‘ಟಾಕ್ಸಿಕ್’ ಜೊತೆಗೆ ಚಿತ್ರೀಕರಣಗೊಳ್ಳಲಿದೆ ಯಶ್ರ ಮತ್ತೊಂದು ಸಿನಿಮಾ
Yash movie: ನಟ ಯಶ್ ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಹೆಸರು ಘೋಷಣೆ ಮಾಡಿದ್ದಾರೆ. ಅದರ ಜೊತೆಗೆ ಇನ್ನೊಂದು ಸಿನಿಮಾವನ್ನು ಸಹ ಒಪ್ಪಿಕೊಂಡಿದ್ದು, ಸಿನಿಮಾವನ್ನು ಹಾಲಿವುಡ್ ಸಂಸ್ಥೆಯೊಂದು ನಿರ್ಮಿಸುತ್ತಿದೆ.
ಹಲವು ವರ್ಷ ಕಾದಿದ್ದ ಅಭಿಮಾನಿಗಳಿಗೆ ಇತ್ತೀಚೆಗಷ್ಟೆ ನಟ ಯಶ್ (Yash) ಸಿಹಿ ಸುದ್ದಿ ನೀಡಿದರು. ತಮ್ಮ ಹೊಸ ಸಿನಿಮಾದ ಘೋಷಣೆಯನ್ನು ಯಶ್ ಇತ್ತೀಚೆಗಷ್ಟೆ ಮಾಡಿದ್ದಾರೆ. ಯಶ್, ‘ಕಾಕ್ಸಿಕ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕವನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ವಿಶೇಷವೆಂದರೆ ‘ಟಾಕ್ಸಿಕ್’ ಸಿನಿಮಾದ ಜೊತೆಗೆ ಯಶ್ರ ಮತ್ತೊಂದು ಸಿನಿಮಾದ ಚಿತ್ರೀಕರಣವೂ ಪ್ರಾರಂಭವಾಗುತ್ತಿದೆ.
ಯಶ್, ಬಾಲಿವುಡ್ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ. ಆ ಸಿನಿಮಾದ ಚಿತ್ರೀಕರಣ 2024ರ ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆ. ಬಾಲಿವುಡ್ನ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾಗಿರುವ ನಿತಿನ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ಯಶ್ ನಟಿಸುತ್ತಿದ್ದಾರೆ. ಈ ಸಿನಿಮಾ ಪ್ರೀ ಪ್ರೊಡಕ್ಷನ್ ಬಹುತೇಕ ಮುಗಿದಿದ್ದು ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭವಾಗಲಿದೆ.
ರಾಮಾಯಣ ಕತೆ ಆಧರಿಸಿದ ಸಿನಿಮಾವನ್ನು ನಿತಿಷ್ ತಿವಾರಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ರಣ್ಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಸಾಯಿ ಪಲ್ಲವಿ, ಸೀತಾಮಾತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟ ಯಶ್, ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಕ್ಕಾಗಿ ನಟರ ಲುಕ್ ಟೆಸ್ಟ್, 3ಡಿ ಪರೀಕ್ಷಗಳನ್ನು ಮಾಡಲಾಗಿದೆ. ಈ ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗದಲ್ಲಿ ಯಶ್ರ ಪಾತ್ರ ಕಡಿಮೆ ಕಾಣಿಸಿಕೊಳ್ಳಲಿದೆ. ಎರಡನೇ ಭಾಗದಲ್ಲಿ ಯಶ್ ಪಾತ್ರಕ್ಕೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇದೆ.
ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ನಿರ್ದೇಶಕಿ ಬಗ್ಗೆ ನಿಮಗೆಷ್ಟು ಗೊತ್ತು?
ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿನಿಮಾದ ಚಿತ್ರೀಕರಣ ಮಾಡಲು ನಿರ್ದೇಶಕರು ತಯಾರಾಗಿದ್ದು, ಸಿನಿಮಾದ ಚಿತ್ರೀಕರಣಕ್ಕೆ ಮುನ್ನ ತಂತ್ರಜ್ಞಾನದ ಬಗ್ಗೆ ನಟರಿಗೆ ತರಬೇತಿ ನೀಡುವ ಕಾರ್ಯ ಪ್ರಸ್ತುತ ಚಾಲ್ತಿಯಲ್ಲಿದೆ. ನಟ ರಣ್ಬೀರ್ ಕಪೂರ್, ನಟಿ ಸಾಯಿ ಪಲ್ಲವಿ ಹಾಗೂ ಇನ್ನೂ ಕೆಲವರಿಗೆ ಲಾಸ್ ಏಂಜಲ್ಸ್ನಲ್ಲಿ ಚಿತ್ರೀಕರಣದ ಬಗ್ಗೆ ತರಬೇತಿಗಳನ್ನು ನೀಡಲಾಗುತ್ತಿದೆ. ಈ ಸಿನಿಮಾಕ್ಕೆ ಆಸ್ಕರ್ ವಿಜೇತ ವಿಎಫ್ಎಕ್ಸ್ ಸಂಸ್ಥೆ ಡಿಎನ್ಇಜಿ ಈ ಸಿನಿಮಾಕ್ಕೆ ವಿಎಫ್ಎಕ್ಸ್ ಒದಗಿಸುತ್ತಿರುವ ಜೊತೆಗೆ ಸಿನಿಮಾದ ನಿರ್ಮಾಣ ಜವಾಬ್ದಾರಿಯನ್ನೂ ಸಹ ಹೊತ್ತುಕೊಂಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ