ದರು. ಅದ್ದೂರಿಯಾಗಿ ಮದುವೆ ಆಗದೆ ಸಿಂಪಲ್ ಆಗಿ ಈ ಜೋಡಿ ಹಸೆಮಣೆ ಏರಿತ್ತು. 2012ರಿಂದಲೂ ಹರ್ಷಿಕಾ ಪೂಣಚ್ಚ ಮತ್ತು ಭುವನ್​ ಪೊನ್ನಣ್ಣ ಅವರು ಪ್ರೀತಿಸುತ್ತಿದ್ದರು.

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ

ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಈ ವರ್ಷ ಮದುವೆ ಆಗಿದ್ದಾರೆ. ಜನವರಿ 6ರಂದು ಈ ದಂಪತಿ ಮದುವೆ ಆಗಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿ ಸಪ್ತಪದಿ ತುಳಿದಿತ್ತು. ಇಲ್ಲಿ ವಿವಾಹ ನೆರವೇರಬೇಕು ಎಂಬುದು ವಸಿಷ್ಠ ಸಿಂಹ ಅವರ ಆಸೆ ಆಗಿತ್ತು. ಅದರಂತೆ ಈ ವಿವಾಹ ನಡೆದಿತ್ತು.

ಪೂಜಾ ಗಾಂಧಿ ಹಾಗೂ ವಿಜಯ್

‘ಮುಂಗಾರು ಮಳೆ’ ಹುಡುಗಿ ಪೂಜಾ ಗಾಂಧಿ ಹಾಗೂ ಉದ್ಯಮಿ ವಿಜಯ್ ಅವರು ಇತ್ತೀಚೆಗೆ ಮದುವೆ ಆದರು. ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಇವರು ಮದುವೆ ಆದರು. ಮದುವೆ ಆದ ಬಳಿಕ ಇವರು ಕವಿಶೈಲಕ್ಕೆ ಭೇಟಿ ನೀಡಿದ್ದರು. ಪೂಜಾ ಗಾಂಧಿ ಕನ್ನಡ ಕಲಿಯುವ ಪ್ರಯತ್ನದಲ್ಲಿದ್ದಾರೆ.

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ಅವರು ಈ ವರ್ಷ ಮದುವೆ ಆದರು. ಜೂನ್ ತಿಂಗಳಲ್ಲಿ ಇವರ ವಿವಾಹ ಅದ್ದೂರಿಯಾಗಿ ನಡೆಯಿತು. ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಿ ಹಾಕಿದ್ದರು. ಯಶ್, ಸುದೀಪ್ ಮೊದಲಾದ ಸ್ಟಾರ್ ನಟರು ಆಗಮಿಸಿ ನವ ದಂಪತಿಗೆ ಶುಭಕೋರಿದರು.

ರಿಷಿಕಾ ಶರ್ಮಾ ಹಾಗೂ ನಿಹಾಲ್

ಕನ್ನಡ ಚಿತ್ರರಂಗದಲ್ಲಿ ಮಹಿಳಾ ನಿರ್ದೇಶಕಿಯರು ಕಡಿಮೆ. ಈ ಸಾಲಿನಲ್ಲಿ ರಿಷಿಕಾ ಶರ್ಮಾ ಇದ್ದಾರೆ. ಅವರು ನಟ ನಿಹಾಲ್ ಜೊತೆ ಮದುವೆ ಆಗಿದ್ದಾರೆ. ಇಬ್ಬರೂ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ.

ನಟಿ ಶುಭ್ರ ಅಯ್ಯಪ್ಪ ಹಾಗೂ ವಿಶಾಲ್ ಶಿವಪ್ಪ

ಈ ವರ್ಷ ನಟಿ ಶುಭ್ರ ಅಯ್ಯಪ್ಪ ಅವರು ಉದ್ಯಮಿ ವಿಶಾಲ್ ಶಿವಪ್ಪ ಅವರನ್ನು ಮದುವೆ ಆಗಿದ್ದಾರೆ. ಹಲವು ವರ್ಷಗಳ ಕಾಲ ಶುಭ್ರ ಹಾಗೂ ವಿಶಾಲ್ ಪ್ರೀತಿಸುತ್ತಿದ್ದರು.

ವಾಸುಕಿ ವೈಭವ್ ಹಾಗೂ ಬೃಂದಾ

ಸಂಗೀತ ನಿರ್ದೇಶಕನಾಗಿ, ನಟನಾಗಿ ವಾಸುಕಿ ವೈಭವ್ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಬೃಂದಾ ಜೊತೆ ಮದುವೆ ಆಗಿದ್ದಾರೆ. ಬೆಂಗಳೂರಿನಲ್ಲಿ ಸಿಂಪಲ್ ಆಗಿ ಇವರ ಮದವೆ ಕಾರ್ಯ ನಡೆದಿದೆ.

Published On - 1:11 pm, Wed, 27 December 23

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್