‘ಸಲಾರ್​ನಲ್ಲಿ ಯಶ್ ಜೊತೆ ಕೆಲಸ ಮಾಡಿದ್ದು ಖುಷಿ ಇದೆ’; ಬಾಯ್ತಪ್ಪಿ ಸತ್ಯ ಹೇಳಿದ್ರಾ ‘ಸಲಾರ್’ ಗಾಯಕಿ?

‘ಸಲಾರ್’ ಪ್ರಶಾಂತ್ ನೀಲ್ ಯೂನಿವರ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ ಸಿನಿಮಾ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ, ಇದಕ್ಕೆ ಯಾರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ. ತಂಡದವರು ಈ ವಿಚಾರದಲ್ಲಿ ಕುತೂಹಲ ಕಾಪಾಡಿಕೊಂಡಿದ್ದಾರೆ. ತೀರ್ಥಾ ಸುಭಾಷ್ ಅವರು ಈ ವಿಚಾರದಲ್ಲಿ ನಿಜ ಹೇಳಿದ್ದಾರೆ.

‘ಸಲಾರ್​ನಲ್ಲಿ ಯಶ್ ಜೊತೆ ಕೆಲಸ ಮಾಡಿದ್ದು ಖುಷಿ ಇದೆ’; ಬಾಯ್ತಪ್ಪಿ ಸತ್ಯ ಹೇಳಿದ್ರಾ ‘ಸಲಾರ್’ ಗಾಯಕಿ?
ಪ್ರಭಾಸ್​-ಯಶ್
Follow us
ರಾಜೇಶ್ ದುಗ್ಗುಮನೆ
|

Updated on: Dec 13, 2023 | 9:54 AM

‘ಸಲಾರ್’ ಸಿನಿಮಾಗೂ ‘ಕೆಜಿಎಫ್ 2’ (KGF 2) ಚಿತ್ರಕ್ಕೂ ಲಿಂಕ್ ಇದೆ ಎಂಬ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ, ಈವರೆಗೆ ಇದಕ್ಕೆ ಉತ್ತರ ಸಿಕ್ಕಿಲ್ಲ. ಟ್ರೇಲರ್, ಟೀಸರ್​ನಲ್ಲಿ ಈ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ತಂಡದವರು ಈ ಬಗ್ಗೆ ಮೌನ ವಹಿಸಿದ್ದಾರೆ. ಈಗ ‘ಸಲಾರ್’ ಸಿನಿಮಾದಲ್ಲಿ ಸಾಂಗ್ ಒಂದನ್ನು ಹಾಡಿರುವ ತೀರ್ಥಾ ಸುಭಾಷ್ ಅವರು ಬಾಯ್ತಪ್ಪಿ ಒಂದು ದೊಡ್ಡ ಸತ್ಯ ರಿವೀಲ್ ಮಾಡಿದ್ದಾರೆ. ಅವರ ಸಂದರ್ಶನ ಸಾಕಷ್ಟು ಚರ್ಚೆ ಆಗುತ್ತಿದೆ.

ಸದ್ಯ ಭಾರತದಲ್ಲಿ ಸಿನಿಮಾ ಯೂನಿವರ್ಸ್​ಗಳು ಸಿದ್ಧಗೊಂಡಿವೆ. ಅಂದರೆ, ಒಂದು ನಿರ್ಮಾಣ ಸಂಸ್ಥೆ ಅಥವಾ ನಿರ್ದೇಶಕನ ಸಿನಿಮಾಗಳಿಗೆ, ಕಥೆಗೆ ಲಿಂಕ್ ಇರುತ್ತದೆ. ಒಂದು ಸಿನಿಮಾದಲ್ಲಿ ಬಂದ ಪಾತ್ರಗಳು ಮತ್ತೊಂದು ಸಿನಿಮಾದಲ್ಲಿ ಬರುತ್ತವೆ. ‘ಸಲಾರ್’ ಪ್ರಶಾಂತ್ ನೀಲ್ ಯೂನಿವರ್ಸ್ ಅಡಿಯಲ್ಲಿ ಮೂಡಿ ಬರುತ್ತಿರುವ ಸಿನಿಮಾ ಎಂದು ಎಲ್ಲರೂ ಭಾವಿಸಿದ್ದಾರೆ. ಆದರೆ, ಇದಕ್ಕೆ ಯಾರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ. ತಂಡದವರು ಈ ವಿಚಾರದಲ್ಲಿ ಕುತೂಹಲ ಕಾಪಾಡಿಕೊಂಡಿದ್ದಾರೆ. ತೀರ್ಥಾ ಸುಭಾಷ್ ಅವರು ಈ ವಿಚಾರದಲ್ಲಿ ನಿಜ ಹೇಳಿದ್ದಾರೆ.

ತೀರ್ಥಾ ಅವರು ಮೂಲತಃ ಕೇರಳದವರು. ಅವರು ಇತ್ತೀಚೆಗೆ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಗೆದ್ದಿದ್ದಾರೆ. ಈ ಖುಷಿಯನ್ನು ಅವರು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅವರು ‘ಸಲಾರ್’ ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಪ್ರಭಾಸ್ ಅಂಕಲ್, ಪೃಥ್ವಿರಾಜ್ ಅಂಕಲ್, ಯಶ್ ಅಂಕಲ್ ಜೊತೆ ಕೆಲಸ ಮಾಡಿದ್ದು ಖುಷಿ ಇದೆ’ ಎಂದಿದ್ದಾರೆ. ಅವರ ಮಾತು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ನಂತರ ಇದಕ್ಕೆ ತೀರ್ಥಾ ಮತ್ತೊಂದು ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ನಾನು ಕೆಜಿಎಫ್ ಸಿನಿಮಾವನ್ನು ಹಲವು ಬಾರಿ ನೋಡಿದ್ದೇನೆ. ಕೆಜಿಎಫ್ ತಂಡದ ಮ್ಯೂಸಿಕ್ ಡೈರೆಕ್ಟರ್ ಸಲಾರ್​ಗೂ ಕೆಲಸ ಮಾಡಿದ್ದಾರೆ ಎಂದು ನನ್ನ ತಂದೆ ಹೇಳಿದ್ದರು. ಹಾಗಾಗಿ ನನ್ನ ಮನಸ್ಸಿನಲ್ಲಿ ಯಶ್ ಅಂಕಲ್ ಕೂಡ ಸಲಾರ್​ ಚಿತ್ರದಲ್ಲಿ ಇರ್ತಾರೆ ಎಂದು ಭಾವಿಸಿದ್ದೆ. ಆ ಊಹೆಯಲ್ಲಿಯೇ ನಾನು ಅವನ ಹೆಸರನ್ನು ಹೇಳಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಡಂಕಿ’ ಎದುರು ‘ಸಲಾರ್’ ಬಿಡುಗಡೆ ಏಕೆ, ಶಾರುಖ್ ಮೇಲೆ ಹೊಂಬಾಳೆಗೆ ಏಕೀ ಸಿಟ್ಟು? ವಿಜಯ್ ಕಿರಗಂದೂರು ಹೇಳಿದ್ದು ಹೀಗೆ

‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್, ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಡಿಸೆಂಬರ್ 22ರಂದು ರಿಲೀಸ್ ಆಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್