AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್​’ ಬಿಡುಗಡೆಗೂ ಮುನ್ನವೇ ಅಬ್ಬರಿಸಲಿದೆ ‘ಡಂಕಿ’; ಪ್ರಭಾಸ್​ಗಿಂತ ಒಂದು ದಿನ ಮುಂಚೆ ಶಾರುಖ್​ ಖಾನ್​ ಆಗಮನ

‘ಡಂಕಿ’ ಸಿನಿಮಾ ಕ್ಲಾಸ್​ ಆಗಿದ್ದರೆ, ‘ಸಲಾರ್​’ ಚಿತ್ರ ಮಾಸ್​ ಆಗಿರಲಿದೆ. ಶಾರುಖ್​ ಖಾನ್​ ನಟನೆಯ ‘ಡಂಕಿ’ ಚಿತ್ರ ತೆರೆಕಂಡ ಮರುದಿನವೇ ಪ್ರಭಾಸ್​ ಅಭಿನಯದ ‘ಸಲಾರ್​’ ಬಿಡುಗಡೆ ಆಗಲಿದೆ. ಸ್ಟಾರ್​ ನಟರು ಮಾತ್ರವಲ್ಲದೇ ಸ್ಟಾರ್​ ನಿರ್ದೇಶಕರ ಕಾರಣದಿಂದಲೂ ಈ ಸಿನಿಮಾಗಳು ಭಾರಿ ಹೈಪ್​ ಪಡೆದುಕೊಳ್ಳುತ್ತಿವೆ.

‘ಸಲಾರ್​’ ಬಿಡುಗಡೆಗೂ ಮುನ್ನವೇ ಅಬ್ಬರಿಸಲಿದೆ ‘ಡಂಕಿ’; ಪ್ರಭಾಸ್​ಗಿಂತ ಒಂದು ದಿನ ಮುಂಚೆ ಶಾರುಖ್​ ಖಾನ್​ ಆಗಮನ
ಶಾರುಖ್​ ಖಾನ್​, ಪ್ರಭಾಸ್​,
ಮದನ್​ ಕುಮಾರ್​
|

Updated on: Dec 05, 2023 | 6:44 PM

Share

ಈ ವರ್ಷದ ದೊಡ್ಡ ಬಾಕ್ಸ್​ ಆಫೀಸ್​ ಕ್ಲ್ಯಾಶ್​ಗೆ ದಿನಗಣನೆ ಶುರುವಾಗಿದೆ. ಒಂದು ದಿನದ ಅಕ್ಕಪಕ್ಕದಲ್ಲಿ ಸಲಾರ್​’ (Salaar Movie) ಮತ್ತು ‘ಡಂಕಿ’ ಸಿನಿಮಾಗಳು ತೆರೆ ಕಾಣಲಿವೆ. ಈ ಎರಡೂ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ ಇದೆ. 2023ರ ಕ್ರಿಸ್ಮಸ್​ ರಜೆಯ ಲಾಭ ಪಡೆಯಲು ಈ ಸಿನಿಮಾಗಳು ಪ್ಲ್ಯಾನ್​ ಮಾಡಿಕೊಂಡಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಭಾಸ್​ ನಟನೆಯ ‘ಸಲಾರ್​’ ಹಾಗೂ ಶಾರುಖ್​ ಖಾನ್ (Shah Rukh Khan)​ ನಟನೆಯ ‘ಡಂಕಿ’ ಒಂದೇ ದಿನ ಬಿಡುಗಡೆ ಆಗಬೇಕಿತ್ತು. ಆದರೆ ಒಂದು ದಿನ ಮುಂಚಿತವಾಗಿ ‘ಡಂಕಿ’ (Dunki Movie) ತೆರೆಕಾಣಲಿದೆ.

ಸ್ಟಾರ್​ ನಟರು ಮಾತ್ರವಲ್ಲದೇ ಸ್ಟಾರ್​ ನಿರ್ದೇಶಕರ ಕಾರಣದಿಂದಲೂ ಈ ಸಿನಿಮಾಗಳು ಹೈಪ್​ ಸೃಷ್ಟಿ ಮಾಡಿವೆ. ‘ಸಲಾರ್​’ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಬ್ಲಾಕ್​ ಬಸ್ಟರ್​ ಹಿಟ್​ ಬಳಿಕ ಅವರು ಈ ಸಿನಿಮಾ ನಿರ್ದೇಶಿಸಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಹಾಗೆಯೇ, ‘ಡಂಕಿ’ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ‘3 ಈಡಿಯಟ್ಸ್​’, ‘ಪಿಕೆ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳಿಂದ ಖ್ಯಾತಿ ಪಡೆದಿರುವ ರಾಜ್​ಕುಮಾರ್ ಹಿರಾನಿ ಅವರ ಕೆಲಸದ ಬಗ್ಗೆ ಸಿನಿಪ್ರಿಯರಿಗೆ ಭರವಸೆ ಇದೆ.

ಇದನ್ನೂ ಓದಿ: 3ನೇ ಗೆಲುವಿಗಾಗಿ ಗೆಟಪ್​ ಬದಲಿಸಿಕೊಂಡ ಶಾರುಖ್​ ಖಾನ್​; ‘ಡಂಕಿ’ ಟ್ರೇಲರ್​ ಹೇಗಿದೆ ನೋಡಿ

ಡಿಸೆಂಬರ್​ 21ರಂದು ವಿಶ್ವಾದ್ಯಂತ ‘ಡಂಕಿ’ ಸಿನಿಮಾ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಶಾರುಖ್​ ಖಾನ್​, ತಾಪ್ಸಿ ಪನ್ನು, ವಿಕ್ಕಿ ಕೌಶಲ್​ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾ ತೆರೆಕಂಡ ಮರುದಿನವೇ, ಅಂದರೆ ಡಿಸೆಂಬರ್​ 22ರಂದು ‘ಸಲಾರ್​’ ಬಿಡುಗಡೆ ಆಗಲಿದೆ. ಆ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಶ್ರುತಿ ಹಾಸನ್​, ಪೃಥ್ವಿರಾಜ್​ ಸುಕುಮಾರನ್​ ಮುಂತಾದವರು ನಟಿಸಿದ್ದಾರೆ. ಈ ಎರಡೂ ಹೈವೋಲ್ಟೇಜ್​ ಸಿನಿಮಾಗಳ ಬಗ್ಗೆ ಸಿನಿಪ್ರಿಯರು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ ಜೊತೆ ಮೊದಲ ಬಾರಿ ತೆರೆ ಹಂಚಿಕೊಂಡ ನಟಿ ತಾಪ್ಸಿ ಪನ್ನು

ಶಾರುಖ್​ ಖಾನ್​ ಅವರು 2023ರಲ್ಲಿ ಈಗಾಗಲೇ ಎರಡು ಸಿನಿಮಾಗಳಿಂದ ಗೆಲುವು ಕಂಡಿದ್ದಾರೆ. ‘ಜವಾನ್​’, ‘ಪಠಾಣ್​’ ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಗಳಿಸಿ ಬ್ಲಾಕ್​ ಬಸ್ಟರ್​ ಆಗಿವೆ. ಈಗ ಅವರು ಹ್ಯಾಟ್ರಿಕ್​ ಯಶಸ್ಸಿಗಾಗಿ ಕಾದಿದ್ದಾರೆ. ಅತ್ತ, ಪ್ರಭಾಸ್​ ಅವರು ಸತತ ಸೋಲು ಅನುಭವಿಸಿದ್ದಾರೆ. ಹಾಗಾಗಿ ಅವರಿಗೆ ‘ಸಲಾರ್​’ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ‘ಡಂಕಿ’ ಮತ್ತು ‘ಸಲಾರ್​’ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ