Year Ender 2024
2024 ಮುಗಿಯುತ್ತ ಬಂತು. ಮುಂದಿನ ವರ್ಷಕ್ಕಾಗಿ ಕನಸು ಕಾಣುವ ತವಕ ಎಲ್ಲರದ್ದು ಅಲ್ಲವೇ? ಇದೇ ಹೊತ್ತಲ್ಲಿ, 2024 ರ ಪ್ರಾರಂಭದಲ್ಲಿ ನಾವು ಎಲ್ಲಿದ್ದೆವು? ಈ ವರ್ಷದಲ್ಲಿ ಏನೇನು ಮಾಡಿದ್ವಿ. ಇವೆಲ್ಲ ನೋಡುವ ಕ್ಷಣ ಬಂದೇ ಬಿಟ್ಟಿದೆ. ಒಮ್ಮೆ ಹಿಂದೆ ನೋಡಿದರೆ ಮುಂದೆ ನಡೆಯಲು ಹುಮ್ಮಸ್ಸು ಬರುವುದು. ವಿವಿಧ ಕ್ಷೇತ್ರಗಳಲ್ಲಿ ಭಾರತ ಮಾಡಿದ ಸಾಧನೆಯ ಪುನರಾವಲೋಕನ ಮಾಡುವ ಕ್ಷಣ ಇದು. ಹಾಗೂ ಭಾರತೀಯರು ಬೇರೆ ಬೇರೆ ಕ್ಷೇತ್ರಗಳಲ್ಲಿ ಮಾಡಿರುವ ಅದ್ವಿತೀಯ ಸಾಧನೆಯ ಸಿಂಹಾವಲೋಕನ ಮಾಡುವ ಕೂಡ ಪ್ರಯತ್ನ ಇಲ್ಲಿದೆ.