3ಡಿ ವರ್ಷನ್​ನಲ್ಲಿ ಬರಲಿದೆ ಹೃತಿಕ್​ ರೋಷನ್​ ನಟನೆಯ ‘ಫೈಟರ್​’ ಸಿನಿಮಾ

‘ಫೈಟರ್​’ ಸಿನಿಮಾದ ಪ್ರಚಾರಕ್ಕೆ ನಿರ್ದೇಶಕ ಸಿದ್ದಾರ್ಥ್​ ಆನಂದ್ ಅವರು ಬೇರೆ ಬೇರೆ ಪ್ಲ್ಯಾನ್​ಗಳನ್ನು ಮಾಡಿಕೊಂಡಿದ್ದಾರೆ. ಬರೋಬ್ಬರಿ 50 ದಿನಗಳ ಕಾಲ ಒಂದರ ಹಿಂದೊಂದು ಅಪ್​ಡೇಟ್​ ನೀಡಲು ಅವರು ನಿರ್ಧರಿಸಿದ್ದಾರೆ. ಹೃತಿಕ್​ ರೋಷನ್​ ಅಭಿನಯದ ಈ ಸಿನಿಮಾ 3ಡಿ ವರ್ಷನ್​ನಲ್ಲಿ ತೆರೆಕಂಡು ಧೂಳೆಬ್ಬಿಸಲಿದೆ.

3ಡಿ ವರ್ಷನ್​ನಲ್ಲಿ ಬರಲಿದೆ ಹೃತಿಕ್​ ರೋಷನ್​ ನಟನೆಯ ‘ಫೈಟರ್​’ ಸಿನಿಮಾ
ಹೃತಿಕ್​ ರೋಷನ್​, ದೀಪಿಕಾ ಪಡುಕೋಣೆ
Follow us
ಮದನ್​ ಕುಮಾರ್​
|

Updated on: Dec 05, 2023 | 3:24 PM

2024ರಲ್ಲಿ ಬಿಡುಗಡೆ ಆಗಲಿರುವ ಕೆಲವು ಸಿನಿಮಾಗಳ ಬಗ್ಗೆ ಈಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಅಂಥ ಸಿನಿಮಾಗಳ ಸಾಲಿನಲ್ಲಿ ಫೈಟರ್​’ (Fighter Movie) ಕೂಡ ಇದೆ. ಭರ್ಜರಿ ಆ್ಯಕ್ಷನ್​ ಹೊಂದಿರಲಿರುವ ಈ ಸಿನಿಮಾಗೆ ‘ಜವಾನ್​’ ಖ್ಯಾತಿಯ ಸಿದ್ದಾರ್ಥ್​ ಆನಂದ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರದಲ್ಲಿ ಹೃತಿಕ್​ ರೋಷನ್ (Hrithik Roshan)​ ಅವರಿಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ವಿಶೇಷ ಏನೆಂದರೆ, ‘ಫೈಟರ್​’ ಸಿನಿಮಾ 3ಡಿ (IMAX 3D) ವರ್ಷನ್​ನಲ್ಲಿ ಬಿಡುಗಡೆ ಆಗಲಿದೆ.

ಬಾಲಿವುಡ್​ ಸಿನಿಮಾಗಳ ವ್ಯಾಪ್ತಿ ಹಿರಿದಾಗಿದೆ. ಶಾರುಖ್​ ಖಾನ್​ ನಟನೆಯ ‘ಜವಾನ್​’, ‘ಪಠಾಣ್​’ ಸಿನಿಮಾಗಳು ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದ ಬಳಿಕ ಇನ್ನುಳಿದ ಹೀರೋಗಳಿಗೆ ಹೊಸ ಟಾರ್ಗೆಟ್​ ನಿಗದಿ ಆದಂತಾಗಿದೆ. ‘ಫೈಟರ್​’ ಸಿನಿಮಾ ಕೂಡ ಸಾವಿರ ಕೋಟಿ ರೂಪಾಯಿ ಬಿಸ್ನೆಸ್​ ಮಾಡಲಿದೆಯಾ ಎಂಬುದನ್ನು ಕಾದುನೋಡಬೇಕು. ‘ಅನಿಮಲ್​’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅನಿಲ್​ ಕಪೂರ್​ ಕೂಡ ‘ಫೈಟರ್​’ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಹೃತಿಕ್​ ರೋಷನ್​ ಮನೆಯವರ ಜೊತೆ ಪ್ರೇಯಸಿ ಸಬಾ ಆಜಾದ್​​ ದೀಪಾವಳಿ; ಈಗ ಎಲ್ಲವೂ ಅಧಿಕೃತ

2ಡಿ, 3ಡಿ ಮತ್ತು ಐಮ್ಯಾಕ್ಸ್​ 3ಡಿ ವರ್ಷನ್​ನಲ್ಲಿ ‘ಫೈಟರ್​’ ಸಿನಿಮಾ ಬಿಡುಗಡೆ ಆಗಲಿದೆ. ಮೈನವಿರೇಳಿಸುವಂತಹ ಸಾಹಸ ದೃಶ್ಯಗಳನ್ನು ಈ ಚಿತ್ರ ಹೊಂದಿರಲಿದೆ. ಅದನ್ನು ದೊಡ್ಡ ಪರದೆ ಮೇಲೆ ಆನಂದಿಸಲು ಅಭಿಮಾನಿಗಳು ಕಾದಿದ್ದಾರೆ. ಅಂಥ ಪ್ರೇಕ್ಷಕರಿಗೆ ಸ್ಪೆಷಲ್​ ಟ್ರೀಟ್​ ನೀಡಬೇಕು ಎಂಬ ಕಾರಣಕ್ಕೆ ಐಮ್ಯಾಕ್ಸ್​ 3ಡಿ ಅವತರಣಿಕೆಯಲ್ಲಿ ‘ಫೈಟರ್​’ ತೆರೆಕಾಣಲಿದೆ.

2024ರ ಜನವರಿ 25ರಂದು ‘ಫೈಟರ್​’ ಚಿತ್ರ ರಿಲೀಸ್​ ಆಗಲಿದೆ. ಅದು ಗಣರಾಜ್ಯೋತ್ಸವದ ಸಮಯ. ಆ ಸಂದರ್ಭದಲ್ಲಿ ಬೇರೆ ಬೇರೆ ಭಾಷೆಯಲ್ಲಿ ಅನೇಕ ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗಲಿದೆ. ಹಾಗಾಗಿ ಪೈಪೋಟಿ ಜೋರಾಗಿ ಇರಲಿದೆ. ‘ಫೈಟರ್​’ 3ಡಿಯಲ್ಲಿ ಬಿಡುಗಡೆ ಆಗಿದ್ದೇ ಹೌದಾದರೆ, ಇದೇ ಮೊದಲ ಬಾರಿಗೆ ಹೃತಿಕ್​ ನಟನೆಯ ಸಿನಿಮಾ 3ಡಿಯಲ್ಲಿ ಬಂದಂತೆ ಆಗಲಿದೆ. ದೀಪಿಕಾ ಪಡುಕೋಣೆ ಅಭಿನಯದ ‘ಪದ್ಮಾವತ್​’ ಸಿನಿಮಾ 3ಡಿ ವರ್ಷನ್​ನಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ