‘ಕೆಜಿಎಫ್’, ‘ಸಲಾರ್’ ರೀತಿ ಎರಡು ಪಾರ್ಟ್ನಲ್ಲಿ ಬರಲಿದೆ ‘ಗೇಮ್ ಚೇಂಜರ್’ ಸಿನಿಮಾ?
‘ಬಾಹುಬಲಿ 2’ ರಿಲೀಸ್ ಆದ ಬಳಿಕ ಒಂದು ಕಥೆಯನ್ನು ಎರಡು ಪಾರ್ಟ್ನಲ್ಲಿ ಹೇಳುವ ಟ್ರೆಂಡ್ ಜೋರಾಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’, ‘ಕೆಜಿಎಫ್’ ಸೇರಿ ಅನೇಕ ಸಿನಿಮಾಗಳು ಎರಡು ಭಾಗದಲ್ಲಿ ಬಂದಿವೆ. ಈಗ ‘ಗೇಮ್ ಚೇಂಜರ್’ ಸಿನಿಮಾ ಎರಡು ಪಾರ್ಟ್ನಲ್ಲಿ ಬರಲಿದೆ.
ರಾಮ್ ಚರಣ್ (Ram Charan) ನಟನೆಯ, ಎಸ್ ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದ ಶೂಟಿಂಗ್ ಸಾಕಷ್ಟು ವಿಳಂಬ ಆಗುತ್ತಲೇ ಇದೆ. ಈ ಕಾರಣದಿಂದ ಅಭಿಮಾನಿಗಳು ಸಾಕಷ್ಟು ಬೇಸರಗೊಂಡಿದ್ದಾರೆ. ಈಗ ಸಿನಿಮಾ ಬಗ್ಗೆ ಹೊಸ ಸುದ್ದಿ ಒಂದು ಹರಿದಾಡಿದೆ. ಈ ಚಿತ್ರ ಎರಡು ಭಾಗದಲ್ಲಿ ರಿಲೀಸ್ ಆಗಲಿದೆಯಂತೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ.
‘ಆರ್ಆರ್ಆರ್’ ಸೂಪರ್ ಹಿಟ್ ಆದ ಬಳಿಕ ರಾಮ್ ಚರಣ್ ಅವರು ಸಿನಿಮಾ ಆಯ್ಕೆಯಲ್ಲಿ ಆತುರ ತೋರಿಲ್ಲ. ಅವರು ಸಾಕಷ್ಟು ಆಸಕ್ತಿ ವಹಿಸಿ ‘ಗೇಮ್ ಚೇಂಜರ್’ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಇತ್ತೀಚೆಗೆ ಮೈಸೂರಿನಲ್ಲಿ ನಡೆದಿದೆ. ಚಿತ್ರದ ಕಥೆಗೂ ಮೈಸೂರಿಗೂ ಯಾವ ರೀತಿಯ ಕನೆಕ್ಷನ್ ಇದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಈ ಮಧ್ಯೆ ಸಿನಿಮಾ ಬಗ್ಗೆ ಹೊಸ ಸುದ್ದಿ ಹುಟ್ಟಿಕೊಂಡಿದೆ.
‘ಬಾಹುಬಲಿ 2’ ರಿಲೀಸ್ ಆದ ಬಳಿಕ ಒಂದು ಕಥೆಯನ್ನು ಎರಡು ಪಾರ್ಟ್ನಲ್ಲಿ ಹೇಳುವ ಟ್ರೆಂಡ್ ಜೋರಾಗಿದೆ. ‘ಸಪ್ತ ಸಾಗರದಾಚೆ ಎಲ್ಲೋ’, ‘ಕೆಜಿಎಫ್’ ಸೇರಿ ಅನೇಕ ಸಿನಿಮಾಗಳು ಎರಡು ಭಾಗದಲ್ಲಿ ಬಂದಿವೆ. ‘ಪುಷ್ಪ’, ‘ಸಲಾರ್’ ಸಿನಿಮಾಗಳು ಕೂಡ ಎರಡು ಪಾರ್ಟ್ನಲ್ಲಿ ರಿಲೀಸ್ ಆಗಲಿವೆ. ಈಗ ನಿರ್ಮಾಪಕ ದಿಲ್ ರಾಜು ಕೂಡ ಇದೇ ತಂತ್ರ ಉಪಯೋಗಿಸುತ್ತಿದ್ದಾರೆ. ‘ಗೇಮ್ ಚೇಂಜರ್’ ಚಿತ್ರವನ್ನು ಎರಡು ಪಾರ್ಟ್ನಲ್ಲಿ ತರಲು ಅವರು ಮುಂದಾಗಿದ್ದಾರೆ ಎಂದು ವರದಿ ಆಗಿದೆ.
ಶಂಕರ್ ಅವರು ‘ಗೇಮ್ ಚೇಂಜರ್’ ಜೊತೆ ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಎರಡೂ ಸಿನಿಮಾ ಕೆಲಸಗಳನ್ನು ಅವರು ಸಂಭಾಳಿಸಿಕೊಂಡು ಹೋಗಬೇಕಾಗಿದೆ. ಈ ಕಾರಣಕ್ಕೆ ‘ಗೇಮ್ ಚೇಂಜರ್’ ಸಿನಿಮಾ ಕೆಲಸ ವಿಳಂಬ ಆಗುತ್ತಿದೆ.
ಇದನ್ನೂ ಓದಿ: ಚಾಮುಂಡೇಶ್ವರಿ ದರ್ಶನ ಪಡೆದ ರಾಮ್ ಚರಣ್; ಮೈಸೂರಿನಲ್ಲಿ ‘ಗೇಮ್ ಚೇಂಜರ್’ ಚಿತ್ರೀಕರಣ
‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ಗೆ ಜೊತೆಯಾಗಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಎಲೆಕ್ಷನ್ಗೆ ಸಂಬಂಧಿಸಿದ್ದು ಎನ್ನಲಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಐಎಎಸ್ ಅಧಿಕಾರ ಪಾತ್ರ ಮಾಡುತ್ತಿದ್ದಾರಂತೆ. ಈ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ