AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಖಿಲ್​ಗೆ ಕೈಕೊಟ್ಟು ನಿಖಿಲ್ ಕೈಹಿಡಿದ ರಾಮ್ ಚರಣ್, ಅಕ್ಕಿನೇನಿ ಅಭಿಮಾನಿಗಳ ವಿರೋಧ

Ram Charan: ನಟ ರಾಮ್ ಚರಣ್ ತಮ್ಮ ವಿ ಮೆಗಾ ಪಿಕ್ಚರ್ಸ್ ವತಿಯಿಂದ ದಿ ಇಂಡಿಯಾ ಹೌಸ್ ಸಿನಿಮಾ ಘೋಷಿಸಿದ್ದಾರೆ. ಸಿನಿಮಾದ ನಾಯಕ ನಿಖಿಲ್, ಆದರೆ ಅಖಿಲ್ ಅಕ್ಕಿನೇನಿ ಅಭಿಮಾನಿಗಳು ರಾಮ್ ಚರಣ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಅಖಿಲ್​ಗೆ ಕೈಕೊಟ್ಟು ನಿಖಿಲ್ ಕೈಹಿಡಿದ ರಾಮ್ ಚರಣ್, ಅಕ್ಕಿನೇನಿ ಅಭಿಮಾನಿಗಳ ವಿರೋಧ
ದಿ ಇಂಡಿಯಾ ಹೌಸ್
ಮಂಜುನಾಥ ಸಿ.
|

Updated on: Jun 01, 2023 | 10:30 PM

Share

ಆರ್​ಆರ್​ಆರ್ (RRR) ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ನಟ ರಾಮ್ ಚರಣ್ ತೇಜ (Ram Charan), ಇತ್ತೀಚೆಗೆ ವಿ ಮೆಗಾ ಪಿಕ್ಚರ್ಸ್ (V Mega Pictures) ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದು ತಮ್ಮ ಮೊದಲ ಸಿನಿಮಾ ಆಗಿ ಸಾರ್ವಕರ್ ಜೀವನ ಕತೆಯನ್ನು ತೆರೆಗೆ ತರಲು ಸಜ್ಜಾಗಿದೆ. ಸಾರ್ವಕರ್ ಜೀವನ ಆಧರಿತ ದಿ ಇಂಡಿಯಾ ಹೌಸ್ (The India House) ಹೆಸರಿನ ಸಿನಿಮಾವನ್ನು ರಾಮ್ ಚರಣ್ ಘೋಷಿಸಿದ್ದು ಸಿನಿಮಾದಲ್ಲಿ ಸಾರ್ವಕರ್ ಪಾತ್ರದಲ್ಲಿ ತೆಲುಗಿನ ನಿಖಿಲ್ ಸಿದ್ಧಾರ್ಥ್ ನಟಿಸಲಿದ್ದಾರೆ. ಆದರೆ ಸಿನಿಮಾ ಘೋಷಣೆಯಾದ ಬಳಿಕ ಅಕ್ಕಿನೇನಿ ಕುಟುಂಬ ಅಭಿಮಾನಿಗಳು ರಾಮ್ ಚರಣ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ದಿ ಇಂಡಿಯಾ ಹೌಸ್ ಸಿನಿಮಾಕ್ಕೆ ನಾಯಕನಾಗಿ ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ಆಯ್ಕೆ ಆಗಿದ್ದರಂತೆ. ಆದರೆ ಆ ಬಳಿಕ ಅವರ ಬದಲಿಗೆ ನಿಖಿಲ್ ಸಿದ್ಧಾರ್ಥ್​ಗೆ ಅವಕಾಶ ನೀಡಲಾಗಿದೆ. ಇದು ಅಕ್ಕಿನೇನಿ ಅಭಿಮಾನಿಗಳಿಗೆ ಬೇಸರ ತಂದಿದೆ. ಅಖಿಲ್ ಅವರೇ ದಿ ಇಂಡಿಯಾ ಹೌಸ್ ಸಿನಿಮಾದ ಹೀರೋ ಎಂಬ ಪುಕಾರು ಕಳೆದ ತಿಂಗಳೇ ಹರಿದಾಡಿತ್ತು. ಅದಾದ ಕೆಲ ದಿನಗಳ ಹಿಂದೆ ಅಖಿಲ್ ಹುಟ್ಟುಹಬ್ಬಕ್ಕೆ ರಾಮ್ ಚರಣ್, ತಮ್ಮ ಹಾಗೂ ಅಖಿಲ್​ ಜೊತೆಗಿನ ಚಿತ್ರ ಹಂಚಿಕೊಂಡು ವಿಶ್ ಮಾಡಿದಾಗಲಂತೂ ಅಖಿಲ್ ಅವರೇ ರಾಮ್ ನಿರ್ಮಾಣದ ಸಿನಿಮಾ ಹಿರೋ ಎಂದು ಅಕ್ಕಿನೇನಿ ಅಭಿಮಾನಿ ಖುಷಿ ವ್ಯಕ್ತಪಡಿಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ನಾಯಕ ನಟ ಬದಲಾಗಿದ್ದು ಅಖಿಲ್ ಬದಲಿಗೆ ನಿಖಿಲ್ ನಾಯಕರಾಗಿದ್ದಾರೆ.

ರಾಮ್ ಚರಣ್ ತಮ್ಮ ಲಾಭಕ್ಕಾಗಿ ಅಖಿಲ್ ಬದಲಿಗೆ ನಿಖಿಲ್​ಗೆ ಅವಕಾಶ ನೀಡಿದ್ದಾರೆ ಎನ್ನಲಾಗುತ್ತಿದೆ. ನಿಖಿಲ್​ ನಟನೆಯ ಕಾರ್ತಿಕೇಯ 2 ಸಿನಿಮಾ ಉತ್ತರ ಭಾರತದ ಭಾಗಗಳಲ್ಲಿ ಅದ್ಭುತ ಪ್ರದರ್ಶನ ಕಂಡಿದೆ. ಅದಾದ ಬಳಿಕ ನಿಖಿಲ್ ಇತ್ತೀಚೆಗೆ ನಟಿಸಿರುವ ಸ್ಪೈ ಸಿನಿಮಾ ಸಹ ಸುಭಾಷ್ ಚಂದ್ರ ಭೋಸ್ ಸಾವಿನ ಕುರಿತ ಸಾಕ್ಷ್ಯಗಳ ಕುರಿತ ಕತೆಯನ್ನು ಒಳಗೊಂಡಿದೆ. ನಿಖಿಲ್, ಬಿಜೆಪಿ ಬೆಂಬಲಿಗರು ಮೆಚ್ಚುವ ರೀತಿಯ ಕತೆಗಳನ್ನೇ ಆಯ್ದುಕೊಳ್ಳುತ್ತಾ ಬಂದಿದ್ದಾರೆ. ಅದೇ ಕಾರಣದಿಂದ ರಾಮ್ ಚರಣ್ ಬಿಜೆಪಿಗರು ದೇಶಪ್ರೇಮಿಯಾಗಿ ಮೆರೆಸುತ್ತಿರುವ ಸಾರ್ವಕರ್ ಕುರಿತ ಸಿನಿಮಾಕ್ಕೆ ನಿಖಿಲ್ ಅವರನ್ನೇ ನಾಯಕನನ್ನಾಗಿ ಆರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು, ದಿ ಇಂಡಿಯಾ ಹೌಸ್ ಸಿನಿಮಾ ಘೋಷಣೆ ಆದಾಗಿನಿಂದಲೂ ವಿವಾದಗಳು ಸುತ್ತುವರೆದಿವೆ. ಸಾರ್ವಕರ್ ಹೊರತಾಗಿ ಬೇರೆ ಹಲವು ಸ್ವಾತಂತ್ರ್ಯ ಹೋರಾಟಗಾರಿರುವಾಗ ವಿವಾದಿತ ಸಾವರ್ಕರ್ ಅವರ ಜೀವನವನ್ನೇ ಆಧರಿಸಿದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದೇಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

ದಿ ಇಂಡಿಯಾ ಹೌಸ್ ಸಿನಿಮಾವನ್ನು ರಾಮ್ ಚರಣ್ ಅವರು ‘ದಿ ಕಶ್ಮೀರ್ ಫೈಲ್ಸ್’ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಜೊತೆಗೂಡಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ನಿರ್ದೇಶನ ಮಾಡುತ್ತಿರುವುದು ರಾಮ್ ವಂಶಿ ಕೃಷ್ಣ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ವಿಧಾನ ಪರಿಷತ್ ಕದನದಲ್ಲಿ ಜೆಡಿಎಸ್​ಗೆ ಡಬಲ್ ಟೆನ್ಷನ್!
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಕೆಆರ್​ಎಸ್ ಜಲಮಟ್ಟ 81 ಅಡಿಗೆ ಕುಸಿತ, ತಮಿಳುನಾಡಿಗೆ ನೀರು ಬಿಡುಗಡೆ ಸವಾಲು
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಒಮಾನ್​ನಲ್ಲಿ ಟ್ಯಾಂಕರ್ ದಾಳಿ, ಅಮೆರಿಕ ರಾಜತಾಂತ್ರಿಕರಿಗೆ ಭಾರತ ಸಮನ್ಸ್
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಇನ್ನು ಈ ಎಲ್ಲ ದಾಖಲೆ ಕಡ್ಡಾಯ