ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು

Bigg Boss: ಕಳೆದೆರಡು ವಾರದಿಂದ ವಿನಯ್ ಸಂತ ಸೇರಿಕೊಂಡು ಗೆಳೆಯರಾಗಿದ್ದ ತನಿಷಾ-ಕಾರ್ತಿಕ್ ವಿರುದ್ಧ ಮಾತನಾಡಿದ್ದ ಸಂಗೀತಾ, ಈಗ ಮತ್ತೆ ಪಾರ್ಟಿ ಬದಲಾಯಿಸಿದ್ದಾರೆ.

ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು
Follow us
ಮಂಜುನಾಥ ಸಿ.
|

Updated on: Dec 01, 2023 | 11:31 PM

ಬಿಗ್​ಬಾಸ್ (BiggBoss) ಮನೆಯಲ್ಲಿ ಆರಂಭದಲ್ಲಿ ಚೆನ್ನಾಗಿ ಆಡಿದ್ದ ಸಂಗೀತಾ ಶೃಂಗೇರಿ ಕರ್ನಾಟಕದ ಹೊಸ ಕ್ರಶ್ ಎಂದು ಕರೆಸಿಕೊಂಡಿದ್ದರು. ಆದರೆ ಬರ-ಬರುತ್ತಾ ಅವರು ತಮ್ಮ ನಿಜ ಬಣ್ಣ ತೋರಿಸಲಾರಂಭಿಸಿದರು. ಆರಂಭದಲ್ಲಿ ವಿನಯ್​ರ ಅಹಂಕಾರವನ್ನು, ದಾರ್ಷ್ಯವನ್ನು ದಿಟ್ಟವಾಗಿ ಎದುರಿಸಿದ ಸಂಗೀತಾ, ಎರಡು ವಾರದ ಹಿಂದೆ ವಿನಯ್ ತಂಡ ಸೇರಿಕೊಂಡು ಇಷ್ಟು ವಾರ ಸ್ನೇಹಿತರಾಗಿದ್ದ ತನಿಷಾ-ಕಾರ್ತಿಕ್ ಅವರನ್ನೇ ಗೇಲಿ ಮಾಡಲು, ಉರಿಸಲು ಆರಂಭಿಸಿದ್ದರು. ವಿನಯ್ ಅನ್ನು ಜಂಟಲ್​ಮ್ಯಾನ್ ಎಂದು ಸಹ ಹೊಗಳಿದ್ದರು. ಈಗ ಮತ್ತೆ ಪಾರ್ಟಿ ಬದಲಿಸಿದ್ದಾರೆ.

ಕಳೆದ ವಾರ ಸುದೀಪ್ ಅವರು ವಿನಯ್ ಹಾಗೂ ಕಾರ್ತಿಕ್ ನಡುವಲ್ಲಿ ವ್ಯತ್ಯಾಸ ಕೇಳಿದಾಗ, ಕಾರ್ತಿಕ್​ ಬಗ್ಗೆ ಋಣಾತ್ಮಕವಾಗಿ ಮಾತನಾಡಿದ್ದ ಸಂಗೀತಾ, ವಿನಯ್ ಬಹಳ ಸ್ವೀಟ್ ಜಂಟಲ್​ಮ್ಯಾನ್ ಎಂದು ಹೇಳಿದ್ದರು. ವಿನಯ್ ಅವರ ತಂಡದ ಜೊತೆಗೆ ಆಟವನ್ನು ಆಡಿ ಟಾಸ್ಕ್​ಗಳಲ್ಲಿ ಸಹ ಗೆದ್ದರು. ಅಂತಿಮವಾಗಿ ಕ್ಯಾಪ್ಟನ್ಸಿ ಟಾಸ್ಕ್​ ಬಂದಾಗ ವಿನಯ್, ಸಂಗಿತಾರನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟರು. ಇದು ಸಂಗೀತಾಗೆ ಸಹಿಸಿಕೊಳ್ಳಲಾಗಲಿಲ್ಲ.

ತಮ್ಮನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟಿದ್ದಕ್ಕೆ ತೀವ್ರ ಬೇಸರ ಹೊರಹಾಕಿದ ಸಂಗೀತಾ, ಒಬ್ಬೊಬ್ಬರೇ ಕುಳಿತು ಮಾತನಾಡಿಕೊಳ್ಳುತ್ತಾ, ನನ್ನನ್ನು ತುಳಿದಿದ್ದಾರೆ, ನಾನು ಮತ್ತೆ ಎದ್ದು ನಿಲ್ಲುತ್ತೇನೆ, ನನ್ನನ್ನು ತುಳಿದವರು ತಲೆ ಎತ್ತಿ ನೋಡಬೇಕು ಹಾಗೆ ಆಗುತ್ತೇನೆ ಎಂದರು. ಮುಂದುವರೆದು ಆನೆ ಎನಿಸಿಕೊಂಡವರೇ ನನ್ನನ್ನು ಕಾಂಪಿಟಿಷನ್ ಅಂದುಕೊಂಡು ಹೊರಗೆ ಹಾಕಿದ್ದಾರೆಂದರೆ ಅದು ಸಾಮಾನ್ಯ ಸಾಧನೆಯಲ್ಲ ಎಂದು ತಮ್ಮ ಸಾಧನೆಯನ್ನು ತಾವೇ ಹೇಳಿ ಮೆಚ್ಚಿಕೊಂಡರು.

ಇದನ್ನೂ ಓದಿ:ಬಿಗ್​ಬಾಸ್ ಮುಂದೆ ಕಣ್ಣೀರು ಹಾಕಿದ ವಿನಯ್

ಗಾಯಗೊಂಡು ಹೊರಗೆ ಹೋಗಿದ್ದ ತನಿಷಾ ಮತ್ತೆ ಬಂದಾಗ ತನಿಷಾ ಹಾಗೂ ಕಾರ್ತಿಕ್ ಜೊತೆ ಮಾತನಾಡುತ್ತಾ, ವಿನಯ್ ವಿರುದ್ಧ ದೂರು ಹೇಳಲು ಪ್ರಾರಂಭಿಸಿದರು. ತನ್ನನ್ನು ಕ್ಯಾಪ್ಟನ್ಸಿ ಟಾಸ್ಕ್​ನಿಂದ ವಿನಯ್ ಹೊರಗಿಟ್ಟ ಬಗ್ಗೆ ಸಂಗೀತಾ, ವಿನಯ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಗ ತನಿಷಾ, ನೀನೇ ತಾನೆ ಅವನು ಸ್ವೀಟ್, ಜಂಟಲ್​ಮ್ಯಾನ್ ಎಂದೆಲ್ಲ ಹೇಳಿದ್ದು ಎಂದು ನಗುತ್ತಲೇ ಟಾಂಗ್ ಕೊಟ್ಟರು, ಕಾರ್ತಿಕ್ ಸಹ, ಸುದೀಪ್ ಅವರು ಕೇಳಿದಾಗ ಸಂಗೀತಾ ನೀಡಿದ್ದ ಉತ್ತರವನ್ನು ನೆನಪು ಮಾಡಿದರು.

ವಿನಯ್ ಸಹ ನಮ್ರತಾ, ಸ್ನೇಹಿತ್, ಮೈಖಲ್ ಮುಂದೆ ಸಂಗೀತಾರ ಬಗ್ಗೆ ದೂರಲು ಪ್ರಾರಂಭ ಮಾಡಿದರು. ಆಕೆ ಅವಳು ಈ ಮನೆಯಲ್ಲಿ ಯಾವ ಟಾಸ್ಕ್ ಸರಿಯಾಗಿ ಆಡಿದ್ದಾಳೆ. ಒಂದೂ ಟಾಸ್ಕ್​ ಅನ್ನು ಸರಿಯಾಗಿ ಆಡಿ ಆಕೆ ಗೆದ್ದಿಲ್ಲ. ಸುಮ್ಮನೆ ಕೆಲಸಕ್ಕೆ ಬಾರದ ರೊಮ್ಯಾನ್ಸ್ ಮಾಡಿಕೊಂಡು ಓಡಾಡುತ್ತಿದ್ದಾಳೆ. ಒಮ್ಮೆ ಕಾರ್ತಿಕ್, ಒಮ್ಮೆ ಮೈಖಲ್ ಎಂದು ಹೀಗಳಿದರು. ಆ ಬಳೆ ವಿಷಯದಲ್ಲಿ ಸಹ ಅವರೇ ನನಗೆ ಸಿಟ್ಟು ಬರುವಂತೆ ಮಾಡಿ, ನನ್ನ ಬಾಯಿಂದ ಮಾತು ಆಡಿಸಿ, ಅದನ್ನು ಬೇರೆ ರೀತಿ ಬಿಂಬಿಸಿ ಮೈಲೇಜ್ ತೆಗೆದುಕೊಂಡು, ನನ್ನನ್ನು ಕೆಟ್ಟವನನ್ನಾಗಿ ಮಾಡಿದರು. ಯಾರು ಏನೇ ಅಂದುಕೊಂಡರು ನಾನು ನನ್ನ ಅಗ್ರೆಸ್ಸಿವ್ ಆಟ ಬಿಡಲ್ಲ, ನಾನು ಆಡುವುದೇ ಹೀಗೆ ಎಂದರು ವಿನಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್