Sign In

By signing in or creating an account, you agree with Associated Broadcasting Company's Terms & Conditions and Privacy Policy.

Year Ender 2023: ಹೀನಾಯವಾಗಿ ಮುಗ್ಗರಿಸಿದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳು..  

ಕೆಲವು ಸಿನಿಮಾಗಳು ರಿಲೀಸ್ ಆದ ಬಳಿಕ ಅಂದುಕೊಂಡಷ್ಟು ಕಲೆಕ್ಷನ್ ಮಾಡಲು ವಿಫಲವಾಗುತ್ತವೆ. ಈ ವರ್ಷ ರಿಲೀಸ್ ಆಗಿ ನೆಲಕಚ್ಚಿದ ಹಲವು ಬಹುನಿರೀಕ್ಷಿತ ಸಿನಿಮಾಗಳು ಇವೆ. ಆ ಪೈಕಿ ಕೆಲವು ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

Year Ender 2023: ಹೀನಾಯವಾಗಿ ಮುಗ್ಗರಿಸಿದ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳು..  
ಹೀನಾಯವಾಗಿ ಮುಗ್ಗರಿಸಿತು ಈ ವರ್ಷದ ಈ ಬಹುನಿರೀಕ್ಷಿತ ಚಿತ್ರಗಳು..  
Follow us
ರಾಜೇಶ್ ದುಗ್ಗುಮನೆ
|

Updated on:Dec 13, 2023 | 12:55 PM

ಒಂದು ಸಿನಿಮಾ ಬಗ್ಗೆ ನಿರೀಕ್ಷೆ ಹುಟ್ಟಲು ಹಲವು ಕಾರಣಗಳು ಇರುತ್ತವೆ. ಚಿತ್ರದ ಪಾತ್ರವರ್ಗ, ತಾಂತ್ರಿಕವರ್ಗ, ಸಿನಿಮಾದ ಪೋಸ್ಟರ್, ಟೀಸರ್, ಟ್ರೇಲರ್ (Trailer), ಸಾಂಗ್.. ಹೀಗೆ ಹಲವು ವಿಚಾರಗಳು ಪ್ರೇಕ್ಷಕರ ಮೇಲೆ ಪ್ರಭಾವ ಬೀರುತ್ತವೆ. ಆದರೆ, ಕೆಲವು ಸಿನಿಮಾಗಳು ರಿಲೀಸ್ ಆದ ಬಳಿಕ ಅಂದುಕೊಂಡಷ್ಟು ಕಲೆಕ್ಷನ್ ಮಾಡಲು ವಿಫಲವಾಗುತ್ತವೆ. ಈ ವರ್ಷ ರಿಲೀಸ್ ಆಗಿ ನೆಲಕಚ್ಚಿದ ಹಲವು ಬಹುನಿರೀಕ್ಷಿತ ಸಿನಿಮಾಗಳು ಇವೆ. ಆ ಪೈಕಿ ಕೆಲವು ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

‘ಆದಿಪುರುಷ್’

ಈ ವರ್ಷ ರಿಲೀಸ್ ಆದ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ‘ಆದಿಪುರುಷ್’ ಚಿತ್ರಕ್ಕೂ ಸ್ಥಾನ ಇತ್ತು. ಆದರೆ, ಸಿನಿಮ ಯಾವಾಗ ರಿಲೀಸ್ ಆಯಿತೋ ಜನರು ಚಿತ್ರವನ್ನು ನೋಡಿ ಬಾಯಿಗೆ ಬಂದಂತೆ ಬೈದರು. ರಾಮಾಯಣದ ಕಥೆಯನ್ನು ತಿರುಚಲಾಗಿದೆ ಎಂದು ಅನೇಕರು ಆರೋಪಿಸಿದರು. ಈ ಚಿತ್ರದಿಂದ ಪ್ರಭಾಸ್ ಅವರು ದೊಡ್ಡ ಸೋಲು ಕಂಡರು. ಈ ಚಿತ್ರಕ್ಕೆ ಓಂ ರಾವತ್ ನಿರ್ದೇಶನ ಮಾಡಿದ್ದರು.

ಸೆಲ್ಫೀ

ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಬಾಲಿವುಡ್​ನಲ್ಲಿ ಅಂದುಕೊಂಡಷ್ಟು ಗಳಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅವರ ನಟನೆಯ ‘ಸೆಲ್ಫಿ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮಲಗಿತು. ಇದರಿಂದ ಅವರಿಗೆ ಹಿನ್ನಡೆ ಆಯಿತು.

ಮಿಷನ್ ರಾಣಿಗಂಜ್

ಅಕ್ಷಯ್ ಕುಮಾರ್ ನಟನೆಯ ಮತ್ತೊಂದು ಸಿನಿಮಾ ಈ ವರ್ಷ ಸೋತಿದೆ. ಅದು ‘ಮಿಷನ್ ರಾಣಿಗಂಜ್’. ನೈಜ ಘಟನೆ ಆಧರಿಸಿ ‘ಮಿಷನ್ ರಾಣಿಗಂಜ್’ ಸಿನಿಮಾ ಸಿದ್ಧವಾಗಿತ್ತು. ಜನರು ಚಿತ್ರವನ್ನು ಇಷ್ಟಪಟ್ಟಿಲ್ಲ. ಈ ಸಿನಿಮಾ ಸಾಧಾರಣ ಗಳಿಕೆ ಮಾಡಿದೆ.

‘ಶೆಹಜಾದ’

ದಕ್ಷಿಣ ಭಾರತದ ಚಿತ್ರಗಳನ್ನು ಬಾಲಿವುಡ್​ಗೆ ರಿಮೇಕ್ ಮಾಡುವ ಕೆಲಸ ಇತ್ತೀಚೆಗೆ ಜೋರಾಗಿದೆ. ‘ಅಲಾ ವೈಕುಂಟಪುರಮಲೋ’ ಚಿತ್ರವನ್ನು ಹಿಂದಿಗೆ ‘ಶೆಹಜಾದ’ ಎಂದು ರಿಮೇಕ್ ಮಾಡಲಾಯಿತು. ಆದರೆ, ಈ ಚಿತ್ರ ಸೋಲು ಕಂಡಿತು.

ಚಂದ್ರಮುಖಿ 2

‘ಚಂದ್ರಮುಖಿ’ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದರು. ಇದರ ಸೀಕ್ವೆಲ್​ ಈ ವರ್ಷ ರಿಲೀಸ್ ಆಯಿತು. ಆದರೆ, ಸಿನಿಮಾ ಸೋಲು ಕಂಡಿದೆ. ಈ ಚಿತ್ರದ ಮೇಲೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾಗೆ ಹಿನ್ನಡೆ ಆಯಿತು.

ಶಾಕುಂತಲಂ

ಸಮಂತಾ ನಟನೆಯ ‘ಶಾಕುಂತಲಂ’ ಸಿನಿಮಾ ಈ ವರ್ಷ ರಿಲೀಸ್ ಆಯಿತು. ಸಮಂತಾ ವೃತ್ತಿ ಬದುಕಿಗೆ ಈ ಚಿತ್ರ ಮೈಲೇಜ್ ನೀಡಲಿದೆ ಎಂದು ಹೇಳಾಗಿತ್ತು. ಆದರೆ, ಸಿನಿಮಾ ಹೀನಾಯ ಸೋಲು ಕಂಡಿತು. ಈ ಚಿತ್ರವನ್ನು ಜನರು ಇಷ್ಟಪಟ್ಟಿಲ್ಲ.

ಇದನ್ನೂ ಓದಿ: ಅಖಿಲ್​ಗೆ ಕೈಕೊಟ್ಟು ನಿಖಿಲ್ ಕೈಹಿಡಿದ ರಾಮ್ ಚರಣ್, ಅಕ್ಕಿನೇನಿ ಅಭಿಮಾನಿಗಳ ವಿರೋಧ

ಏಜೆಂಟ್

ಅಖಿಲ್ ಅಕ್ಕಿನೇನಿ ನಟನೆಯ ‘ಏಜೆಂಟ್’ ಸಿನಿಮಾ ಟೀಸರ್ ಹಾಗೂ ಟ್ರೇಲರ್ ಮೂಲಕ ಗಮನ ಸೆಳೆದಿತ್ತು. ಆದರೆ, ಸಿನಿಮಾ ನೋಡಿದವರು ಚಿತ್ರವನ್ನು ತೆಗಳಿದರು. ಸಿನಿಮಾ ತಂಡದವರು ಕೂಡ ಪ್ರೇಕ್ಷಕರ ಬಳಿ ಕ್ಷಮೆ ಕೇಳಿದರು.

ಕಸ್ಟಡಿ

ನಾಗ ಚೈತನ್ಯ ನಟನೆಯ ‘ಕಸ್ಟಡಿ’ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ಹೋಪ್ ಹೊಂದಿದ್ದರು. ಈ ಚಿತ್ರದಿಂದ ಅವರು ಗೆಲ್ಲಬಹುದು ಎಂಬುದು ಫ್ಯಾನ್ಸ್ ನಿರೀಕ್ಷೆ ಆಗಿತ್ತು. ಆದರೆ, ನಿರೀಕ್ಷೆ ಸುಳ್ಳಾಯಿತು.

ಭೋಲಾ ಶಂಕರ್

ಚಿರಂಜೀವಿ ಅವರು ಈ ವರ್ಷ ‘ಭೋಲಾ ಶಂಕರ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದರು. ಈ ಚಿತ್ರ ಹೀನಾಯ ಸೋಲು ಕಂಡಿತು. ಈ ಸಿನಿಮಾ ಅವರ ಅಭಿಮಾನಿಗಳನ್ನು ನಿರಾಸೆಗೊಳಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:53 pm, Wed, 13 December 23

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ