‘ಬಳೆ ಹಾಕ್ಕೊಂಡಿಲ್ಲ ಎಂದಿದ್ದು ದೊಡ್ಡ ವಿಷಯ ಆಗೋಯ್ತು’; ವಿನಯ್​ಗೆ ಇನ್ನೂ ಅರಿವಾಗಿಲ್ಲ ಗಂಭೀರತೆ?

Bigg Boss Kannada: ಬಳೆ ವಿಚಾರದಲ್ಲಿ ವಿನಯ್ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದ್ದಾರೆ. ‘ನಾನು ಬಳೆ ಹಾಕಿಲ್ಲ’ ಎನ್ನುವ ಅವರ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು. ಈಗ ವಿನಯ್ ಅವರು ಮತ್ತೆ ಈ ವಿಚಾರ ತೆಗೆದಿದ್ದಾರೆ. ತಮ್ಮ ತಪ್ಪಿಲ್ಲ ಎಂಬರ್ಥದಲ್ಲಿ ಮಾತನಾಡಿದ್ದಾರೆ.

‘ಬಳೆ ಹಾಕ್ಕೊಂಡಿಲ್ಲ ಎಂದಿದ್ದು ದೊಡ್ಡ ವಿಷಯ ಆಗೋಯ್ತು’; ವಿನಯ್​ಗೆ ಇನ್ನೂ ಅರಿವಾಗಿಲ್ಲ ಗಂಭೀರತೆ?
Follow us
ರಾಜೇಶ್ ದುಗ್ಗುಮನೆ
|

Updated on: Dec 02, 2023 | 7:44 AM

‘ನಾನು ಕೈಗೆ ಬಳೆ ಹಾಕಿಕೊಂಡಿಲ್ಲ’ ಎಂದು ವಿನಯ್ ಹೇಳಿದ್ದ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಈ ವಿಚಾರದಲ್ಲಿ ಸುದೀಪ್ (Sudeep) ಅವರು ಕ್ಲಾಸ್ ತೆಗೆದುಕೊಂಡಿದ್ದರು. ಆ ಬಳಿಕ ವಿನಯ್ ಅವರು ಕ್ಷಮೆ ಕೇಳಿದ್ದರು. ಈ ಎಲ್ಲಾ ಘಟನೆ ನಡೆದು ಹಲವು ದಿನಗಳು ಕಳೆದಿವೆ. ಆದಾಗ್ಯೂ ವಿನಯ್ ಈ ವಿಚಾರವನ್ನು ಮರೆತಿಲ್ಲ. ಇದರಲ್ಲಿ ತಮ್ಮ ತಪ್ಪೇನು ಇಲ್ಲ ಎಂಬರ್ಥದಲ್ಲಿ ಮತ್ತೆ ಮಾತನಾಡಿದ್ದಾರೆ. ವಿನಯ್​ಗೆ ಇನ್ನೂ ಆ ವಿಷಯದ ಗಂಭೀರತೆ ಅರ್ಥವೇ ಆಗಲಿಲ್ಲವೇ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ವಿನಯ್ ಗೌಡ ಅವರು ಟಾಸ್ಕ್ ಆಡುವಾಗ ‘ನಾನು ಬಳೆ ಹಾಕಿಕೊಂಡಿಲ್ಲ’ ಎಂದು ಹೇಳಿದ್ದರು. ಇದನ್ನು ಸುದೀಪ್ ಪ್ರಶ್ನೆ ಮಾಡಿದ್ದರು. ‘ಬಳೆ ಬಲಹೀನತೆಯ ಸಂಕೇತ ಅಲ್ಲ’ ಎಂದು ಸುದೀಪ್ ಎಚ್ಚರಿಸಿದ್ದರು. ವಿನಯ್ ತಪ್ಪಾಯ್ತು ಎಂದು ಒಪ್ಪಿಕೊಂಡರು. ಆ ಬಳಿಕ ಅವರು ಡಲ್ ಆದರು. ಈಗ ಮತ್ತೆ ಈ ವಿಚಾರ ಮಾತನಾಡಿದ್ದಾರೆ ವಿನಯ್.

ಸಂಗೀತಾ ಅವರು ನಡೆದುಕೊಳ್ಳುತ್ತಿರುವ ರೀತಿ ವಿನಯ್​ಗೆ ಇಷ್ಟವಾಗುತ್ತಿಲ್ಲ. ಬಳೆ ವಿಚಾರದಲ್ಲೂ ಅವರದ್ದೇ ತಪ್ಪು ಎಂದಿದ್ದಾರೆ ವಿನಯ್. ‘ಬಳೆ ಹಾಕ್ಕೊಂಡಿಲ್ಲ ಎಂದಿದ್ದು ದೊಡ್ಡ ವಿಷಯ ಆಗೋಯ್ತು. ಅವಳು (ಸಂಗೀತಾ) ಬಳೆಗೆ ಡಿಸೈನ್ ಡಿಸೈನ್ ಹೂವು ಹಾಕಿ ತೋರಿಸಿದಳು. ಪ್ರವೋಕ್ ಮಾಡಿದ್ದೂ ಅವರೇ (ಸಂಗೀತಾ ಆ್ಯಂಡ್ ಟೀಂ), ನನ್ನನ್ನು ಕೆಟ್ಟವರಾಗಿ ಮಾಡಿದ್ದೂ ಅವರೇ. ನಂತರ ಆ ಮಾತನ್ನು ಇನ್ನೊಂದು ರೀತಿ ತೆಗೆದುಕೊಂಡು ಹೋದರು. ಅವಳು ವುಮನ್ ಕಾರ್ಡ್ ಪ್ಲೇ ಮಾಡಿದಳು. ಈ ಮನೆಯಲ್ಲಿ ಅವಳು ಯಾವ ಟಾಸ್ಕ್​ ಆಡಿದ್ದಾಳೆ? ಫೇಕ್ ರೊಮ್ಯಾಂಟಿಕ್ ದೃಶ್ಯ ಮಾಡಿಕೊಂಡು ಹಾಯಾಗಿದ್ದಾರೆ’ ಎಂದಿದ್ದಾರೆ ವಿನಯ್.

ಇದನ್ನೂ ಓದಿ: ಬಿಗ್​ಬಾಸ್: ಮತ್ತೆ ಪಾರ್ಟಿ ಬದಲಿಸಿದ ಸಂಗೀತಾ, ವಿನಯ್ ಜೊತೆ ಮತ್ತೆ ವೈರತ್ವ ಶುರು

ಸದ್ಯ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ವಿನಯ್​ಗೆ ಇನ್ನೂ ಈ ವಿಷಯದ ಗಂಭೀರತೆ ಅರ್ಥ ಆದಂತೆ ಇಲ್ಲ ಎಂದು ಅನೇಕರು ಹೇಳಿದ್ದಾರೆ. ಸದ್ಯ ವೀಕೆಂಡ್ ಬಂದಿದೆ. ಸುದೀಪ್ ಯಾವ ವಿಚಾರಗಳ ಬಗ್ಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ