AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಿತಿ ಮೀರಿತೇ ದೀಪಿಕಾ ಪಡುಕೋಣೆ ಗ್ಲಾಮರ್​? ‘ಫೈಟರ್​’ ಟೀಸರ್​ನಲ್ಲಿ ಹೃತಿಕ್​ ಜತೆಗಿನ ದೃಶ್ಯ ವೈರಲ್​

ನಟನೆ ಮತ್ತು ಗ್ಲಾಮರ್​ ಎರಡಕ್ಕೂ ಸೈ ಎಂಬಂತಿರುವ ದೀಪಿಕಾ ಪಡುಕೋಣೆ ಅವರು ಈ ಹಿಂದೆ ಕೂಡ ಅನೇಕ ಸಿನಿಮಾಗಳಲ್ಲಿ ಬೋಲ್ಡ್​ ಆಗಿ ನಟಿಸಿದ್ದರು. ಈಗ ‘ಫೈಟರ್​’ ಚಿತ್ರದಲ್ಲೂ ಅದು ಮುಂದುವರಿದಿದೆ. ಈ ಸಿನಿಮಾದ ಟೀಸರ್​ನಲ್ಲಿ ಹೃತಿಕ್​ ರೋಷನ್​ ಹಾಗು ದೀಪಿಕಾ ಪಡುಕೋಣೆ ಅವರು ಲಿಪ್​ ಲಾಕ್​ ಮಾಡಿದ್ದಾರೆ.

ಮಿತಿ ಮೀರಿತೇ ದೀಪಿಕಾ ಪಡುಕೋಣೆ ಗ್ಲಾಮರ್​? ‘ಫೈಟರ್​’ ಟೀಸರ್​ನಲ್ಲಿ ಹೃತಿಕ್​ ಜತೆಗಿನ ದೃಶ್ಯ ವೈರಲ್​
ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ
TV9 Web
| Edited By: |

Updated on:Dec 08, 2023 | 8:08 PM

Share

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಗ್ಲಾಮರ್​ ಕಾರಣದಿಂದ ಅನೇಕ ಬಾರಿ ಸುದ್ದಿ ಆಗಿದ್ದುಂಟು. ಈ ಮೊದಲು ‘ಪಠಾಣ್​’ ಸಿನಿಮಾದಲ್ಲಿ ಅವರು ಬಿಕಿನಿ ಧರಿಸಿ ತುಂಬಾ ಹಾಟ್​ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಫೈಟರ್​’ ಸಿನಿಮಾದಲ್ಲಿ ಮತ್ತೊಮ್ಮೆ ಬೋಲ್ಡ್ ಅವತಾರ ತಾಳಿದ್ದಾರೆ. ಈ ಸಿನಿಮಾದಲ್ಲಿ ಹೃತಿಕ್​ ರೋಷನ್​ (Hrithik Roshan) ಮತ್ತು ದೀಪಿಕಾ ಪಡುಕೋಣೆ ಜೋಡಿಯಾಗಿ ನಟಿಸಿದ್ದಾರೆ. ಇಂದು (ಡಿಸೆಂಬರ್​ 8) ‘ಫೈಟರ್​’ ಟೀಸರ್​ (Fighter Teaser) ಬಿಡುಗಡೆ ಆಗಿದ್ದು, ಇದರಲ್ಲಿನ ಹಾಟ್​ ದೃಶ್ಯ ವೈರಲ್​ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಯುದ್ಧ ವಿಮಾನಗಳ ಸಾಹಸಮಯ ಕಥೆ ‘ಫೈಟರ್​’ ಸಿನಿಮಾದಲ್ಲಿ ಇರಲಿದೆ. ಪೈಲೆಟ್​ಗಳ ಪಾತ್ರದಲ್ಲಿ ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ. ಟೀಸರ್​ನಲ್ಲಿ ಮೈನವಿರೇಳಿಸುವಂತಹ ಆ್ಯಕ್ಷನ್​ ದೃಶ್ಯಗಳು ಗೋಚರಿಸಿವೆ. ಅಷ್ಟೇ ಅಲ್ಲದೇ ದೀಪಿಕಾ ಪಡುಕೋಣೆ ಅವರ ಬೋಲ್ಡ್​ ಸೀನ್​ ಕೂಡ ಇದರಲ್ಲಿ ಹೈಲೈಟ್​ ಆಗಿದೆ. ಈ ಬಾರಿ ಅವರ ಗ್ಲಾಮರ್​ ಮಿತಿ ಮೀರಿದೆ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: Hrithik Roshan: ‘ಫೈಟರ್​’ ಟೀಸರ್​ನಲ್ಲಿ ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ ಕಮಾಲ್​

ನಟನೆಗೂ ಸೈ, ಗ್ಲಾಮರ್​ಗೂ ಸೈ ಎಂಬಂತಿರುವ ದೀಪಿಕಾ ಪಡುಕೋಣೆ ಅವರು ಈ ಹಿಂದೆ ಕೂಡ ಅನೇಕ ಸಿನಿಮಾಗಳಲ್ಲಿ ಬೋಲ್ಡ್​ ಆಗಿ ನಟಿಸಿದ್ದರು. ಈಗ ‘ಫೈಟರ್​’ ಚಿತ್ರದಲ್ಲೂ ಅದು ಮುಂದುವರಿದಿದೆ. ಈ ಸಿನಿಮಾದ ಟೀಸರ್​ನಲ್ಲಿ ಹೃತಿಕ್​ ರೋಷನ್​ ಹಾಗು ದೀಪಿಕಾ ಪಡುಕೋಣೆ ಅವರು ಲಿಪ್​ ಲಾಕ್​ ಮಾಡಿದ್ದಾರೆ. ಒಟ್ಟಾರೆ ಇದೊಂದು ಮಸಾಲೆ ಭರಿತ ಸಿನಿಮಾ ಆಗಿರಲಿದೆ ಎಂಬುಕ್ಕೆ ಈ ಟೀಸರ್​ ಸಾಕ್ಷಿ ಒದಗಿಸುತ್ತಿದೆ.

‘ಫೈಟರ್​’ ಟೀಸರ್​:

2024ರ ಜನವರಿ 25ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ‘ಫೈಟರ್​’ ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ‘ಪಠಾಣ್​’ ಖ್ಯಾತಿಯ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡಿದ್ದಾರೆ. ‘ಅನಿಮಲ್​’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡಿರುವ ಹಿರಿಯ ನಟ ಅನಿಲ್​ ಕಪೂರ್​ ಕೂಡ ‘ಫೈಟರ್​’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟೀಸರ್​ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:38 pm, Fri, 8 December 23

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ