Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ಕೋಟಿ ರೂ. ಸನಿಹದಲ್ಲಿ ‘ಅನಿಮಲ್​’ ಸಿನಿಮಾ ಕಲೆಕ್ಷನ್​; ಸಿಕ್ತು ಅಧಿಕೃತ ಲೆಕ್ಕ

ಬಾಲಿವುಡ್​ ನಟ ರಣಬೀರ್​ ಕಪೂರ್​ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಅನಿಮಲ್’ ಚಿತ್ರ ಪಾತ್ರವಾಗಿದೆ. ಅನಿಲ್​ ಕಪೂರ್​, ಬಾಬಿ ಡಿಯೋಲ್​ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಅವರು ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕಲೆಕ್ಷನ್​ ರಿಪೋರ್ಟ್​ ಇಲ್ಲಿದೆ..

500 ಕೋಟಿ ರೂ. ಸನಿಹದಲ್ಲಿ ‘ಅನಿಮಲ್​’ ಸಿನಿಮಾ ಕಲೆಕ್ಷನ್​; ಸಿಕ್ತು ಅಧಿಕೃತ ಲೆಕ್ಕ
ರಣಬೀರ್​ ಕಪೂರ್​
Follow us
ಮದನ್​ ಕುಮಾರ್​
|

Updated on: Dec 06, 2023 | 5:48 PM

ಬಾಲಿವುಡ್​ ಬಾಕ್ಸ್​ ಆಫೀಸ್​ಗೆ 2023ರ ವರ್ಷ ಆಶಾದಾಯಕವಾಗಿದೆ. ಹಲವು ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಭಾರತದ ಮಾರುಕಟ್ಟೆಯಲ್ಲಿ 500 ಕೋಟಿ ರೂಪಾಯಿ ಕ್ಲಬ್​ ಸೇರಿದ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ‘ಜವಾನ್​’, ‘ಪಠಾಣ್​’, ‘ಗದರ್​ 2’ ಸಿನಿಮಾಗಳ ಬಳಿಕ ಈಗ ಅನಿಮಲ್​’ (Animal Movie) ಚಿತ್ರ ಕೂಡ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗಾ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ರಣಬೀರ್​ ಕಪೂರ್ (Ranbir Kapoor)​ ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಕಲೆಕ್ಷನ್​ (Animal Box Office Collection) ಬಗ್ಗೆ ನಿರ್ಮಾಣ ಸಂಸ್ಥೆಯಾದ ಟಿ-ಸೀರಿಸ್​ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ.

‘ಅನಿಮಲ್​’ ಸಿನಿಮಾ ತೆರೆಕಂಡು 5 ದಿನ ಕಳೆದಿದೆ. ಈ ಚಿತ್ರ ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಐದು ದಿನಕ್ಕೆ 481 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ನಿರ್ಮಾಪಕರು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಅಂದರೆ, 500 ಕೋಟಿ ರೂಪಾಯಿ ಕ್ಲಬ್​ ಸೇರಲು ಇನ್ನು 19 ಕೋಟಿ ರೂಪಾಯಿ ಮಾತ್ರ ಬಾಕಿ. 6ನೇ ದಿನ ಕೂಡ ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಂಡಿದೆ. ಹಾಗಾಗಿ ಅನಾಯಾಸವಾಗಿ ಈ ಸಿನಿಮಾಗೆ 500 ಕೋಟಿ ರೂಪಾಯಿ ಹರಿದುಬಂದಿದ್ದು, ಶೀಘ್ರದಲ್ಲೇ ಅಪ್​ಡೇಟ್​ ಸಿಗಲಿದೆ.

ಇದನ್ನೂ ಓದಿ: Animal Twitter Review: ಹೇಗಿದೆ ರಶ್ಮಿಕಾ-ರಣಬೀರ್​ ನಟನೆಯ ‘ಅನಿಮಲ್​’ ಸಿನಿಮಾ? ಇಲ್ಲಿದೆ ಟ್ವಿಟರ್​ ವಿಮರ್ಶೆ

ರಣಬೀರ್​ ಕಪೂರ್​ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಅನಿಮಲ್’ ಚಿತ್ರ ಪಾತ್ರವಾಗಿದೆ. ಅನಿಲ್​ ಕಪೂರ್​, ಬಾಬಿ ಡಿಯೋಲ್​ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಅವರು ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಅನೇಕ ದೃಶ್ಯಗಳು ಕ್ರೌರ್ಯದಿಂದ ಕೂಡಿವೆ ಎಂಬ ಕಾರಣಕ್ಕೆ ಕೆಲವರು ‘ಅನಿಮಲ್​’ ಸಿನಿಮಾವನ್ನು ಟೀಕಿಸುತ್ತಿದ್ದಾರೆ. ಎಲ್ಲ ಟೀಕೆಗಳ ನಡುವೆಯೂ ಈ ಸಿನಿಮಾದ ಕಲೆಕ್ಷನ್​ ಹೆಚ್ಚುತ್ತಲೇ ಇದೆ.

View this post on Instagram

A post shared by tseriesfilms (@tseriesfilms)

ಎರಡನೇ ವೀಕೆಂಡ್​ನಲ್ಲೂ ‘ಅನಿಮಲ್​’ ಸಿನಿಮಾ ಅಬ್ಬರಿಸುವ ಸಾಧ್ಯತೆ ದಟ್ಟವಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದರೆ ಈ ಸಿನಿಮಾ ಕೂಡ ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡಬಹುದು. ಆದರೆ 2ನೇ ವೀಕೆಂಡ್​ ಬಳಿಕ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು. ಈ ಸಿನಿಮಾದ ಯಶಸ್ಸಿನ ಬಳಿಕ ನಿರ್ದೇಶಕ ಸಂದೀಪ್​ ರೆಡ್ಡಿ ವಂಗ ಅವರ ಡಿಮ್ಯಾಂಡ್​ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಹಿಂದೂಗಳು ದುರ್ಬಲರಲ್ಲವೆಂಬ ಸಂದೇಶ ಸಾರುವ ಉದ್ದೇಶ ಸಂಘಟಕರದ್ದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಬೆಳೆದುನಿಂತ ಅಡಿಕೆ ಸಸಿಗಳ ಮೇಲೆ ಅದೆಂಥ ವೈರತ್ವ ಅಂತ ಅರ್ಥವಾಗದು
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಫೋರ್ ಇಲ್ಲ, ಸಿಕ್ಸ್ ಅಂತು ಇಲ್ಲವೇ ಇಲ್ಲ: ಸುಮ್ಮನೆ ಕೂತ CSK ಚಿಯರ್​ಲೀಡರ್ಸ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಗ್ಯಾರಂಟಿ ಯೋಜನೆಗಳ ವೈಫಲ್ಯದಿಂದ ಬೇಸತ್ತ ಜನ ಸಹ ಧರಣಿಯಲ್ಲಿ ಭಾಗಿ: ನಿಖಿಲ್
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಅಧಿಕ ಹಣದ ಆಸೆಗಾಗಿ ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
ಶಾಸ್ತ್ರದ ಪ್ರಕಾರ ಗಂಡ ಹೆಂಡತಿ ಕಾರ್ಯಕ್ರಮಗಳಿಗೆ ಹೇಗೆ ಹೋಗಬೇಕು?
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
Daily Horoscope: ಹುಣ್ಣಿಮೆ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ಕಾಪಾಡಲು ಅಮ್ಮ ಮಾಡಿದ ಸಾಹಸ ನೀವೇ ನೋಡಿ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಬೆಂಗಳೂರು ನಗರದ ಹಲವೆಡೆ ಏಕಾಏಕಿ ಮಳೆ
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್
ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ವಾರ್ನಿಂಗ್