ರಾಮ್ ಚರಣ್ ನಿರ್ಮಾಣದ ಚಿತ್ರಕ್ಕೆ ಸಂಕಷ್ಟ; ಬರ್ತಿದೆ ಎರಡೆರಡು ವೀರ ಸಾವರ್ಕರ್ ಸಿನಿಮಾ

ವೀರ ಸಾವರ್ಕರ್ ಮೇಲೆ ಒಟ್ಟೊಟ್ಟಿಗೆ ಎರಡೆರಡು ಸಿನಿಮಾ ಘೋಷಣೆ ಆಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಬಿಸ್ನೆಸ್ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ರಾಮ್ ಚರಣ್ ನಿರ್ಮಾಣದ ಚಿತ್ರಕ್ಕೆ ಸಂಕಷ್ಟ; ಬರ್ತಿದೆ ಎರಡೆರಡು ವೀರ ಸಾವರ್ಕರ್ ಸಿನಿಮಾ
ವೀರ ಸಾವರ್ಕರ್
Follow us
ರಾಜೇಶ್ ದುಗ್ಗುಮನೆ
|

Updated on:May 30, 2023 | 11:30 AM

ಒಂದೇ ವಿಷಯ, ವ್ಯಕ್ತಿಗಳನ್ನು ಇಟ್ಟುಕೊಂಡು ಹಲವು ಸಿನಿಮಾಗಳು ಬರೋದು ಹೊಸದೇನು ಅಲ್ಲ. ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ 140ನೇ ಜನ್ಮದಿನ ಆಚರಿಸಲಾಯಿತು. ಈ ವೇಳೆ ರಾಮ್ ಚರಣ್ (Ram Charan) ಅವರು ತಮ್ಮ ನಿರ್ಮಾಣದ ‘ದಿ ಇಂಡಿಯಾ​ ಹೌಸ್’ ಸಿನಿಮಾ ಅನೌನ್ಸ್ ಮಾಡಿದರು. ಅಚ್ಚರಿ ಎಂದರೆ ಇದೇ ವೇಳೆ ಮತ್ತೊಂದು ವೀರ ಸಾವರ್ಕರ್ (Veer Savarkar) ಸಿನಿಮಾ ಘೋಷಣೆ ಆಗಿದೆ. ಹೀಗಾಗಿ, ಒಂದೇ ವ್ಯಕ್ತಿಮೇಲೆ ಒಟ್ಟೊಟ್ಟಿಗೆ ಎರಡು ಸಿನಿಮಾ ಘೋಷಣೆ ಆಗಿದೆ.

ರಾಮ್ ಚರಣ್ ಅವರು ಈಗ ನಟನೆಯ ಜೊತೆಗೆ ಸಿನಿಮಾ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಅವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ವೀರ ಸಾವರ್ಕರ್ 140ನೇ ಜನ್ಮದಿನದ ಪ್ರಯುಕ್ತ ರಾಮ್ ಚರಣ್ ನಿರ್ಮಾಣದ ಹೊಸ ಸಿನಿಮಾ ‘ದಿ ಇಂಡಿಯಾ ಹೌಸ್’ ಘೋಷಣೆ ಆಗಿದೆ. ‘ದಿ ಕಾಶ್ಮಿರ್ ಫೈಲ್ಸ್’ ನಿರ್ಮಾಪಕ ಅಭಿಷೇಕ್​ ಅಗರ್​ವಾಲ್ ನಿರ್ಮಾಣದಲ್ಲಿ ರಾಮ್ ಚರಣ್​ಗೆ ಜೊತೆಯಾಗಿದ್ದಾರೆ. ಈ ಚಿತ್ರಕ್ಕೆ ನಿಖಿಲ್ ಸಿದ್ದಾರ್ಥ್ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದು, ಅನುಪಮ್ ಖೇರ್ ಕೂಡ ಬಣ್ಣ ಹಚ್ಚುತ್ತಿದ್ದಾರೆ.

ಇದರ ಜೊತೆಗೆ ರಣದೀಪ್ ಹೂಡ ಕೂಡ ವೀರ ಸಾವರ್ಕರ್ ಕುರಿತು ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಎಂದು ಶೀರ್ಷಿಕೆ ಇಡಲಾಗಿದೆ. ಅಷ್ಟೇ ಅಲ್ಲ, ಈ ಚಿತ್ರಕ್ಕೆ ‘ಅವರ ಕಥೆಯನ್ನು ಕೊಂದವರು ಯಾರು’ ಎನ್ನುವ ಅಡಿಬರಹವನ್ನೂ ನೀಡಲಾಗಿದೆ.

ಈ ಪೋಸ್ಟರ್​​ನ ರಣದೀಪ್ ಹೂಡ ಹಂಚಿಕೊಂಡಿದ್ದಾರೆ. ‘ಬ್ರಿಟಿಷರ ಸಾಲಿನಲ್ಲಿರೋ ಮೋಸ್ಟ್​ ವಾಂಟೆಂಡ್ ಭಾರತೀಯ. ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಅವರಂತಹ ಕ್ರಾಂತಿಕಾರಿಗಳ ಹಿಂದಿನ ಸ್ಫೂರ್ತಿ. ವೀರ ಸಾವರ್ಕರ್ ಯಾರು? ಅವರ ನಿಜವಾದ ಕಥೆಯನ್ನು ನೋಡಿ’ ಎಂದು ರಣದೀಪ್ ಹೂಡ ಕ್ಯಾಪ್ಶನ್ ನೀಡಿದ್ದಾರೆ. ‘ಸ್ವಾತಂತ್ರ್ಯ ವೀರ ಸಾವರ್ಕರ್​’ ಚಿತ್ರವನ್ನು ರಣದೀಪ್ ಹೂಡ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಅವರು ನಿರ್ಮಾಣದಲ್ಲೂ ಆಸಕ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ವೀರ ಸಾವರ್ಕರ್ ಜೀವನ ಆಧರಿಸಿ ಸಿನಿಮಾ ಘೋಷಿಸಿದ ರಾಮ್ ಚರಣ್; ಶುರುವಾಯ್ತು ಚರ್ಚೆ 

ವೀರ ಸಾವರ್ಕರ್ ಮೇಲೆ ಒಟ್ಟೊಟ್ಟಿಗೆ ಎರಡೆರಡು ಸಿನಿಮಾ ಘೋಷಣೆ ಆಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಎರಡೂ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಬಿಸ್ನೆಸ್ ಮಾಡುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:12 am, Tue, 30 May 23