‘ಜವಾನ್’, ‘ಪಠಾಣ್’ ಬಗ್ಗೆ ಕೆಟ್ಟದಾಗಿ ಮಾತಾಡಿದ ನೆಟ್ಟಿಗ; ಶಾರುಖ್ ಕೊಟ್ಟ ಖಡಕ್ ಉತ್ತರ ಏನು?
‘ಉತ್ತಮವಾದ ಪ್ರಚಾರದಿಂದಾಗಿ ನಿಮ್ಮ ಕೆಟ್ಟ ಸಿನಿಮಾಗಳಾದ ಜವಾನ್ ಮತ್ತು ಪಠಾಣ್ ಯಶಸ್ಸು ಕಂಡವು. ಈಗ ಡಂಕಿ ಚಿತ್ರ ಕೂಡ ಅದೇ ರೀತಿ ಪ್ರಚಾರದಿಂದ ಸೂಪರ್ ಹಿಟ್ ಆಗುತ್ತೆ ಎಂಬ ನಂಬಿಕೆ ನಿಮಗೆ ಇದೆಯಾ’ ಎಂದು ನೆಟ್ಟಿಗನೊಬ್ಬ ಕೇಳಿದ್ದಾನೆ. ಶಾರುಖ್ ಖಾನ್ ಅವರು ಆತನಿಗೆ ಸೂಕ್ತ ತಿರುಗೇಟು ನೀಡಿದ್ದಾರೆ.

ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರು ಈ ವರ್ಷ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ‘ಜವಾನ್’ (Jawan) ಮತ್ತು ‘ಪಠಾಣ್’ ಸಿನಿಮಾಗಳು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ ಸೈ ಎನಿಸಿಕೊಂಡಿವೆ. ಆದರೆ ಈ ಸಿನಿಮಾಗಳ ಯಶಸ್ಸನ್ನು ಕೆಲವರು ಸಹಿಸಿಕೊಂಡಿಲ್ಲ. ಹಾಗಾಗಿ ಈ ಸಿನಿಮಾಗಳ ಬಗ್ಗೆ ನೆಟ್ಟಿಗನೊಬ್ಬ ಕೆಟ್ಟದಾಗಿ ಮಾತನಾಡಿದ್ದಾನೆ. ಅದಕ್ಕೆ ಶಾರುಖ್ ಖಾನ್ ಅವರು ಖಡಕ್ ಆಗಿ ಉತ್ತರ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶಾರುಖ್ ಖಾನ್ ನಡೆಸಿದ ಪ್ರಶ್ನೋತ್ತರದ (Ask SRK) ವೇಳೆ ಈ ಮಾತಿನ ಚಕಮಕಿ ನಡೆದಿದೆ.
ಶಾರುಖ್ ಖಾನ್ ನಟಿಸಿರುವ ‘ಡಂಕಿ’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಲ್ಲದೇ ಅವರು ಮಗಳು ಸುಹಾನಾ ಖಾನ್ ಅಭಿನಯಿಸಿರುವ ಮೊದಲ ಸಿನಿಮಾ ‘ದಿ ಆರ್ಚೀಸ್’ ನೆಟ್ಫ್ಲಿಕ್ಸ್ ಮೂಲಕ ನೇರವಾಗಿ ಬಿಡುಗಡೆ ಆಗಿದೆ. ಈ ಪ್ರಯುಕ್ತ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದ್ದಾರೆ ಶಾರುಖ್ ಖಾನ್. ಆದರೆ ಈ ಅವಕಾಶವನ್ನು ಕೆಲವರು ದುರುಪಯೋಗ ಮಾಡಿಕೊಂಡಿದ್ದಾರೆ. ಶಾರುಖ್ ಖಾನ್ರನ್ನು ಟ್ರೋಲ್ ಮಾಡುವ ಸಾಹಸಕ್ಕೆ ಕೆಲವರು ಮುಂದಾಗಿದ್ದಾರೆ. ಅಂಥವರಿಗೆ ಎಸ್ಆರ್ಕೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ‘ಸಲಾರ್’ ವರ್ಸಸ್ ‘ಡಂಕಿ’ ಟ್ರೇಲರ್ ಪೈಪೋಟಿ; ಹಿಂದಿಯಲ್ಲಿ ಶಾರುಖ್ ಖಾನ್ ಮೇಲುಗೈ
‘ಉತ್ತಮವಾದ ಪ್ರಚಾರದಿಂದಾಗಿ ನಿಮ್ಮ ಕೆಟ್ಟ ಸಿನಿಮಾಗಳಾದ ಜವಾನ್ ಮತ್ತು ಪಠಾಣ್ ಯಶಸ್ಸು ಕಂಡವು. ಈಗ ಡಂಕಿ ಚಿತ್ರ ಕೂಡ ಅದೇ ರೀತಿ ಪ್ರಚಾರದಿಂದ ಸೂಪರ್ ಹಿಟ್ ಆಗುತ್ತೆ ಎಂಬ ನಂಬಿಕೆ ನಿಮಗೆ ಇದೆಯಾ’ ಎಂದು ನೆಟ್ಟಿಗನೊಬ್ಬ ಕೇಳಿದ್ದಾನೆ. ಶಾರುಖ್ ಖಾನ್ ಅವರು ಈ ಪ್ರಶ್ನೆಯನ್ನು ನಿರ್ಲಕ್ಷಿಸಿ ಮುಂದೆ ಸಾಗಬಹುದಿತ್ತು. ಆದರೆ ಆತನಿಗೆ ಅವರು ಸೂಕ್ತ ತಿರುಗೇಟು ನೀಡಿದ್ದಾರೆ. ‘ಸಾಮಾನ್ಯವಾಗಿ ನಿನ್ನಂತಹ ಅತಿ ಬುದ್ಧಿವಂತರಿಗೆ ನಾನು ಉತ್ತರ ನೀಡುವುದಿಲ್ಲ. ಆದರೆ ನಿನ್ನ ವಿಚಾರದಲ್ಲಿ ನಾನು ಉತ್ತರ ನೀಡುತ್ತೇನೆ. ಯಾಕೆಂದರೆ ನಿನಗೆ ಮಲಬದ್ಧತೆಯ ಸಮಸ್ಯೆಗೆ ಚಿಕಿತ್ಸೆಯ ಅವಶ್ಯಕತೆ ಇದೆ ಎನಿಸುತ್ತದೆ. ನನ್ನ ಪ್ರಚಾರದ ತಂಡದವರಿಗೆ ಹೇಳಿ ನಿನಗೆ ಔಷಧಿ ಕಳಿಸುತ್ತೇನೆ. ನೀನು ಬೇಗ ಚೇತರಿಸಿಕೊಳ್ಳುತ್ತೀಯ ಎಂಬ ಭರವಸೆ ನನಗಿದೆ’ ಎಂದು ಶಾರುಖ್ ಖಾನ್ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಸಲಾರ್’ ಬಿಡುಗಡೆಗೂ ಮುನ್ನವೇ ಅಬ್ಬರಿಸಲಿದೆ ‘ಡಂಕಿ’; ಪ್ರಭಾಸ್ಗಿಂತ ಒಂದು ದಿನ ಮುಂಚೆ ಶಾರುಖ್ ಖಾನ್ ಆಗಮನ
ಇನ್ನೂ ಕೆಲವರು, ‘ಈ ಸಿನಿಮಾದಲ್ಲಿ ಬೋಲ್ಡ್ ದೃಶ್ಯಗಳು ಇವೆಯಾ? ನಾವು ತಂದೆಯ ಜೊತೆ ಸಿನಿಮಾ ನೋಡಬಹುದಾ’ ಎಂದು ಕೂಡ ಕೇಳಿದ್ದಾರೆ. ಮುಜುಗರ ತರುವಂತಹ ಯಾವುದೇ ದೃಶ್ಯಗಳು ಇಲ್ಲ ಎಂದು ಶಾರುಖ್ ಖಾನ್ ಭರವಸೆ ನೀಡಿದ್ದಾರೆ. ಈ ಸಿನಿಮಾಗೆ ರಾಜ್ಕುಮಾರ್ ಹಿರಾನಿ ನಿರ್ದೇಶನ ಮಾಡಿದ್ದಾರೆ. ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್ ಕೂಡ ನಟಿಸಿದ್ದಾರೆ. ಡಿಸೆಂಬರ್ 21ರಂದು ‘ಡಂಕಿ’ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




