‘ವಾರ್ 2’ ಚಿತ್ರದಲ್ಲಿ ಇರಲ್ಲ ಯಾವುದೇ ವಿಶೇಷ ಅತಿಥಿ ಪಾತ್ರ; ಸೋಲಿನಿಂದ ಬುದ್ಧಿ ಕಲಿತ ನಿರ್ಮಾಪಕರು
‘ಟೈಗರ್ 3’ ಚಿತ್ರದಲ್ಲಿ ಬಂದ ಅತಿಥಿ ಪಾತ್ರಗಳೂ ಜನರಿಗೆ ಇದು ಸರ್ಪ್ರೈಸ್ ಎನಿಸಲೇ ಇಲ್ಲ. ಸಿನಿಮಾ ಕೂಡ ದೊಡ್ಡ ಕಲೆಕ್ಷನ್ ಮಾಡಿಲ್ಲ. ಹೀಗಾಗಿ ನಿರ್ಮಾಪಕರು ನಿರ್ಧಾರ ಬದಲಿಸಿದ್ದಾರೆ.

‘ಟೈಗರ್ 3’ ಸಿನಿಮಾದಲ್ಲಿ (Tiger 3 Movie) ಅತಿಥಿ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡುವ ಪ್ರಯತ್ನವನ್ನು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಮಾಡಿತ್ತು. ಆದರೆ, ಯಾಕೋ ಅದು ಅಷ್ಟಾಗಿ ವರ್ಕೌಟ್ ಆಗಿಲ್ಲ. ಸಲ್ಮಾನ್ ಖಾನ್ ಮುಖ್ಯಭೂಮಿಕೆ ನಿರ್ವಹಿಸಿ, ಶಾರುಖ್ ಖಾನ್ (Shah Rukh Khan), ಹೃತಿಕ್ ರೋಷನ್ ಗೆಸ್ಟ್ ಅಪಿಯರೆನ್ಸ್ಮಾಡಿದ ಹೊರತಾಗಿಯೂ ಸಿನಿಮಾ ಸಾಧಾರಣ ಗಳಿಕೆ ಮಾಡಿತ್ತು. ಇದರಿಂದ ನಿರ್ಮಾಪಕರು ಬುದ್ಧಿ ಕಲಿತಂತೆ ಇದೆ. ‘ವಾರ್ 2’ ಚಿತ್ರದಲ್ಲಿ ಯಾವುದೇ ಅತಿಥಿ ಪಾತ್ರ ಇಡದೇ ಇರಲು ನಿರ್ಮಾಪಕರು ನಿರ್ಧರಿಸಿದ್ದಾರೆ.
‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ಅವರು ನಟಿಸುತ್ತಿದ್ದಾರೆ. ಈ ಚಿತ್ರ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಈ ಸಿನಿಮಾದಲ್ಲಿ ಯಶ್ ರಾಜ್ ಫಿಲ್ಮ್ಸ್ ಯೂನಿವರ್ಸ್ನ ಪಾತ್ರಗಳಾದ ಪಠಾಣ್, ಟೈಗರ್ನ ತರುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ‘ಟೈಗರ್ 3’ ಸಿನಿಮಾದಲ್ಲಿ ಅತಿಥಿ ಪಾತ್ರಗಳು ಹೆಚ್ಚು ವರ್ಕ್ ಆಗಿಲ್ಲ. ಇದರಿಂದ ನಿರ್ಮಾಪಕರು ಲೆಕ್ಕ ಬದಲಿಸಿದ್ದಾರೆ.
‘ಪಠಾಣ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರ ಅತಿಥಿ ಪಾತ್ರ ಕೆಲಸ ಮಾಡಿತ್ತು. ಹೀಗಾಗಿ, ‘ಟೈಗರ್ 3’ ಚಿತ್ರದಲ್ಲಿ ಇದೇ ತಂತ್ರ ಉಪಯೋಗಿಸಲಾಯಿತು. ಆದರೆ, ಜನರಿಗೆ ಇದು ಸರ್ಪ್ರೈಸ್ ಎನಿಸಲೇ ಇಲ್ಲ. ಸಿನಿಮಾ ಕೂಡ ದೊಡ್ಡ ಕಲೆಕ್ಷನ್ ಮಾಡಿಲ್ಲ. ಹೀಗಾಗಿ, ‘ವಾರ್ 2’ ಸಿನಿಮಾ ಹೃತಿಕ್ ರೋಷನ್, ಜೂನಿಯರ್ ಎನ್ಟಿಆರ್ ಹಾಗೂ ಕಿಯಾರಾ ಅಡ್ವಾಣಿ ಅವರ ಶೋ ಆಗಿರಲಿದೆ.
ಇದನ್ನೂ ಓದಿ: ‘ವಾರ್ 2’ ಚಿತ್ರಕ್ಕೆ ಅಯಾನ್ ಮುಖರ್ಜಿ ಪಡೆಯುತ್ತಿರೋ ಸಂಭಾವನೆ ಇಷ್ಟೊಂದಾ? ಯಾವ ಹೀರೋಗೂ ಕಡಿಮೆ ಇಲ್ಲ
‘ವಾರ್ 2’ ಚಿತ್ರಕ್ಕೆ ಆದಿತ್ಯ ಚೋಪ್ರಾ ಬಂಡವಾಳ ಹೂಡುತ್ತಿದ್ದಾರೆ. ಅಯಾನ್ ಮುಖರ್ಜಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ ಸಿನಿಮಾ ಮೂಲಕ ಅಯಾನ್ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರು ಮತ್ತೊಂದು ಬಿಗ್ ಬಜೆಟ್ ಚಿತ್ರ ನಿರ್ದೇಶನ ಮಾಡಲು ರೆಡಿ ಆಗಿದ್ದಾರೆ. ಈ ಸಿನಿಮಾದ ಕೆಲಸಗಳು ಭರದಿಂದ ಸಾಗುತ್ತಿವೆ ಎನ್ನಲಾಗುತ್ತಿದೆ. ‘ಆರ್ಆರ್ಆರ್’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಜೂನಿಯರ್ ಎನ್ಟಿಆರ್ ಅವರ ಪರಿಚಯ ಆಗಿದೆ. ಈಗ ಅವರು ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Wed, 6 December 23