‘ಸಲಾರ್’ ಟ್ರೇಲರ್ ಬಳಿಕ ಫೈಟ್ ಕೊಡಲು ರೆಡಿ ಆಗ್ತಿದೆ ‘ಡಂಕಿ’ ಟೀಂ

ಡಿಸೆಂಬರ್ 22ರಂದು ಬಾಕ್ಸ್ ಆಫೀಸ್​​ನಲ್ಲಿ ‘ಸಲಾರ್’ ಹಾಗೂ ‘ಡಂಕಿ’ ಮಧ್ಯೆ ಕ್ಲ್ಯಾಶ್ ಏರ್ಪಡುತ್ತಿದೆ. ‘ಸಲಾರ್’ ಟ್ರೇಲರ್​ ಅಬ್ಬರಿಸುತ್ತಿದ್ದು, ‘ಡಂಕಿ’ ತಂಡ ಫೈಟ್ ಕೊಡಲು ರೆಡಿ ಆಗಿದೆ. ಈ ಚಿತ್ರದ ಟ್ರೇಲರ್ ರಿಲೀಸ್ ಆದರೆ ಸಿನಿಮಾ ಹೇಗಿರಲಿದೆ ಎಂಬ ಒಂದು ಚಿತ್ರಣ ಸಿಗಲಿದೆ.

‘ಸಲಾರ್’ ಟ್ರೇಲರ್ ಬಳಿಕ ಫೈಟ್ ಕೊಡಲು ರೆಡಿ ಆಗ್ತಿದೆ ‘ಡಂಕಿ’ ಟೀಂ
ಪ್ರಭಾಸ್​-ಶಾರುಖ್​ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on:Dec 02, 2023 | 2:16 PM

ಪ್ರಶಾಂತ್ ನೀಲ್ (Prashanth Neel) ಸಿನಿಮಾಗಳಲ್ಲಿ ಅಬ್ಬರ ಜೋರಾಗಿರುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ. ‘ಸಲಾರ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಪ್ರಭಾಸ್ ಅವರು ಘರ್ಜಿಸಿದ್ದಾರೆ. ಸಖತ್ ಮಾಸ್ ಆಗಿ ಟ್ರೇಲರ್ ಮೂಡಿ ಬಂದಿದೆ. ‘ಸಲಾರ್’ ಟ್ರೇಲರ್​ ನೋಡಿದ ಹಲವರು ಮೆಚ್ಚಿಕೊಂಡಿದ್ದಾರೆ. ಈ ಟ್ರೇಲರ್ ನೋಡಿದ ಬಳಿಕ ಶಾರುಖ್ ಖಾನ್ ನಟನೆಯ ‘ಡಂಕಿ’ ತಂಡ ಫೈಟ್ ಕೊಡಲು ರೆಡಿ ಆಗುತ್ತಿದೆ. ಎರಡೂ ಚಿತ್ರಗಳು ಡಿಸೆಂಬರ್ 22ರಂದು ರಿಲೀಸ್ ಆಗುತ್ತಿವೆ.

‘ಸಲಾರ್’ ಬಿಗ್ ಬಜೆಟ್ ಸಿನಿಮಾ. ‘ಕೆಜಿಎಫ್’ ಮೂಲಕ ಪ್ರಶಾಂತ್ ನೀಲ್ ತಮ್ಮ ಕಸುಬುದಾರಿಕೆಯನ್ನು ತೋರಿಸಿದ್ದಾರೆ. ಈಗ ‘ಸಲಾರ್’ ಮೂಲಕ ಮತ್ತೊಂದು ಬಿಗ್ ಬಜೆಟ್ ಸಿನಿಮಾ ತರುತ್ತಿದ್ದಾರೆ. ಪ್ರಭಾಸ್ ಹಾಗೂ ಪೃಥ್ವಿರಾಜ್​ ಸುಕುಮಾರನ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಟ್ರೇಲರ್ ನೋಡಿದ ಅನೇಕರಿಗೆ ಈ ಸಿನಿಮಾ ಇಷ್ಟವಾಗಿದೆ. ‘ಸಲಾರ್’ ಸಿನಿಮಾ ಬಗ್ಗೆ ಹೊಸ ನಿರೀಕ್ಷೆ ಸೃಷ್ಟಿ ಆಗಿದೆ. ಡಿಸೆಂಬರ್ 22ರಂದು ಸಿನಿಮಾ ರಿಲೀಸ್ ಆಗಲಿದೆ.

ಶಾರುಖ್ ಖಾನ್ ನಟನೆಯ ‘ಡಂಕಿ’ ಸಿನಿಮಾ ಕೂಡ ಡಿಸೆಂಬರ್ 22ಕ್ಕೆ ಬಿಡುಗಡೆ ಆಗುತ್ತಿದೆ. ಶಾರುಖ್ ಖಾನ್ ಅವರು ಬ್ಯಾಕ್​ ಟು ಬ್ಯಾಕ್ ಎರಡು ಮಾಸ್ ಸಿನಿಮಾ ನೀಡಿದ್ದು, ಈಗ ಬರಲಿರುವ ಚಿತ್ರ ಸಂಪೂರ್ಣವಾಗಿ ಕ್ಲಾಸ್ ಆಗಿದೆ.ಈಗ ಶಾರುಖ್ ಖಾನ್ ಅವರು ಹ್ಯಾಟ್ರಿಕ್ ಬಾರಿಸುವ ಕನಸು ಕಾಣುತ್ತಿದ್ದಾರೆ.  ಟೀಸರ್ ಮೂಲಕ ‘ಡಂಕಿ’ ಸಿನಿಮಾ ಗಮನ ಸೆಳೆದಿದೆ.

ಇದನ್ನೂ ಓದಿ: ‘ಸಲಾರ್’ ಸಿನಿಮಾದ ಟ್ರೈಲರ್​ನಲ್ಲಿ ಈ ಪಾತ್ರಗಳನ್ನು ಗಮನಿಸಿದಿರಾ?

‘ಸಲಾರ್’ ಅಬ್ಬರ ದಕ್ಷಿಣ ಭಾರತ ಮಾತ್ರವಲ್ಲದೆ ಹಿಂದಿಯಲ್ಲೂ ಜೋರಾಗಿಯೇ ಇರುತ್ತದೆ. ಶಾರುಖ್ ಖಾನ್ ಅವರ ಮಾರುಕಟ್ಟೆ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಎರಡೂ ಸಿನಿಮಾ ತಂಡಗಳು ಮಾರುಕಟ್ಟೆ ಕಳೆದುಕೊಳ್ಳಲು ರೆಡಿ ಇಲ್ಲ. ಹೀಗಾಗಿ ಯಾರಾದರೂ ಕ್ಲ್ಯಾಶ್ ತಪ್ಪಿಸುವ ಆಲೋಚನೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

‘ಸಲಾರ್’ ಟ್ರೇಲರ್​ಗೂ ಕೆಲವರು ನೆಗೆಟಿವ್ ಆಗಿ ಮಾತನಾಡಿದ್ದಾರೆ. ಕಥೆ ‘ಉಗ್ರಂ’ ರೀತಿಯಲ್ಲಿ ಇರುವುದಕ್ಕೆ ಹಲವರು ಬೇಸರ ಹೊರಹಾಕಿದ್ದಾರೆ. ಹೀಗಾಗಿ, ಈ ಚಿತ್ರವನ್ನು ಯಾವ ರೀತಿಯಲ್ಲಿ ಪ್ರೇಕ್ಷಕರು ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Sat, 2 December 23