‘ಫೈಟರ್’ ಮಾತ್ರವಲ್ಲ ಈ ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ..

ದೀಪಿಕಾ ಪಡುಕೋಣೆ ಬ್ಯಾಕ್ ಟು ಬ್ಯಾಕ್ ಅವರಿಗೆ ಗೆಲುವು ಸಿಗುತ್ತಿದೆ. ಮದುವೆ ಬಳಿಕ ಬೋಲ್ಡ್ ದೃಶ್ಯಗಳಲ್ಲಿ ನಟಿಸೋಕೆ ನಟಿಯರು ಹಿಂದೇಟು ಹಾಕುತ್ತಾರೆ. ಆದರೆ, ದೀಪಿಕಾ ಪಡುಕೋಣೆ ಇದಕ್ಕೆ ಭಿನ್ನ.

‘ಫೈಟರ್’ ಮಾತ್ರವಲ್ಲ ಈ ಸಿನಿಮಾಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ದೀಪಿಕಾ ಪಡುಕೋಣೆ..
ಹೃತಿಕ್​-ದೀಪಿಕಾ ಪಡುಕೋಣೆ
Follow us
ರಾಜೇಶ್ ದುಗ್ಗುಮನೆ
|

Updated on: Dec 13, 2023 | 8:26 AM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಬಾಲಿವುಡ್​ನಲ್ಲಿ ಸಖತ್ ಬೇಡಿಕೆ ಹೊಂದಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಅವರಿಗೆ ಗೆಲುವು ಸಿಗುತ್ತಿದೆ. ಮದುವೆ ಬಳಿಕ ಬೋಲ್ಡ್ ದೃಶ್ಯಗಳಲ್ಲಿ ನಟಿಸೋಕೆ ನಟಿಯರು ಹಿಂದೇಟು ಹಾಕುತ್ತಾರೆ. ಆದರೆ, ದೀಪಿಕಾ ಪಡುಕೋಣೆ ಇದಕ್ಕೆ ಭಿನ್ನ. ಅವರು ಹಲವು ಚಿತ್ರಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆಯುತ್ತಾರೆ. ಇದಕ್ಕೆ ರಣವೀರ್ ಸಿಂಗ್ ಅವರ ವಿರೋಧ ಇಲ್ಲ. ದೀಪಿಕಾ ಬೋಲ್ಡ್ ಆಗಿ ನಟಿಸಿದ ಸಿನಿಮಾಗಳ ಬಗ್ಗೆ ಇಲ್ಲಿದೆ ವಿವರ.

‘ಫೈಟರ್’

ಹೃತಿಕ್ ರೋಷನ್ ಅವರು ‘ಫೈಟರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಸಖತ್ ಆ್ಯಕ್ಷನ್ ಇದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ದೀಪಿಕಾ ಅವರು ಹೃತಿಕ್​ಗೆ ಜೊತೆಯಾಗಿದ್ದಾರೆ. ಈ ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಈ ಸಿನಮಾದಲ್ಲಿ ದೀಪಿಕಾ ಅವರು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ಜೊತೆ ಲಿಪ್ ಲಾಕ್ ಮಾಡುವ ದೃಶ್ಯ ಗಮನ ಸೆಳೆದಿದೆ. ಈ ಚಿತ್ರ ಜನವರಿ 25ರಂದು ರಿಲೀಸ್ ಆಗಲಿದೆ.

ಗೆಹರಾಯಿಯಾ

ದೀಪಿಕಾ ಪಡುಕೋಣೆ ಹಾಗು ಸಿದ್ದಾಂತ್ ಚತುರ್ವೇದಿ ನಟನೆಯ ‘ಗೆಹರಾಯಿಯಾ’ ಸಿನಿಮಾ ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ದೀಪಿಕಾ ಬೋಲ್ಡ್ ಅವತಾರ ತಾಳಿದ್ದರು. ಈ ಚಿತ್ರದ ಹಸಿಬಿಸಿ ದೃಶ್ಯಗಳಿಗೆ ಸಾಕಷ್ಟು ಟೀಕೆ ವ್ಯಕ್ತವಾಯಿತು. ಜೀವನದ ಪಾಠವನ್ನು ಹೇಳಲು ಸಿನಿಮಾದಲ್ಲಿ ಪ್ರಯತ್ನಿಸಲಾಗಿತ್ತು.

‘ಪಠಾಣ್’

ಈ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆದ ಸಿನಿಮಾಗಳ ಸಾಲಿನಲ್ಲಿ ‘ಪಠಾಣ್’ ಚಿತ್ರ ಕೂಡ ಇದೆ. ಈ ಚಿತ್ರದ ‘ಬೇಷರಂ ರಂಗ್..’ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರು. ಬಳುಕುವ ಅವರ ದೇಹವನ್ನು ನೋಡಿ ಪಡ್ಡೆಗಳು ಖುಷಿಪಟ್ಟಿದ್ದರು. ಈ ಹಾಡು ವಿವಾದ ಹುಟ್ಟುಹಾಕಿತ್ತು.

ರಾಮ್​ಲೀಲಾ

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ‘ರಾಮ್ ಲೀಲಾ’ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ರಣವೀರ್ ಹಾಗೂ ದೀಪಿಕಾ ಲಿಪ್ ಲಾಕ್ ದೃಶ್ಯ ಗಮನ ಸೆಳೆದಿತ್ತು.

ತಮಾಷಾ

ಬ್ರೇಕಪ್ ಬಳಿಕವೂ ರಣಬೀರ್ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಮಧ್ಯೆ ಫ್ರೆಂಡ್​ಶಿಪ್ ಇತ್ತು. ಇಬ್ಬರೂ ಸಿನಿಮಾ ಮಾಡಿದ್ದರು. ‘ತಮಾಷಾ’ ಸಿನಿಮಾದಲ್ಲಿ ಲಿಪ್ ಲಾಕ್ ಮಾಡಿ ದೀಪಿಕಾ ಗಮನ ಸೆಳೆದರು.

‘ಕಾಕ್​ಟೇಲ್’

ದೀಪಿಕಾ ಪಡುಕೋಣೆ ನಟನೆಯ ‘ಕಾಕ್​ಟೇಲ್​’ ಸಿನಿಮಾ ಗೆಲುವು ಕಂಡಿಲ್ಲ. ಆದರೆ, ಅವರು ಈ ಚಿತ್ರದಲ್ಲಿ ಹಾಕಿದ್ದ ಬಿಕಿನಿ ಅವತಾರ ಪ್ರೇಕ್ಷಕರಿಗೆ ಇಷ್ಟ ಆಯಿತು.

ರೇಸ್

ದೀಪಿಕಾ ಪಡುಕೋಣೆ ಅವರು ‘ರೇಸ್ 2’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಸೈಫ್ ಅಲಿ ಖಾನ್ ಜೊತೆ ಅವರು ರೊಮ್ಯಾನ್ಸ್ ಮಾಡಿದ್ದರು. ಈ ಚಿತ್ರ ಸಖತ್ ಸುದ್ದಿ ಆಗಿತ್ತು.

ಇದನ್ನೂ ಓದಿ: ಮಿತಿ ಮೀರಿತೇ ದೀಪಿಕಾ ಪಡುಕೋಣೆ ಗ್ಲಾಮರ್​? ‘ಫೈಟರ್​’ ಟೀಸರ್​ನಲ್ಲಿ ಹೃತಿಕ್​ ಜತೆಗಿನ ದೃಶ್ಯ ವೈರಲ್​

ಯೇ ಜವಾನಿ ಹೇ ದಿವಾನಿ

ದೀಪಿಕಾ ಪಡುಕೋಣೆ ಹಾಗೂ ರಣಬೀರ್​ ಕಪೂರ್ ನಟನೆಯ ‘ಯೇ ಜವಾನಿ ಹೇ ದಿವಾನಿ’ ಸಿನಿಮಾ ಸಖತ್ ಸದ್ದು ಮಾಡಿತ್ತು. ಇಂದಿಗೂ ಜನರು ಇದನ್ನು ಇಷ್ಟಪಡುತ್ತಾರೆ. ದೀಪಿಕಾ ಹಾಗೂ ರಣಬೀರ್ ಕಿಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್